Home Bibles 2 ಸಮುವೇಲ 19:17 · ಕನ್ನಡ ಬೈಬಲ್
2 ಸಮುವೇಲ 19:17 · ಕನ್ನಡ ಬೈಬಲ್

ಅವನ ಸಂಗಡ ಸಾವಿರ ಮಂದಿ ಬೆನ್ಯಾವಿಾನ್ಯರಿದ್ದರು. ಸೌಲನ ಮನೆಯ ಸೇವಕ ನಾದ ಚೀಬನೂ ಅವನ ಸಂಗಡ ತನ್ನ ಹದಿನೈದು ಮಂದಿ ಕುಮಾರರೂ ತನ್ನ ಇಪ್ಪತ್ತು ಮಂದಿ ಸೇವಕರೂ ಯೊರ್ದನನ್ನು ದಾಟಿ ಅರಸನಿಗೆ ಎದುರಾಗಿ ಬಂದರು.

Cross references

2 ಸಮುವೇಲ 3:16

ಅವಳ ಗಂಡನು ಅವಳ ಸಂಗಡ ಬಹುರೀಮಿನ ವರೆಗೂ ಅಳುತ್ತಾ ಅವಳ ಹಿಂದೆ ಹೋದನು. ಆಗ ಅಬ್ನೇರನು ಅವನಿಗೆತಿರುಗಿ ಹೋಗು ಅಂದನು; ಅವನು ತಿರುಗಿ ಹೋದನು.

2 ಸಮುವೇಲ 9:2

ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು.

2 ಸಮುವೇಲ 9:10

ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.

2 ಸಮುವೇಲ 16:1

ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರಹೋದಾಗ ಇಗೋ, ಮೆಫೀಬೋ ಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡಕೊಂಡು ಬಂದು ಅವನನ್ನು ಎದುರು ಗೊಂಡನು; ಅವುಗಳ ಮೇಲೆ ಇನ್ನೂರು ರೊಟ್ಟಿ ಗಳೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳೂ ವಸಂತಕಾಲದ ನೂರು ಹಣ್ಣುಗಳೂ ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು.

2 ಸಮುವೇಲ 16:5

ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು.

2 ಸಮುವೇಲ 19:26

ಅದಕ್ಕವನು--ಅರಸನಾದ ನನ್ನ ಒಡೆಯನೇ, ನನ್ನ ಸೇವಕನು ನನ್ನನ್ನು ಮೋಸ ಮಾಡಿದನು. ಯಾಕಂದರೆ ನಿನ್ನ ಸೇವಕನು ಕುಂಟನಾಗಿರುವದರಿಂದ ಒಂದು ಕತ್ತೆಯ ಮೇಲೆ ತಡಿಯನ್ನು ಹಾಕು ಅದರ ಮೇಲೇರಿ ಅರಸನ ಸಂಗಡ ಹೋಗುವೆನೆಂದು ನಿನ್ನ ಸೇವಕನಾದ ನಾನು ಅವನಿಗೆ ಹೇಳಿದೆನು.

1 ಅರಸುಗಳು 2:8

ಇದಲ್ಲದೆ ನಾನು ಮಹನಯಿಮಿಗೆ ಹೋಗುವ ದಿನದಲ್ಲಿ ಘೋರವಾದ ಶಾಪದಿಂದ ನನ್ನನ್ನು ಶಪಿಸಿದ ಬಹುರೀಮಿನ ಬೆನ್ಯಾ ವಿಾನನಾದ ಗೇರನ ಮಗನಾಗಿರುವ ಶಿಮ್ಮಿಯು ನಿನ್ನ ಬಳಿಯಲ್ಲಿದ್ದಾನೆ. ಅವನು ಯೊರ್ದನಿನ ಬಳಿಯಲ್ಲಿ ನನ್ನನ್ನು ಎದುರುಗೊಳ್ಳಲು ಬಂದದರಿಂದ ನಾನು ನಿನ್ನನ್ನು ಕತ್ತಿಯಿಂದ ಕೊಲ್ಲಿಸುವದಿಲ್ಲವೆಂದು ಕರ್ತನ ಹೆಸರಿನಲ್ಲಿ ಆಣೆ ಇಟ್ಟೆನು.

Interlinear

Choose Theme