Home Bibles ಲೇವ್ಯಕಾಂಡ 23:15 · ಕನ್ನಡ ಬೈಬಲ್
ಲೇವ್ಯಕಾಂಡ 23:15 · ಕನ್ನಡ ಬೈಬಲ್

ಸಬ್ಬತ್ತಿನ ಮಾರನೆಯ ದಿನ ನೀವು ಆಡಿಸುವ ಬಲಿಯಾದ ಸಿವುಡನ್ನು ತಂದ ದಿನದಿಂದ ಏಳು ಸಬ್ಬತ್ತು ಗಳು ಪೂರ್ಣವಾಗುವ ವರೆಗೆ ಲೆಕ್ಕಿಸಬೇಕು.

Cross references

ನಿರ್ಗಮಕಾಂಡ 34:22

ಪ್ರಥಮ ಗೋದಿ ಸುಗ್ಗಿಯ ವಾರಗಳ ಹಬ್ಬವನ್ನೂ ಸಂವತ್ಸರದ ಕೊನೆಯಲ್ಲಿ (ಬೆಳೆ) ಸಂಗ್ರಹದ ಹಬ್ಬ ವನ್ನೂ ಆಚರಿಸಬೇಕು.

ಲೇವ್ಯಕಾಂಡ 23:10

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.

ಲೇವ್ಯಕಾಂಡ 25:8

ಹೀಗೆ ಏಳು ವರುಷಗಳನ್ನು ಏಳು ಸಾರಿ ಏಳು ಸಬ್ಬತ್ತಿನ ವರುಷಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು. ಏಳು ಸಬ್ಬತ್ತಿನ ವರುಷಗಳ ಕಾಲಾವಧಿಯು ನಿನಗೆ ನಾಲ್ವತ್ತೊಂಭತ್ತು ವರುಷಗಳಾಗಿರುವವು.

ಅಂಕೆಗಳ ಪುಸ್ತಕ 28:26

ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಕರ್ತ ನಿಗೆ ನಿಮ್ಮ ವಾರಗಳಲ್ಲಿ ಹೊಸ ಆಹಾರದ ಅರ್ಪಣೆ ಯನ್ನು ಅರ್ಪಿಸುವಾಗ ನಿಮಗೆ ಪರಿಶುದ್ಧವಾದ ಸಭೆ ಇರಬೇಕು; ಯಾವ ಕೆಲಸವನ್ನಾದರೂ ಮಾಡಬಾರದು.

ದ್ವಿತೀಯೋಪದೇಶಕಾಂಡ 16:9

ಏಳು ವಾರಗಳನ್ನು ನಿನಗಾಗಿ ಎಣಿಸಿಕೊಳ್ಳಬೇಕು; ಪೈರಿನಲ್ಲಿ ಕುಡುಗೋಲು ಮೊದಲು ಹಾಕಿದಂದಿನಿಂದ ಏಳು ವಾರಗಳನ್ನು ಎಣಿಸಿಕೊಳ್ಳುವದಕ್ಕೆ ಪ್ರಾರಂಭಿಸ ಬೇಕು.

ದ್ವಿತೀಯೋಪದೇಶಕಾಂಡ 16:10

ಆಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಶೀರ್ವದಿಸಿದ ಪ್ರಕಾರ ನಿನ್ನ ಕೈಕೊಡುವ ಉಚಿತವಾದ ಕಾಣಿಕೆಯ ಮೇರೆಗೆ ನಿನ್ನ ದೇವರಾದ ಕರ್ತನಿಗೆ ವಾರಗಳ ಹಬ್ಬಮಾಡಬೇಕು.

Interlinear

Choose Theme