Home Bibles ನಿರ್ಗಮಕಾಂಡ 1:8 · ಕನ್ನಡ ಬೈಬಲ್
ನಿರ್ಗಮಕಾಂಡ 1:8 · ಕನ್ನಡ ಬೈಬಲ್

ಆಗ ಯೋಸೇಫನನ್ನು ಅರಿಯದ ಬೇರೊಬ್ಬನು ಐಗುಪ್ತಕ್ಕೆ ಅರಸನಾದನು.

Cross references

ನಿರ್ಗಮಕಾಂಡ 3:7

ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.

ನಿರ್ಗಮಕಾಂಡ 3:9

ಆದದರಿಂದ ಈಗ ಕೇಳು, ಇಸ್ರಾಯೇಲ್‌ ಮಕ್ಕಳ ಕೂಗು ನನ್ನ ಬಳಿಗೆ ಬಂದಿತು; ಐಗುಪ್ತ್ಯರು ಅವರನ್ನು ಬಾಧಿಸುವ ಬಾಧೆಯನ್ನು ನಾನು ನೋಡಿದ್ದೇನೆ.

ನಿರ್ಗಮಕಾಂಡ 3:16

ಆತನು--ನೀನು ಹೋಗಿ ಇಸ್ರಾಯೇಲ್‌ ಹಿರಿಯ ರನ್ನು ಕೂಡಿಸಿ ಅವರಿಗೆ--ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಕರ್ತನು ನನಗೆ ಕಾಣಿಸಿಕೊಂಡು--ನಿಮ್ಮನ್ನೂ ಐಗುಪ್ತದಲ್ಲಿ ನಿಮಗೆ ಮಾಡಿದ್ದನ್ನೂ ನಿಶ್ಚಯವಾಗಿ ನಾನು ನೋಡಿದ್ದೇನೆ.

ನ್ಯಾಯಾಧಿಪತಿಗಳು 2:10

ಆ ಸಂತತಿಯವರೆಲ್ಲರೂ ತಮ್ಮ ತಂದೆಗಳ ಬಳಿಯಲ್ಲಿ ಕೂಡಿಸಿಕೊಳ್ಳಲ್ಪಟ್ಟರು. ಅವರ ತರುವಾಯ ಕರ್ತನನ್ನೂ ಇಸ್ರಾಯೇಲ್ಯರಿಗೋಸ್ಕರ ಮಾಡಿದ ಆತನ ಕಾರ್ಯ ಗಳನ್ನೂ ಅರಿಯದೆ ಇರುವ ಮತ್ತೊಂದು ಸಂತತಿ ಎದ್ದಿತು.

ಸಭಾಪ್ರಸಂಗಿ 2:18

ಹೌದು, ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆಮಾಡಿದೆನು; ನನ್ನ ತರು ವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕು.

ಸಭಾಪ್ರಸಂಗಿ 9:15

ಆಗ ಅದ ರಲ್ಲಿ ಒಬ್ಬ ಜ್ಞಾನಿಯಾದ ಬಡಮನುಷ್ಯನು ಕಾಣಿಸಿ ಕೊಂಡು ಅವನು ತನ್ನ ಜ್ಞಾನದಿಂದ ಆ ಪಟ್ಟಣವನ್ನು ತಪ್ಪಿಸಿದನು. ಆದರೂ ಆ ಬಡಮನುಷ್ಯನನ್ನು ಯಾವನೂ ಜ್ಞಾಪಕಮಾಡಿಕೊಳ್ಳಲಿಲ್ಲ.

ಅಪೋಸ್ತಲರ ಕೃತ್ಯಗಳು 7:18

ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳಿಕೆಗೆ ಬರುವ ವರೆಗೆ ಆ ಜನರು ಐಗುಪ್ತ ದೇಶದಲ್ಲಿ ಅಭಿವೃದ್ಧಿಯಾಗಿ ಹೆಚ್ಚಿದರು.

Interlinear

Choose Theme