Home Bibles ☰ Books ದ್ವಿತೀಯೋಪದೇಶಕಾಂಡ 20:20 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 20:20 · ಕನ್ನಡ ಬೈಬಲ್

ಆಹಾರಕ್ಕಾಗದ ಮರ ಗಳೆಂದು ನಿನಗೆ ತಿಳಿದಿರುವ ಮರಗಳನ್ನು ಮಾತ್ರ ಕೆಡಿಸಿ ಕಡಿದುಹಾಕಿ ನಿನ್ನ ಸಂಗಡ ಯುದ್ಧಮಾಡುವ ಪಟ್ಟಣಕ್ಕೆ ವಿರೋಧವಾಗಿ ಅದು ಬೀಳುವ ತನಕ ಮುತ್ತಿಗೆ ಹಾಕಬಹುದು.

Cross references

ದ್ವಿತೀಯೋಪದೇಶಕಾಂಡ 1:28

ನಾವು ಎಲ್ಲಿಗೆ ಹೋಗೋಣ? ನಮ್ಮ ಸಹೋದರರು--ಆ ಜನರು ನಮಗಿಂತ ದೊಡ್ಡವರೂ ಉದ್ದವಾದವರೂ; ಪಟ್ಟಣ ಗಳು ದೊಡ್ಡವುಗಳೂ ಆಕಾಶದ ಎತ್ತರಕ್ಕೂ ಗೋಡೆ ಯುಳ್ಳವುಗಳೂ; ಇದಲ್ಲದೆ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ ಎಂದು ಹೇಳಿದಿರಿ.

2 ಅರಸುಗಳು 3:19

ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ಆದು ಕೊಳ್ಳತಕ್ಕ ಎಲ್ಲಾ ಪಟ್ಟಣಗಳನ್ನೂ ಹೊಡೆದು ಬಿಟ್ಟು ಉತ್ತಮವಾದ ಎಲ್ಲಾ ಮರಗಳನ್ನು ಬೀಳಮಾಡಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ ಉತ್ತಮವಾದ ಭೂಮಿಯಲ್ಲಿ ರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ತುಂಬಿಸಿ ಕೆಡಿಸ ಬೇಕು ಅಂದನು.

2 ದಿನವೃತ್ತಾಂತ 26:15

ಇದಲ್ಲದೆ ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ಎಸೆಯುವ ನಿಮಿತ್ತ ಬುರುಜುಗಳ ಮೇಲೆಯೂ ಮಣ್ಣು ದಿಬ್ಬಗಳ ಮೇಲೆಯೂ ಇರಲು ಪ್ರವೀಣರಿಂದ ಮಾಡಿದ ಯಂತ್ರಗಳನ್ನೂ ಯೆರೂಸಲೇಮಿನಲ್ಲಿ ಮಾಡಿಸಿದನು. ಆದದರಿಂದ ಅವನ ಹೆಸರು ಬಹಳ ದೂರದ ವರೆಗೆ ಪ್ರಸಿದ್ಧಿಯಾಯಿತು. ಬಹು ಬಲವುಳ್ಳ ವನಾಗುವ ಪರ್ಯಂತರ ಅವನು ಬಹು ಆಶ್ಚರ್ಯ ವಾಗಿ ಸಹಾಯ ಹೊಂದಿದನು.

ಸಭಾಪ್ರಸಂಗಿ 9:14

ಅಲ್ಲಿ ಒಂದು ಸಣ್ಣ ನಗರವಿತ್ತು; ಅದರಲ್ಲಿ ಕೆಲವು ಮನುಷ್ಯರಿದ್ದರು; ಆಗ ಅಲ್ಲಿಗೆ ಒಬ್ಬ ಮಹಾಅರಸನು ಬಂದು ಅದನ್ನು ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.

ಯೆಶಾಯ 37:33

ಆದದರಿಂದ ಕರ್ತನು ಅಶ್ಶೂರದ ಅರಸನ ವಿಷಯವಾಗಿ ಹೇಳುವ ದೇನಂದರೆ ಅವನು ಈ ಪಟ್ಟಣಕ್ಕೆ ಬರಲಾರನು ಬಾಣವನ್ನು ಎಸೆಯನು, ಇಲ್ಲವೇ ಅದರ ಮುಂದೆ ಗುರಾಣಿಯೊಂದಿಗೆ ಬರಲಾರನು ಇಲ್ಲವೆ ಅದಕ್ಕೆ ವಿರೋಧವಾಗಿ ಮಣ್ಣಿನ ದಿಬ್ಬವನ್ನು ಹಾಕುವದಿಲ್ಲ.

ಯೆರೆಮಿಯ 6:6

ಪರದೇಶಿಯನ್ನೂ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಸಂಕಟಪಡಿಸದೆ ಈ ಸ್ಥಳದಲ್ಲಿ ಅಪರಾಧ ವಿಲ್ಲದ ರಕ್ತವನ್ನು ಚೆಲ್ಲದಿದ್ದರೆ ಇಲ್ಲವೆ ನಿಮ್ಮ ಕೇಡಿಗಾಗಿ ಬೇರೆ ದೇವರುಗಳನ್ನು ಹಿಂಬಾಲಿಸದಿದ್ದರೆ

ಯೆರೆಮಿಯ 33:4

ಆದಾಗ್ಯೂ ಯೆಹೂದದ ಅರಸನಾದ ಚಿದ್ಕೀಯನೇ, ಕರ್ತನ ವಾಕ್ಯ ವನ್ನು ಕೇಳು. ಕರ್ತನು ಹೀಗೆ ಹೇಳುತ್ತಾನೆ--ನೀನು ಕತ್ತಿಯಿಂದ ಸಾಯುವದಿಲ್ಲ.

ಯೆಹೆಜ್ಕೇಲ 17:17

ಇಲ್ಲವೆ ಫರೋಹನೂ ಅವನ ಮಹಾ ಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹಳ ಜನ ರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಕೋಟೆಗಳನ್ನೂ ಕಟ್ಟುವಾಗಲೂ ಅವನಿಗೆ ಯುದ್ಧದಲ್ಲಿ ಸಹಾಯ ಮಾಡುವದಿಲ್ಲ.

Interlinear

Choose Theme