Home Bibles ☰ Books ದ್ವಿತೀಯೋಪದೇಶಕಾಂಡ 16:8 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 16:8 · ಕನ್ನಡ ಬೈಬಲ್

ಆರು ದಿವಸ ಹುಳಿ ಇಲ್ಲದ ರೊಟ್ಟಿ ಗಳನ್ನು ತಿನ್ನಬೇಕು; ಏಳನೇ ದಿನದಲ್ಲಿ ನಿನ್ನ ದೇವರಾದ ಕರ್ತನಿಗೆ ವಿಶೇಷ ಸಭೆ ಸೇರಬೇಕು; ಅದರಲ್ಲಿ ಕೆಲಸ ಮಾಡಬಾರದು.

Cross references

ನಿರ್ಗಮಕಾಂಡ 12:15

ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.

ನಿರ್ಗಮಕಾಂಡ 13:6

ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಕರ್ತನಿಗೆ ಹಬ್ಬವನ್ನಾಚ ರಿಸಬೇಕು.

ಲೇವ್ಯಕಾಂಡ 23:6

ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಕರ್ತನಿಗೆ ಹುಳಿ ಯಿಲ್ಲದ ರೊಟ್ಟಿಯ ಹಬ್ಬವಿರುವದು; ಏಳು ದಿವಸಗಳ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನತಕ್ಕದ್ದು.

ಲೇವ್ಯಕಾಂಡ 23:36

ಏಳು ದಿವಸ ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ಕರ್ತನಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿ ಶುದ್ಧ ಕೂಟವಾಗಿರುವದು; ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು; ಅದೊಂದು ಗಂಭೀರ ಸಭೆಯಾಗಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.

ಅಂಕೆಗಳ ಪುಸ್ತಕ 28:17

ಆ ತಿಂಗಳಿನ ಹದಿನೈದನೇ ದಿವಸವು ಹಬ್ಬವಾಗಿದೆ; ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.

2 ದಿನವೃತ್ತಾಂತ 7:9

ಎಂಟನೇ ದಿವಸದಲ್ಲಿ ಪರಿಶುದ್ಧ ಸಂಘವನ್ನು ಮಾಡಿಕೊಂಡರು; ಬಲಿಪೀಠದ ಪ್ರತಿಷ್ಠೆಯನ್ನೂ ಹಬ್ಬವನ್ನೂ ಏಳು ದಿವಸ ಕೈಕೊಂಡರು;

ನೆಹೆಮ್ಯ 8:18

ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.

ಯೋವೇಲ 1:14

ಉಪವಾಸವನ್ನು ಪರಿಶುದ್ಧ ಮಾಡಿರಿ; ಪವಿತ್ರ ಸಂಘವನ್ನು ಕರೆಯಿರಿ; ಹಿರಿಯ ರನ್ನೂ ದೇಶದ ನಿವಾಸಿಗಳೆಲ್ಲರನ್ನೂ ನಿಮ್ಮ ದೇವರಾದ ಕರ್ತನ ಆಲಯದಲ್ಲಿ ಕೂಡಿಸಿ ಕರ್ತನಿಗೆ ಮೊರೆಯಿ ಡಿರಿ.

Interlinear

Choose Theme