Home Bibles ಯೋನ 4:3 · ಕನ್ನಡ ಬೈಬಲ್
ಯೋನ 4:3 · ಕನ್ನಡ ಬೈಬಲ್

ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.

Cross references

ಅಂಕೆಗಳ ಪುಸ್ತಕ 11:15

ನೀನು ಈ ಪ್ರಕಾರ ನನಗೆ ಮಾಡುವದಾ ಗಿದ್ದು ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವ ನಾದರೆ ನನ್ನ ಕೇಡನ್ನು ನೋಡದಂತೆ ನನ್ನನ್ನು ಕೊಂದುಬಿಡು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

ಅಂಕೆಗಳ ಪುಸ್ತಕ 20:3

ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ ಹೇಳಿದ್ದೇನಂದರೆ--ನಮ್ಮ ಸಹೋದರರು ಕರ್ತನ ಮುಂದೆ ಸತ್ತುಹೋದಾಗಲೇ ನಾವು ಸಹ ಸತ್ತು ಹೋಗಿದ್ದರೆ ಚೆನ್ನಾಗಿತ್ತು.

1 ಅರಸುಗಳು 19:4

ಆದರೆ ಅವನು ಅರಣ್ಯದಲ್ಲಿ ಒಂದು ದಿವಸದ ಪ್ರಯಾಣ ಮಾಡಿ ಷಿಟ್ಟೀಮ್‌ ಮರದ ಕೆಳಗೆ ಕುಳಿತು ತಾನು ಸಾಯಬೇಕೆಂದು ಬೇಡಿ ಕೊಂಡು--ಕರ್ತನೇ, ಈಗ ಸಾಕು; ನನ್ನ ಪ್ರಾಣವನ್ನು ತೆಗೆದುಕೋ. ಯಾಕಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ ಅಂದನು.

ಯೋಬ 3:20

ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ?

ಯೋಬ 6:8

ನನ್ನ ವಿಜ್ಞಾಪನೆಯನ್ನು ದೇವರು ಲಾಲಿಸಿ, ನಾನು ನಿರೀಕ್ಷಿಸಿದ್ದನ್ನು ಆತನು ಕೊಟ್ಟರೆ ಲೇಸು.

ಯೋಬ 7:15

ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ.

ಯೋಬ 7:16

ನಾನು ಬೇಸರಗೊಂಡಿದ್ದೇನೆ; ನಿತ್ಯವಾಗಿ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟು ಬಿಡು; ಯಾಕಂದರೆ ನನ್ನ ದಿವಸಗಳು ವ್ಯರ್ಥವಾಗಿವೆ.

ಸಭಾಪ್ರಸಂಗಿ 7:1

ಅಮೂಲ್ಯವಾದ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಒಬ್ಬನ ಜನ್ಮದಿನಕ್ಕಿಂತ ಮರಣದ ದಿನವೇ ಮೇಲು.

ಸಭಾಪ್ರಸಂಗಿ 7:9

ಕೋಪಿಸಿಕೊಳ್ಳು ವದಕ್ಕೆ ನಿನ್ನ ಮನಸ್ಸಿನಲ್ಲಿ ಆತುರಪಡದಿರು; ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.

ಯೆರೆಮಿಯ 20:14

ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.

ಯೋನ 4:8

ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.

1 ಕೊರಿಂಥದವರಿಗೆ 9:15

ಆದರೆ ಇವುಗಳಲ್ಲಿ ಒಂದನ್ನೂ ನಾನು ಉಪ ಯೋಗಿಸಲಿಲ್ಲ; ಇಲ್ಲವೆ ನನಗೆ ಹಾಗೆ ಆಗಲೆಂದು ನಾನು ಈ ವಿಷಯಗಳನ್ನು ಬರೆಯಲೂ ಇಲ್ಲ; ಯಾಕಂದರೆ ನಾನು ಹೆಚ್ಚಳಪಡುವದನ್ನು ಯಾವ ನಾದರೂ ವ್ಯರ್ಥ ಮಾಡುವದಕ್ಕಿಂತ ಸಾಯುವದೇ ನನಗೆ ಮೇಲು.

ಫಿಲಿಪ್ಪಿಯವರಿಗೆ 1:21

ನನಗಂತೂ ಬದುಕುವದೆಂದರೆ ಕ್ರಿಸ್ತನೇ, ಸಾಯು ವದು ಲಾಭವೇ.

Interlinear

Choose Theme