ಆದರೆ ಪೌಲನು ಇಳಿದು ಹೋಗಿ ಅವನಮೇಲೆ ಬಿದ್ದು ತಬ್ಬಿಕೊಂಡು--ನೀವು ಕಳವಳಪಡಬೇಡಿರಿ, ಅವನ ಪ್ರಾಣ ಅವನಲ್ಲಿ ಅದೆ ಎಂದು ಹೇಳಿದನು.
Cross references
ಆಗ ಅವನು ಹುಡುಗನ ಮೇಲೆ ಮೂರು ಸಾರಿ ಬೋರ್ಲ ಬಿದ್ದುನನ್ನ ದೇವರಾದ ಓ ಕರ್ತನೇ, ಈ ಹುಡುಗನ ಪ್ರಾಣ ಅವನಲ್ಲಿ ತಿರಿಗಿ ಬರಲಿ ಎಂದು ಕರ್ತನನ್ನು ಕೂಗಿದನು.
ಅವನು ಏರಿಹೋಗಿ ಮಗುವಿನ ಮೇಲೆ ಮಲಗಿ ಕೊಂಡು ತನ್ನ ಬಾಯಿಯನ್ನು ಅವನ ಬಾಯಿಯ ಮೇಲೆಯೂ ತನ್ನ ಕಣ್ಣುಗಳನ್ನು ಅವನ ಕಣ್ಣುಗಳ ಮೇಲೆಯೂ ತನ್ನ ಕೈಗಳನ್ನು ಅವನ ಕೈಗಳ ಮೇಲೆಯೂ ಇರಿಸಿದನು. ಅವನು ಮೇಲೆ ಬೋರ್ಲಬಿದ್ದದರಿಂದ ಮಗುವಿನ ಶರೀರವು ಬೆಚ್ಚಗೆ ಆಯಿತು.
ತರುವಾಯ ಯೇಸು ಆ ಅಧಿಕಾರಿಯ ಮನೆ ಯೊಳಗೆ ಬಂದು ಕೊಳಲೂದುವವರನ್ನೂ ಗೊಂದಲ ಮಾಡುವ ಜನರನ್ನೂ ನೋಡಿ
ಆತನು ಒಳಕ್ಕೆ ಬಂದಾಗ ಅವರಿಗೆ--ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು.
ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.
ಈ ಮಾತುಗಳನ್ನು ಹೇಳಿದ ತರುವಾಯ ಆತನು ಅವರಿಗೆ--ನಮ್ಮ ಸ್ನೇಹಿತನಾದ ಲಾಜರನು ನಿದ್ರಿಸುತ್ತಿದ್ದಾನೆ; ಆದರೆ ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಾಕ್ಕಾಗಿ ಹೋಗುತ್ತೇನೆ ಎಂದು ಹೇಳಿದನು.
ಯೇಸು ಆಕೆಗೆ--ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಅಂದನು.