Home Bibles 2 ಸಮುವೇಲ 16:1 · ಕನ್ನಡ ಬೈಬಲ್
2 ಸಮುವೇಲ 16:1 · ಕನ್ನಡ ಬೈಬಲ್

ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರಹೋದಾಗ ಇಗೋ, ಮೆಫೀಬೋ ಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡಕೊಂಡು ಬಂದು ಅವನನ್ನು ಎದುರು ಗೊಂಡನು; ಅವುಗಳ ಮೇಲೆ ಇನ್ನೂರು ರೊಟ್ಟಿ ಗಳೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳೂ ವಸಂತಕಾಲದ ನೂರು ಹಣ್ಣುಗಳೂ ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು.

Cross references

1 ಸಮುವೇಲ 10:3

ನೀನು ಆ ಸ್ಥಳವನ್ನು ಬಿಟ್ಟು ಆ ಕಡೆ ದಾಟಿ ತಾಬೋರಿನ ಬಯಲಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿ ಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವಿ.

1 ಸಮುವೇಲ 16:20

ಆಗ ಇಷಯನು ರೊಟ್ಟಿಯನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಒಂದು ಮೇಕೆಯ ಮರಿ ಯನ್ನೂ ಕತ್ತೆಯ ಮೇಲೆ ಹೇರಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕಳುಹಿಸಿದನು.

1 ಸಮುವೇಲ 17:17

ಇಷಯನು ತನ್ನ ಮಗನಾದ ದಾವೀದನಿಗೆನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ ಈ ಹತ್ತು ರೊಟ್ಟಿಗಳನ್ನೂ ತಕ್ಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಓಡಿ ಹೋಗು.

1 ಸಮುವೇಲ 25:18

ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸ ವನ್ನೂ ಸಿದ್ಧಪಡಿಸಿದ ಐದು ಕುರಿಗಳ ಮಾಂಸವನ್ನೂ ಐದು ಸೇರು ಹುರಿದ ಕಾಳುಗಳನ್ನೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ತೆಗೆದು ಕತ್ತೆಗಳ ಮೇಲೆ ಹೇರಿಸಿಕೊಂಡು

2 ಸಮುವೇಲ 9:2

ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು.

2 ಸಮುವೇಲ 15:30

ದಾವೀದನು ಅಳುತ್ತಾ ತನ್ನ ತಲೆಯನ್ನು ಮುಚ್ಚಿ ಕೊಂಡು ಬರಿಗಾಲಾಗಿ ಎಣ್ಣೆ ಮರಗಳ ಗುಡ್ಡವನ್ನು ಏರಿದನು; ಅವನ ಸಂಗಡ ಇರುವ ಎಲ್ಲಾ ಜನರೂ ತಮ್ಮ ತಮ್ಮ ತಲೆಗಳನ್ನು ಮುಚ್ಚಿಕೊಂಡು ಅಳುತ್ತಾ ಮೇಲಕ್ಕೆರಿದರು.

2 ಸಮುವೇಲ 15:32

ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿ ದಾಗ ಏನಾಯಿತಂದರೆ ಇಗೋ, ಅರ್ಕೀಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹೊಯ್ದುಕೊಂಡು ಅವನನ್ನು ಎದುರುಗೊಳ್ಳಲು ಬಂದನು.

2 ಸಮುವೇಲ 17:27

ದಾವೀದನು ಮಹನಯಿಮಿಗೆ ಬಂದಾಗ ಏನಾ ಯಿತಂದರೆ, ಅಮ್ಮೋನನ ಮಕ್ಕಳ ರಬ್ಬಾ ಪಟ್ಟಣದ ನಾಹಾಷನ ಮಗನಾದ ಶೋಬಿಯೂ ಲೋದೆಬಾ ರಿನ ಊರಿನವನಾಗಿರುವ ಅವ್ಮೆಾಯೇಲನ ಮಗನಾದ ಮಾಕೀರ್‌

2 ಸಮುವೇಲ 19:32

ಅರಸನು ಮಹನ ಯಿಮಿನಲ್ಲಿ ವಾಸಿಸಿರುವ ವರೆಗೂ ಇವನು ಅವನನ್ನು ಸಂರಕ್ಷಿಸಿದನು; ಯಾಕಂದರೆ ಅವನು ಮಹಾ ದೊಡ್ಡ ಮನುಷ್ಯನಾಗಿದ್ದನು.

1 ದಿನವೃತ್ತಾಂತ 12:40

ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್‌, ಜೆಬುಲೂನ್‌, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು.

ಸಾಮೇತಿಗಳು 18:16

ಮನುಷ್ಯನ ದಾನವು ತನಗೆ ಅನುಕೂಲವಾಗಿದ್ದು ದೊಡ್ಡವರ ಸನ್ನಿಧಾನಕ್ಕೆ ಅವನನ್ನು ಕರಕೊಂಡು ಹೋಗುತ್ತದೆ.

ಸಾಮೇತಿಗಳು 29:4

ನ್ಯಾಯತೀರ್ಪಿನಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ; ಲಂಚಗಳನ್ನು ಸ್ವೀಕರಿಸು ವವನು ಅದನ್ನು ಕೆಡವಿಹಾಕುತ್ತಾನೆ.

ಯೆರೆಮಿಯ 40:10

ಇಷ್ಮಾಯೇಲನು ಮಿಚ್ಪದ ಲ್ಲಿದ್ದ ಉಳಿದವರನ್ನೆಲ್ಲಾ ಅರಸನ ಕುಮಾರ್ತೆಯರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿಕೊಟ್ಟ ಉಳಿದ ಜನರೆಲ್ಲರನ್ನೂ ಸೆರೆಯಾಗಿ ಒಯ್ದನು; ನೆತನ್ಯನ ಮಗನಾದ ಇಷ್ಮಾಯೇಲನು ಅವರನ್ನು ಸೆರೆಯಾಗಿ ಒಯ್ದು ಅಮ್ಮೋನ್ಯನ ಮಕ್ಕಳ ಬಳಿಗೆ ದಾಟಿ ಹೋಗು ವದಕ್ಕೆ ಹೊರಟನು.

ಯೆರೆಮಿಯ 40:12

ಆ ಮನುಷ್ಯರನ್ನೆಲ್ಲಾ ಕರಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಸಂಗಡ ಯುದ್ಧ ಮಾಡುವದಕ್ಕೆ ಹೋಗಿ ಗಿಬ್ಯೋನಿ ನಲ್ಲಿರುವ ದೊಡ್ಡ ನೀರುಗಳ ಬಳಿಯಲ್ಲಿ ಅವನನ್ನು ಕಂಡರು.

ಆಮೋಸ 8:1

ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು--ಇಗೋ, ಬೇಸಿಗೆ ಹಣ್ಣು ಗಳುಳ್ಳ ಪುಟ್ಟಿ ಅಂದನು.

ಮೀಕ 7:1

ನನಗೆ ಅಯ್ಯೋ, ಯಾಕಂದರೆ ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವ ವರ ಹಾಗೆಯೂ ದ್ರಾಕ್ಷೇ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ; ತಿನ್ನುವದಕ್ಕೆ ಗೊನೆ ಇಲ್ಲ. ನನ್ನ ಪ್ರಾಣವು ಮೊದಲು ಹಣ್ಣಾದ ಅಂಜೂರ ವನ್ನು ಅಪೇಕ್ಷಿಸಿಯದೆ.

Interlinear

Choose Theme