ನೀನು ಒಂದು ಪಟ್ಟಣಕ್ಕೆ ವಿರೋಧವಾಗಿ ಯುದ್ಧ ಮಾಡಿ ಅದನ್ನು ಹಿಡಿಯುವಹಾಗೆ ಬಹಳದಿವಸ ಮುತ್ತಿಗೆ ಹಾಕಿದರೆ ಮರಗಳನ್ನು ಕೊಡಲಿತಾಗಿಸಿ ಕೆಡಿಸಬೇಡ. ಯಾಕಂದರೆ ಅವುಗಳ ಹಣ್ಣನ್ನು ನೀನು ತಿನ್ನಬಹುದು. ಅವುಗಳನ್ನು ಮುತ್ತಿಗೆಯಲ್ಲಿ ನಿನಗೆ ಸಹಾಯವಾಗುವದ ಕ್ಕೋಸ್ಕರ ಕಡಿದುಹಾಕಬಾರದು. ಹೊಲದ ಮರಗಳು ಮನುಷ್ಯರ ಜೀವಕ್ಕಾಗಿವೆ.ಆಹಾರಕ್ಕಾಗದ ಮರ ಗಳೆಂದು ನಿನಗೆ ತಿಳಿದಿರುವ ಮರಗಳನ್ನು ಮಾತ್ರ ಕೆಡಿಸಿ ಕಡಿದುಹಾಕಿ ನಿನ್ನ ಸಂಗಡ ಯುದ್ಧಮಾಡುವ ಪಟ್ಟಣಕ್ಕೆ ವಿರೋಧವಾಗಿ ಅದು ಬೀಳುವ ತನಕ ಮುತ್ತಿಗೆ ಹಾಕಬಹುದು.
Cross references
ಆದರೆ ಐಗುಪ್ತ್ಯರು ನಮಗೆ ಕೇಡನ್ನುಮಾಡಿ ನಮ್ಮನ್ನು ಕುಂದಿಸಿ ಕಠಿಣವಾದ ಸೇವೆಯನ್ನು ನಮ್ಮ ಮೇಲೆ ಹೊರಿಸಿದರು.
ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ಆದು ಕೊಳ್ಳತಕ್ಕ ಎಲ್ಲಾ ಪಟ್ಟಣಗಳನ್ನೂ ಹೊಡೆದು ಬಿಟ್ಟು ಉತ್ತಮವಾದ ಎಲ್ಲಾ ಮರಗಳನ್ನು ಬೀಳಮಾಡಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ ಉತ್ತಮವಾದ ಭೂಮಿಯಲ್ಲಿ ರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ತುಂಬಿಸಿ ಕೆಡಿಸ ಬೇಕು ಅಂದನು.
ಇದಲ್ಲದೆ ಅವರು ಪಟ್ಟಣ ಗಳನ್ನು ಕೆಡವಿಹಾಕಿ ಉತ್ತಮವಾದ ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಎಲ್ಲಾ ಉತ್ತಮವಾದ ಮರಗಳನ್ನು ಬೀಳಮಾಡಿದರು. ಕೀರ್ಹರೆಷೆತಿನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿ ಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನೂ ಸುತ್ತಿ ಕೊಂಡು ಹೊಡೆದುಬಿಟ್ಟರು.
ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು.
ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.
ಆಗ ಆತನು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಅದರಲ್ಲಿ ಕಾಣಲಿಲ್ಲ. ಆಗ ಆತನು ಅದಕ್ಕೆ--ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ ಅಂದನು. ತಕ್ಷಣವೇ ಆ ಅಂಜೂರದ ಮರವು ಒಣಗಿ ಹೋಯಿತು.
ಆಗ ಅವನು ತನ್ನ ದ್ರಾಕ್ಷೇತೋಟ ಮಾಡು ವವನಿಗೆ--ಇಗೋ, ಈ ಮೂರು ವರುಷಗಳಿಂದ ನಾನು ಈ ಅಂಜೂರದ ಮರದಲ್ಲಿ ಫಲ ಹುಡುಕಿದರೂ ಒಂದನ್ನೂ ಕಂಡುಕೊಳ್ಳಲಿಲ್ಲ; ಇದನ್ನು ಕಡಿದುಹಾಕು; ಭೂಮಿಗೆ ಇದು ಯಾಕೆ ಭಾರವಾಗಿರಬೇಕು ಎಂದು ಹೇಳಿದನು.
ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.