Home Bibles 2 ಸಮುವೇಲ 16:3 · ಕನ್ನಡ ಬೈಬಲ್
2 ಸಮುವೇಲ 16:3 · ಕನ್ನಡ ಬೈಬಲ್

ಆಗ ಅರಸನು ಅವ ನನ್ನು--ನಿನ್ನ ಯಜಮಾನನ ಕುಮಾರನು ಎಲ್ಲಿದ್ದಾ ನೆಂದು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಯೆರೂಸಲೇಮಿನಲ್ಲಿದ್ದಾನೆ. ಯಾಕಂದರೆ--ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರಿಗಿಕೊಡುವರೆಂದು ಅಂದನು.

Cross references

ನಿರ್ಗಮಕಾಂಡ 20:16

ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.

ದ್ವಿತೀಯೋಪದೇಶಕಾಂಡ 19:18

ನ್ಯಾಯಾಧಿಪತಿಗಳು ಒಳ್ಳೆ ವಿಚಾರಣೆಮಾಡಬೇಕು; ಆಗ ಇಗೋ, ಆ ಸಾಕ್ಷಿ ಸುಳ್ಳುಸಾಕ್ಷಿಯಾಗಿದ್ದರೆ,ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ

2 ಸಮುವೇಲ 9:9

ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ.

2 ಸಮುವೇಲ 19:24

ಸೌಲನ ಮಗನಾದ ಮೆಫೀಬೋಶೆತನು ಅರಸ ನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವ ವರೆಗೂ ಅವನು ತನ್ನ ಪಾದಗಳನ್ನು ಕಟ್ಟಿ ಕೊಳ್ಳಲಿಲ್ಲ, ತನ್ನ ಗಡ್ಡವನ್ನು ಕತ್ತರಿಸಿಕೊಳ್ಳಲಿಲ್ಲ; ತನ್ನ ಬಟ್ಟೆಗಳನ್ನು ಒಗೆದುಕೊಳ್ಳಲಿಲ್ಲ.

2 ಸಮುವೇಲ 19:28

ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಮಾಡು. ಅರಸನಾದ ನನ್ನ ಒಡೆಯನಿಗೆ ನನ್ನ ತಂದೆಯ ಮನೆಯವರೆಲ್ಲರು ಸತ್ತ ವರ ಹಾಗೆ ಇದ್ದಾಗ್ಯೂ ನಿನ್ನ ಮೇಜಿನಲ್ಲಿ ಭೋಜನ ಮಾಡುವವರೊಳಗೆ ನಿನ್ನ ಸೇವಕನನ್ನು ಇಟ್ಟಿ. ನಾನು ಇನ್ನು ಅರಸನಿಗೆ ಹೆಚ್ಚು ಮೊರೆಯಿಡುವದಕ್ಕೆ ಯೋಗ್ಯನೋ ಅಂದನು. ಆಗ ಅರಸನು ಅವನಿಗೆಇನ್ನು ನಿನ್ನ ಕಾರ್ಯಗಳನ್ನು ಕುರಿತು ಮಾತನಾಡು ವದೇನು?

ಕೀರ್ತನೆಗಳು 15:3

ಅವನು ತನ್ನ ನಾಲಿಗೆಯಿಂದ ಚಾಡಿ ಹೇಳುವದಿಲ್ಲ; ತನ್ನ ನೆರೆಯವನನ್ನು ನಿಂದಿಸು ವದಿಲ್ಲ;

ಕೀರ್ತನೆಗಳು 88:18

ಪ್ರಿಯನನ್ನೂ ಸ್ನೇಹಿತನನೂ ನನಗೆ ದೂರ ಮಾಡಿದ್ದೀ; ನನ್ನ ಕತ್ತಲೆಯ ಸ್ಥಳವೇ ನನ್ನ ಪರಿಚಿತರು.

ಕೀರ್ತನೆಗಳು 101:5

ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಗರ್ವದ ಕಣ್ಣೂ ಅಹಂಕಾರದ ಹೃದಯವೂ ಉಳ್ಳವನನ್ನು ತಾಳಲಾರೆನು.

ಸಾಮೇತಿಗಳು 1:19

ತಮ್ಮ ಸ್ವಂತ ಪ್ರಾಣಗಳನ್ನು ತೆಗೆದುಕೊಳ್ಳುವ ದುರ್ಲಾಭಾ ಪೇಕ್ಷಕರ ಪ್ರತಿಯೊಬ್ಬನ ಮಾರ್ಗಗಳು ಹೀಗಿವೆ.

ಸಾಮೇತಿಗಳು 21:28

ಸುಳ್ಳುಸಾಕ್ಷಿಯವನು ನಾಶವಾಗುವನು; ಕೇಳುವವನು ಬಿಡದೆ ಮಾತಾಡುವನು.

ಮೀಕ 7:5

ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.

1 ತಿಮೋಥೆಯ 6:9

ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ.

ಯೂದ 1:11

ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವದಕ್ಕಾಗಿ ಬಿಳಾಮನ ದೋಷವನ್ನು ಮಾಡುವದಕ್ಕೆ ದುರಾಶೆ ಯಿಂದ ಓಡುವವರೂ ಕೋರಹನಂತೆ ಎದುರು ಮಾತನಾಡಿ ನಾಶವಾಗುವವರೂ ಆಗಿರುವ ಅವರಿಗೆ ಅಯ್ಯೋ!

Interlinear

Choose Theme