Home Bibles ☰ Books ಅಪೋಸ್ತಲರ ಕೃತ್ಯಗಳು 19:23 · ಕನ್ನಡ ಬೈಬಲ್
ಅಪೋಸ್ತಲರ ಕೃತ್ಯಗಳು 19:23 · ಕನ್ನಡ ಬೈಬಲ್

ಅದೇ ಸಮಯದಲ್ಲಿ ಆ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.

Cross references

ಅಪೋಸ್ತಲರ ಕೃತ್ಯಗಳು 9:2

ಆ ಮಾರ್ಗದಲಿ ಇದ್ದವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ತಾನು ಅವರನ್ನು ಬಂಧಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರ ದವರಿಗೆ ಪತ್ರಗಳನ್ನು ಕೊಡಬೇಕೆಂದು ಅವನನ್ನು ಬೇಡಿಕೊಂಡನು.

ಅಪೋಸ್ತಲರ ಕೃತ್ಯಗಳು 18:26

ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಪೂರ್ಣವಾಗಿ ವಿವರಿಸಿದರು.

ಅಪೋಸ್ತಲರ ಕೃತ್ಯಗಳು 19:9

ಕೆಲವರು ತಮ್ಮ ಮನಸ್ಸುಗಳನ್ನು ಕಠಿಣ ಮಾಡಿಕೊಂಡು ನಂಬದೆ ಸಮೂಹದ ಮುಂದೆ ಆ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟು ಶಿಷ್ಯರನ್ನು ಬೇರೆ ಮಾಡಿ ತುರನ್ನನ ಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.

ಅಪೋಸ್ತಲರ ಕೃತ್ಯಗಳು 22:4

ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು.

ಅಪೋಸ್ತಲರ ಕೃತ್ಯಗಳು 24:14

ಆದರೆ ನ್ಯಾಯಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಬರೆಯಲ್ಪಟ್ಟವುಗಳೆಲ್ಲವನ್ನು ನಂಬಿಕೊಂಡು ಅವರು ಪಾಷಾಂಡವೆಂದು ಹೇಳುವ ಮಾರ್ಗಕ್ಕನುಸಾರವಾಗಿ ನನ್ನ ಪಿತೃಗಳ ದೇವರನ್ನು ಆರಾಧಿಸುವವನಾಗಿದ್ದೇನೆ ಎಂದು ನಾನು ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ.

ಅಪೋಸ್ತಲರ ಕೃತ್ಯಗಳು 24:22

ಆ ಮಾರ್ಗದ ವಿಷಯವಾಗಿ ಚೆನ್ನಾಗಿ ತಿಳಿದು ಕೊಂಡಿದ್ದ ಫೇಲಿಕ್ಸನು ಇವುಗಳನ್ನು ಕೇಳಿ ವಿಷಯವನ್ನು ಮುಂದಕ್ಕೆ ಹಾಕಿಸಿ--ಮುಖ್ಯನಾಯಕನಾದ ಲೂಸ್ಯನು ಬಂದಾಗ ನಿಮ್ಮ ವಿಷಯವನ್ನು ಸಂಪೂರ್ಣವಾಗಿ ವಿಚಾರಣೆ ಮಾಡುತ್ತೇನೆ ಎಂದು ಹೇಳಿದನು.

2 ಕೊರಿಂಥದವರಿಗೆ 1:8

ಸಹೋದರರೇ, ಆಸ್ಯದಲ್ಲಿ ನಮ್ಮಗುಂಟಾದ ಉಪದ್ರವವನ್ನು ನೀವು ತಿಳಿಯ ಬೇಕೆಂದು ನಾನು ಅಪೇಕ್ಷಿಸುತ್ತೇನೆ; ಹೇಗಂದರೆ ನಾವು ಜೀವದ ನಿರೀಕ್ಷೆಯಿಲ್ಲದವರಾಗುವಷ್ಟೂ ಅಳತೆಗೆಟ್ಟು ಬಲ ವಿಾರಿ ಕುಗ್ಗಿ ಹೋದೆವು.

2 ಕೊರಿಂಥದವರಿಗೆ 6:9

ಅಪರಿಚಿತರೆನಿಸಿಕೊಂಡರೂ ಪರಿಚಿತರೂ ಸಾಯುವವರಾಗಿ ತೋರಿದರೂ ಇಗೋ, ನಾವು ಬದುಕುವವರೂ ಆಗಿದ್ದೇವೆ; ಶಿಕ್ಷೆ ಹೊಂದುವ ವರಾಗಿದ್ದರೂ ಕೊಲ್ಲಲ್ಪಡದವರೂ

Interlinear

Choose Theme