Home Bibles 2 ಸಮುವೇಲ 16:4 · ಕನ್ನಡ ಬೈಬಲ್
2 ಸಮುವೇಲ 16:4 · ಕನ್ನಡ ಬೈಬಲ್

ಆಗ ಅರಸನು ಚೀಬನಿಗೆ--ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲಾ ನಿನ್ನದಾಯಿತು ಅಂದನು. ಅದಕ್ಕೆ ಚೀಬನು--ಅರಸನಾದ ನನ್ನ ಒಡೆ ಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಲಿ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.

Cross references

ನಿರ್ಗಮಕಾಂಡ 23:8

ಲಂಚವನ್ನು ತೆಗೆದು ಕೊಳ್ಳಬೇಡ; ಅದು ಜ್ಞಾನಿಗಳನ್ನು ಕುರುಡರನ್ನಾಗಿ ಮಾಡಿ ನೀತಿವಂತರ ಮಾತುಗಳನ್ನು ವಕ್ರಪಡಿಸುತ್ತದೆ.

ದ್ವಿತೀಯೋಪದೇಶಕಾಂಡ 19:15

ಒಬ್ಬನ ಅಕ್ರಮದ ನಿಮಿತ್ತವೂ ಅವನು ಮಾಡುವ ಎಲ್ಲಾ ಪಾಪದ ನಿಮಿತ್ತವೂ ಅವನಿಗೆ ವಿರೋಧವಾಗಿ ಒಬ್ಬನು ಸಾಕ್ಷಿಯಾಗಿ ನಿಂತುಕೊಳ್ಳಬಾರದು; ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಕಾರ್ಯವೆಲ್ಲಾ ಸ್ಥಿರವಾಗುವದು.

2 ಸಮುವೇಲ 9:9

ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ.

2 ಸಮುವೇಲ 14:4

ಹಾಗೆಯೇ ತೆಕೋವಿನವಳಾದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿ ನೆಲಕ್ಕೆ ಬಿದ್ದು ಭಕ್ತಿ ಗೌರವದಿಂದ ವಂದಿಸಿ--ಅರಸೇ, ಸಹಾಯಮಾಡು ಎಂದು ಕೇಳಿ ಕೊಂಡಳು.

2 ಸಮುವೇಲ 14:8

ಆಗ ಅರಸನು ಆ ಸ್ತ್ರೀಗೆ--ನೀನು ನಿನ್ನ ಮನೆಗೆ ಹೋಗು; ನಾನು ನಿನ್ನ ವಿಷಯವಾಗಿ ಆಜ್ಞಾಪಿಸುತ್ತೇನೆ ಅಂದನು.

2 ಸಮುವೇಲ 14:10

ಅದಕ್ಕೆ ಅರಸನು--ಯಾವನಾದರೂ ನಿನಗೆ ಏನಾದರೂ ಹೇಳಿದರೆ ಅವನನ್ನು ನನ್ನ ಬಳಿಗೆ ಕರ ಕೊಂಡು ಬಾ; ಅವನು ಇನ್ನು ನಿನ್ನನ್ನು ಎಂದಿಗೂ ಮುಟ್ಟದಂತೆ ಮಾಡುವೆನು ಅಂದನು.

2 ಸಮುವೇಲ 14:22

ಆಗ ಯೋವಾಬನು ನೆಲಕ್ಕೆ ಬಿದ್ದು ಬೊಗ್ಗಿಕೊಂಡು ಅರಸ ನಿಗೆ ವಂದಿಸಿದನು. ಯೋವಾಬನು--ಅರಸನು ತನ್ನ ಸೇವಕನ ಮಾತಿನ ಪ್ರಕಾರ ಮಾಡಿದ್ದರಿಂದ ನನ್ನ ಒಡೆಯನಾದ ಅರಸನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿತೆಂಬದು ಈ ಹೊತ್ತು ನಿನ್ನ ಸೇವಕನಿಗೆ ತಿಳಿಯಿತು ಅಂದನು.

ಸಾಮೇತಿಗಳು 18:13

ಸಂಗತಿಯನ್ನು ಕೇಳುವದಕ್ಕೆ ಮುಂಚೆ ಉತ್ತರ ಕೊಡುವವರಿಗೆ ಅದು ಅವನಿಗೆ ಮೂರ್ಖತನವೂ ಅವಮಾನವೂ ಆಗಿದೆ.

ಸಾಮೇತಿಗಳು 18:17

ತನ್ನ ಸಮರ್ಥನೆಯಲ್ಲಿ ಮೊದಲನೆಯವನು ನ್ಯಾಯವಾಗಿದ್ದಾನೆಂದು ತೋರು ತ್ತಾನೆ; ತನ್ನ ನೆರೆಯವನು ಬಂದು ಅವನನ್ನು ಶೋಧಿಸು ತ್ತಾನೆ.

ಸಾಮೇತಿಗಳು 19:2

ತಿಳುವಳಿಕೆಯಿಲ್ಲದ ಪ್ರಾಣವು ಯುಕ್ತವಲ್ಲ; ತನ್ನ ಪಾದಗಳಿಂದ ದುಡುಕುವ ವನು ಪಾಪಮಾಡುತ್ತಾನೆ.

Interlinear

Choose Theme