Home Bibles ದ್ವಿತೀಯೋಪದೇಶಕಾಂಡ 16:9 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 16:9 · ಕನ್ನಡ ಬೈಬಲ್

ಏಳು ವಾರಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು; ಪೈರಿನಲ್ಲಿ ಕುಡುಗೋಲು ಮೊದಲು ಹಾಕಿದಂದಿನಿಂದ ಏಳು ವಾರಗಳನ್ನು ಎಣಿಸಿಕೊಳ್ಳುವದಕ್ಕೆ ಪ್ರಾರಂಭಿಸ ಬೇಕು.

Cross references

ನಿರ್ಗಮಕಾಂಡ 23:16

ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು.

ನಿರ್ಗಮಕಾಂಡ 34:22

ಪ್ರಥಮ ಗೋದಿ ಸುಗ್ಗಿಯ ವಾರಗಳ ಹಬ್ಬವನ್ನೂ ಸಂವತ್ಸರದ ಕೊನೆಯಲ್ಲಿ (ಬೆಳೆ) ಸಂಗ್ರಹದ ಹಬ್ಬ ವನ್ನೂ ಆಚರಿಸಬೇಕು.

ಲೇವ್ಯಕಾಂಡ 23:15

ಸಬ್ಬತ್ತಿನ ಮಾರನೆಯ ದಿನ ನೀವು ಆಡಿಸುವ ಬಲಿಯಾದ ಸಿವುಡನ್ನು ತಂದ ದಿನದಿಂದ ಏಳು ಸಬ್ಬತ್ತು ಗಳು ಪೂರ್ಣವಾಗುವ ವರೆಗೆ ಲೆಕ್ಕಿಸಬೇಕು.

ಅಂಕೆಗಳ ಪುಸ್ತಕ 28:26

ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಕರ್ತ ನಿಗೆ ನಿಮ್ಮ ವಾರಗಳಲ್ಲಿ ಹೊಸ ಆಹಾರದ ಅರ್ಪಣೆ ಯನ್ನು ಅರ್ಪಿಸುವಾಗ ನಿಮಗೆ ಪರಿಶುದ್ಧವಾದ ಸಭೆ ಇರಬೇಕು; ಯಾವ ಕೆಲಸವನ್ನಾದರೂ ಮಾಡಬಾರದು.

ದ್ವಿತೀಯೋಪದೇಶಕಾಂಡ 16:10

ಆಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಪ್ರಕಾರ ನಿನ್ನ ಕೈಕೊಡುವ ಉಚಿತವಾದ ಕಾಣಿಕೆಯ ಮೇರೆಗೆ ನಿನ್ನ ದೇವರಾದ ಕರ್ತನಿಗೆ ವಾರಗಳ ಹಬ್ಬಮಾಡಬೇಕು.

ದ್ವಿತೀಯೋಪದೇಶಕಾಂಡ 16:16

ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.

2 ದಿನವೃತ್ತಾಂತ 8:13

ದಿನಂಪ್ರತಿಯಲ್ಲಿ ಮೋಶೆಯ ಆಜ್ಞೆ ಪ್ರಕಾರ ಸಬ್ಬ ತ್ತುಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ವರುಷದಲ್ಲಿ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿ ಇಲ್ಲದ ರೊಟ್ಟಿಯ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಪರ್ಣಶಾಲೆಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು.

ಅಪೋಸ್ತಲರ ಕೃತ್ಯಗಳು 2:1

ಪಂಚಾಶತ್ತಮ ದಿನವು ಪೂರ್ಣವಾಗಿ ಬಂದಾಗ ಅವರೆಲ್ಲರೂ ಒಂದೇ ಮನಸ್ಸಿ ನಿಂದ ಒಂದೇ ಸ್ಥಳದಲ್ಲಿ ಇದ್ದರು.

1 ಕೊರಿಂಥದವರಿಗೆ 16:8

ಪಂಚಾ ಶತ್ತಮ ದಿನದ ವರೆಗೆ ನಾನು ಎಫೆಸದಲ್ಲಿ ಇರುವೆನು.

ಹೆಬ್ರಿಯರಿಗೆ 2:1

ಆದದರಿಂದ ನಾವು ಕೇಳಿದ ಸಂಗತಿಗಳಿಗೆ ಯಾವಾಗಲಾದರೂ ಜಾರಿ ಹೋದೇ ವೆಂದು ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿ ರತಕ್ಕದ್ದು.

Interlinear

Choose Theme