Home Bibles ☰ Books ಸಭಾಪ್ರಸಂಗಿ 2:16 · ಕನ್ನಡ ಬೈಬಲ್
ಸಭಾಪ್ರಸಂಗಿ 2:16 · ಕನ್ನಡ ಬೈಬಲ್

ಮೂಢನಿಗಿಂತ ಜ್ಞಾನವಂತನ ಜ್ಞಾಪ ಕವು ಎಂದಿಗೂ ಇರುವದಿಲ್ಲ; ಈಗ ಇರುವದು ಬರುವ ದಿವಸಗಳಲ್ಲಿ ಮರೆಯಲ್ಪಡುತ್ತದೆ. ಮೂಢನಂತೆ ಜ್ಞಾನಿಯೂ ಸಾಯುವದು ಹೇಗೆ?

Cross references

ನಿರ್ಗಮಕಾಂಡ 1:6

ಯೋಸೇಫನೂ ಅವನ ಸಹೋದರ ರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.

ನಿರ್ಗಮಕಾಂಡ 1:8

ಆಗ ಯೋಸೇಫನನ್ನು ಅರಿಯದ ಬೇರೊಬ್ಬನು ಐಗುಪ್ತಕ್ಕೆ ಅರಸನಾದನು.

2 ಸಮುವೇಲ 3:33

ಅರಸನು ಅಬ್ನೇರನಿಗೋಸ್ಕರ ಗೋಳಾಡಿ ಹೇಳಿದ್ದೇನಂದರೆ--

ಕೀರ್ತನೆಗಳು 49:10

ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ.

ಕೀರ್ತನೆಗಳು 88:12

ಕತ್ತಲೆಯಲ್ಲಿ ನಿನ್ನ ಅದ್ಭುತಗಳೂ ಮರೆ ಯುವ ದೇಶದಲ್ಲಿ ನಿನ್ನ ನೀತಿಯೂ ತಿಳಿಯಲ್ಪಡು ವದೋ?

ಕೀರ್ತನೆಗಳು 103:16

ಆದಾಗ್ಯೂ ಗಾಳಿಯು ಅದರ ಮೇಲೆ ಬೀಸುತ್ತಲೇ ಅದು ಇಲ್ಲದೆ ಹೋಗುತ್ತದೆ; ಅದರ ಸ್ಥಳವು ಅದನ್ನು ಇನ್ನು ಅರಿಯದು.

ಸಾಮೇತಿಗಳು 14:8

ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ.

ಸಭಾಪ್ರಸಂಗಿ 1:11

ಮೊದಲಿನ ಸಂಗತಿಗಳ ಜ್ಞಾಪ ಕವು ಇಲ್ಲ; ಮುಂದಿನ ಸಂಗತಿಗಳ ಜ್ಞಾಪಕವು ಅವುಗಳ ಮುಂದಿನವರಿಗೆ ಇರುವದಿಲ್ಲ.

ಸಭಾಪ್ರಸಂಗಿ 2:14

ಜ್ಞಾನಿಯ ಕಣ್ಣುಗಳು ಅವನ ತಲೆಯಲ್ಲಿರುತ್ತವೆ. ಬುದ್ಧಿಹೀನನು ಕತ್ತಲೆಯಲ್ಲಿ ನಡೆಯುತ್ತಾನೆ; ಅವರೆಲ್ಲರಿಗೂ ಒಂದೇ ಗತಿಯು ಸಂಭವಿಸುವದೆಂದು ನನ್ನಷ್ಟಕ್ಕೆ ನಾನೇ ಗ್ರಹಿಸಿ ಕೊಂಡೆನು.

ಸಭಾಪ್ರಸಂಗಿ 6:8

ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಏನಿದೆ? ಜೀವಿತರ ಮುಂದೆ ನಡೆಯುವದಕ್ಕೆ ತಿಳಿದ ಬಡವನಿಗೆ ಏನಿದೆ?

ಸಭಾಪ್ರಸಂಗಿ 9:5

ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿ ದ್ದಾರೆ; ಆದರೆ ಸತ್ತವರಿಗೆ ಏನೂ ತಿಳಿಯದು. ಇಲ್ಲವೆ ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇರದು. ಅವರ ಜ್ಞಾಪಕವು ಮರೆತುಹೋಗಿದೆ.

ಮಲಾಕಿ 3:16

ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು.

ಹೆಬ್ರಿಯರಿಗೆ 9:27

ಒಂದೇ ಸಾರಿ ಸಾಯುವದೂ ತರುವಾಯ ನ್ಯಾಯತೀರ್ಪೂ ಮನುಷ್ಯರಿಗೆ ನೇಮಕವಾಗಿದೆ.ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.

Interlinear

Choose Theme