ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.
Cross references
ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು.
ಆಗ ಚೀಬನು ಅರಸನಿಗೆ--ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು ಅಂದನು. ಅರಸನ ಕುಮಾರ ರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು.
ಅರಸನ ಮನೆಯವರನ್ನು ಈಚೆ ದಡಕ್ಕೆ ತರುವದಕ್ಕೂ ಅವನ ದೃಷ್ಟಿಗೆ ಒಳ್ಳೇದಾಗಿ ತೋರಿದ್ದನ್ನು ಮಾಡುವ ದಕ್ಕೂ ದೋಣಿಯು ಆಚೇ ದಡದಲ್ಲಿ ಬಂತು; ಆಗ ಗೇರನ ಮಗನಾದ ಶಿಮ್ಮಿಯು ಯೊರ್ದನನ್ನು ದಾಟು ತ್ತಲೇ ಅರಸನ ಮುಂದೆ ಬಿದ್ದು ಅರಸನಿಗೆ--
ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಮಾಡು. ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರು ಸತ್ತ ವರ ಹಾಗೆ ಇದ್ದಾಗ್ಯೂ ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವದಕ್ಕೆ ಯೋಗ್ಯನೋ ಅಂದನು. ಆಗ ಅರಸನು ಅವನಿಗೆಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡು ವದೇನು?
ಅವನು ಜೀವದಿಂದಿರುವ ವರೆಗೂ ಅರಸನ ಸಮ್ಮುಖದಲ್ಲಿ ರೊಟ್ಟಿಯನ್ನು ಯಾವಾಗಲೂ ತಿನ್ನುತ್ತಾ ಇದ್ದನು.ಇದಲ್ಲದೆ ಅವನು ಬದುಕಿರುವ ವರೆಗೂ ಪ್ರತಿ ದಿನಕ್ಕೆ ನೇಮಕವಾದ ಭೋಜನವು ಅರಸನಿಂದ ಯಾವಾಗಲೂ ಕೊಡಲ್ಪಡುತ್ತಾ ಇತ್ತು.
ಆಗ ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಆತನಿಗೆ--ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು ಎಂದು ಹೇಳಿದನು.