Home Bibles 2 ಸಮುವೇಲ 14:4 · ಕನ್ನಡ ಬೈಬಲ್
2 ಸಮುವೇಲ 14:4 · ಕನ್ನಡ ಬೈಬಲ್

ಹಾಗೆಯೇ ತೆಕೋವಿನವಳಾದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿ ನೆಲಕ್ಕೆ ಬಿದ್ದು ಭಕ್ತಿ ಗೌರವದಿಂದ ವಂದಿಸಿ--ಅರಸೇ, ಸಹಾಯಮಾಡು ಎಂದು ಕೇಳಿ ಕೊಂಡಳು.

Cross references

1 ಸಮುವೇಲ 20:41

ಹುಡುಗನು ಹೋಗುತ್ತಲೇ ದಾವೀದನು ದಕ್ಷಿಣ ಕಡೆಯಿಂದ ಎದ್ದುಬಂದು ಬೋರಲು ಬಿದ್ದು ಮೂರು ಸಾರಿ ವಂದಿಸಿದನು. ಅವರು ಒಬ್ಬರಿಗೊ ಬ್ಬರು ಮುದ್ದಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿ ಅತ್ತರು; ದಾವೀದನು ಬಹಳವಾಗಿ ಅತ್ತನು;ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.

1 ಸಮುವೇಲ 25:23

ಅಬೀಗೈಲಳು ದಾವೀದನನ್ನು ನೋಡಿದ ಕೂಡಲೇ ಕತ್ತೆಯಿಂದಿಳಿದು ದಾವೀದನಿಗೆ ಎದುರಾಗಿ ಹೋಗಿ ಅವನ ಮುಂದೆ ಬೋರಲು ಬಿದ್ದು ನೆಲಕ್ಕೆ ಎರಗಿ ಅವನ ಪಾದಗಳ ಮೇಲೆ ಬಿದ್ದು--ನನ್ನ ಒಡೆ ಯನೇ, ಈ ಅಕ್ರಮವು ನನ್ನ ಮೇಲೆಯೇ ಇರಲಿ.

2 ಸಮುವೇಲ 1:2

ಇಗೋ, ಮೂರನೆಯ ದಿನದಲ್ಲಿ ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದ ಒಬ್ಬ ಮನುಷ್ಯನು ಸೌಲನ ಬಳಿಯಿಂದಲೂ ಪಾಳೆಯಿಂದಲೂ ಹೊರಟು ದಾವೀ ದನ ಬಳಿಗೆ ಬಂದು ನೆಲದ ಮೇಲೆ ಬಿದ್ದು ಅವ ನಿಗೆ ವಂದಿಸಿದನು.

2 ಸಮುವೇಲ 14:22

ಆಗ ಯೋವಾಬನು ನೆಲಕ್ಕೆ ಬಿದ್ದು ಬೊಗ್ಗಿಕೊಂಡು ಅರಸ ನಿಗೆ ವಂದಿಸಿದನು. ಯೋವಾಬನು--ಅರಸನು ತನ್ನ ಸೇವಕನ ಮಾತಿನ ಪ್ರಕಾರ ಮಾಡಿದ್ದರಿಂದ ನನ್ನ ಒಡೆಯನಾದ ಅರಸನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿತೆಂಬದು ಈ ಹೊತ್ತು ನಿನ್ನ ಸೇವಕನಿಗೆ ತಿಳಿಯಿತು ಅಂದನು.

2 ಅರಸುಗಳು 6:26

ಇಸ್ರಾ ಯೇಲಿನ ಅರಸನು ಗೋಡೆಯ ಮೇಲೆ ಹಾದು ಹೋಗುತ್ತಿರುವಾಗ ಒಬ್ಬ ಸ್ತ್ರೀಯು ಅವನನ್ನು ಬೇಡುವ ವಳಾಗಿ--ನನ್ನ ಯಜಮಾನನೇ, ಅರಸನೇ, ಸಹಾಯ ಮಾಡು ಅಂದಳು.

ಯೋಬ 29:12

ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು.

ಲೂಕ 18:3

ಆ ಪಟ್ಟಣದಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಬಂದು--ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು.

Interlinear

Choose Theme