ಆ ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ತನ್ನ ಹತ್ತಿರಕ್ಕೆ ಕರೆದು ಅವರನ್ನು ಅಪ್ಪಿಕೊಂಡನು; ಇದಾದ ಮೇಲೆ ಅವನು ಮಕೆ ದೋನ್ಯಕ್ಕೆ ಹೋಗಲು ಹೊರಟನು.
Cross references
ಆದರೆ ಇಸ್ರಾಯೇಲನು ಮುದುಕನಾಗಿದ್ದದರಿಂದ ಅವನ ಕಣ್ಣುಗಳು ಕಾಣದಷ್ಟು ಮೊಬ್ಬಾಗಿದ್ದವು. ಆಗ ಅವನು ಅವರನ್ನು ಯಾಕೋಬನ ಸವಿಾಪಕ್ಕೆ ತಂದಾಗ ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದುಬಂದು ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊ ಬ್ಬರು ಮುದ್ದಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿ ಅತ್ತರು; ದಾವೀದನು ಬಹಳವಾಗಿ ಅತ್ತನು;ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.
ಅವನನ್ನು ಕಂಡುಕೊಂಡು ಅಂತಿ ಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶ ಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.
ಆಗ ರಾತ್ರಿ ಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು; ಏನಂ ದರೆ--ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು--ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು ಎಂದು ಅವನನ್ನು ಬೇಡಿಕೊಂಡನು.
ಇವುಗಳಾದ ಮೇಲೆ ಪೌಲನು ತಾನು ಮಕೆದೋನ್ಯವನ್ನೂ ಅಖಾಯವನ್ನೂ ಹಾಯ್ದು ಯೆರೂಸಲೇಮಿಗೆ ಹೋಗಬೇಕೆಂದು ಆತ್ಮದಲ್ಲಿ ಉದ್ದೇಶಿಸಿ--ಅಲ್ಲಿಗೆ ಹೋದಮೇಲೆ ನಾನು ರೋಮ್ ವನ್ನು ಸಹ ನೋಡಲೇಬೇಕು ಎಂದು ಹೇಳಿದನು.
ಅದೇ ಸಮಯದಲ್ಲಿ ಆ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.
ಆದರೆ ಪೌಲನು ಇಳಿದು ಹೋಗಿ ಅವನಮೇಲೆ ಬಿದ್ದು ತಬ್ಬಿಕೊಂಡು--ನೀವು ಕಳವಳಪಡಬೇಡಿರಿ, ಅವನ ಪ್ರಾಣ ಅವನಲ್ಲಿ ಅದೆ ಎಂದು ಹೇಳಿದನು.
ಆಗ ಅವರೆಲ್ಲರೂ ಬಹಳವಾಗಿ ಅತ್ತು ಪೌಲನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.ತನ್ನ ಮುಖವನ್ನು ಅವರು ಇನ್ನು ನೋಡುವದಿಲ್ಲವೆಂದು ಹೇಳಿದ ಮಾತುಗಳಿಗೆ ಅವರು ಬಹಳವಾಗಿ ವ್ಯಥೆಪಟ್ಟರು. ತರುವಾಯ ಅವರು ಅವನನ್ನು ಹಡಗಿನ ವರೆಗೆ ಸಾಗ ಕಳುಹಿಸಿದರು.
ಆ ದಿವಸಗಳು ಕಳೆದ ಮೇಲೆ ನಾವು ಹೊರಟು ಹೋಗುತ್ತಿರುವಾಗ ಅವರು ತಮ್ಮ ಹೆಂಡತಿಯರು ಮಕ್ಕಳ ಸಹಿತವಾಗಿ ನಮ್ಮನ್ನು ಪಟ್ಟಣದ ಹೊರಗೆ ಸಾಗಕಳುಹಿಸಿದರು; ನಾವು ಸಮುದ್ರದ ತೀರದಲ್ಲಿ ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು.
ಪವಿತ್ರ ವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳು ನಿಮ್ಮನ್ನು ವಂದಿಸುತ್ತವೆ.
ನಾನು ಮಕೆದೋನ್ಯವನ್ನು ಹಾದು ಹೋಗುವಾಗ ನಿಮ್ಮ ಬಳಿಗೆ ಬರುವೆನು; ಯಾಕಂದರೆ ನಾನು ಮಕೆದೋನ್ಯವನ್ನು ಹಾದು ಹೋಗಲೇಬೇಕು.
ಸಹೋದರ ರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಶರೀರಕ್ಕೆ ಏನೂ ವಿಶ್ರಾಂತಿಯಾಗಲಿಲ್ಲ; ಆದರೆ ಎಲ್ಲಾ ಕಡೆಯಲ್ಲಿಯೂ ನಮಗೆ ಕಳವಳವಿತ್ತು ಹೊರಗೆ ಕಲಹ; ಒಳಗೆ ಭಯವಿತ್ತು.
ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
ಪವಿತ್ರವಾದ ಮುದ್ದಿಟ್ಟು ಸಹೋದರ ರೆಲ್ಲರನ್ನೂ ವಂದಿಸಿರಿ.
ನಾನು ಮಕೆದೋನ್ಯಕ್ಕೆ ಹೋದಾಗ ನೀನು ಎಫೆಸ ದಲ್ಲಿ ಇದ್ದುಕೊಂಡು ಅವರು ಬೇರೆ ಯಾವ ಬೋಧನೆ ಯನ್ನು ಉಪದೇಶಿಸಬಾರದೆಂತಲೂ