Cross references
ಆದಿಕಾಂಡ 50:24
ಇದಲ್ಲದೆ ಯೋಸೇಫನು ತನ್ನ ಸಹೋದ ರರಿಗೆ--ನಾನು ಸತ್ತ ಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದೊಳಗಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಹೋಗಮಾಡುವನು ಅಂದನು.
ಆದಿಕಾಂಡ 50:26
ಯೋಸೇಫನು ನೂರ ಹತ್ತು ವರುಷದವನಾಗಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ ಐಗುಪ್ತದಲ್ಲಿ ಪೆಟ್ಟಿಗೆ ಯೊಳೆಗೆ ಇಟ್ಟರು.
ನ್ಯಾಯಾಧಿಪತಿಗಳು 2:10
ಆ ಸಂತತಿಯವರೆಲ್ಲರೂ ತಮ್ಮ ತಂದೆಗಳ ಬಳಿಯಲ್ಲಿ ಕೂಡಿಸಿಕೊಳ್ಳಲ್ಪಟ್ಟರು. ಅವರ ತರುವಾಯ ಕರ್ತನನ್ನೂ ಇಸ್ರಾಯೇಲ್ಯರಿಗೋಸ್ಕರ ಮಾಡಿದ ಆತನ ಕಾರ್ಯ ಗಳನ್ನೂ ಅರಿಯದೆ ಇರುವ ಮತ್ತೊಂದು ಸಂತತಿ ಎದ್ದಿತು.
ಸಭಾಪ್ರಸಂಗಿ 1:4
ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ.
ಅಪೋಸ್ತಲರ ಕೃತ್ಯಗಳು 7:14
ಆಮೇಲೆ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲಾ ಬಂಧು ಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು ಕರೆ ಯಿಸಿಕೊಂಡನು.