Home Bibles 2 ಅರಸುಗಳು 10:4 · ಕನ್ನಡ ಬೈಬಲ್
2 ಅರಸುಗಳು 10:4 · ಕನ್ನಡ ಬೈಬಲ್

ಆದರೆ ಅವರು ಬಹಳವಾಗಿ ಭಯಪಟ್ಟು--ಇಗೋ, ಇಬ್ಬರು ಅರಸು ಗಳು ಅವನ ಮುಂದೆ ನಿಲ್ಲಲಾರದೆ ಹೋದರು; ನಾವು ನಿಲ್ಲುವದು ಹೇಗೆ ಅಂದರು.

Cross references

2 ಅರಸುಗಳು 9:24

ಆದರೆ ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬೊಗ್ಗಿಸಿ ತನ್ನ ಕೈಯಿಂದ ಯೋರಾಮನನ್ನು ಅವನ ತೋಳುಗಳ ನಡುವೆ ಹೊಡೆದನು. ಬಾಣ ಹೃದಯದಲ್ಲಿ ತೂರಿ ಹೊರಟಿತು; ಅವನು ರಥದಲ್ಲಿ ಕೆಳಗೆ ಮುದುರಿ ಕೊಂಡು ಬಿದ್ದನು.

2 ಅರಸುಗಳು 9:27

ಯೆಹೂದದ ಅರಸ ನಾದ ಅಹಜ್ಯನು ಇದನ್ನು ನೋಡಿದಾಗ ಅವನು ತೋಟದ ಮನೆಯ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ--ರಥದಲ್ಲಿ ಅವ ನನ್ನು ಸಹ ಸಂಹರಿಸಿರಿ ಅಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್‌ ಎಂಬ ಸ್ಥಳಕ್ಕೆ ಏರಿ ಹೋಗುವ ಮಾರ್ಗದಲ್ಲಿ ಹೊಡೆದರು. ಅವನು ಮೆಗಿದ್ದೋನಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.

ಯೋಬ 41:8

ಅದರ ಮೇಲೆ ನಿನ್ನ ಕೈಹಾಕು; ಯುದ್ಧವನ್ನು ನೆನಸಿಕೋ, ಹೆಚ್ಚಿನದೇನೂ ಮಾಡಬೇಡ.

ಯೆಶಾಯ 27:4

ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.

ಯೆರೆಮಿಯ 49:19

ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರಿಗಿ ಬರಮಾಡುತ್ತೇನೆ; ಅವನು ಕರ್ಮೆಲಿ ನಲ್ಲಿಯೂ ಬಾಷಾನಿನ್ನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯಿಮ್‌ ಬೆಟ್ಟದಲ್ಲಿಯೂ ಗಿಲ್ಯಾದಿ ನಲ್ಲಿಯೂ ತೃಪ್ತಿಹೊಂದುವದು.

ನಹೂಮ 1:6

ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.

ಲೂಕ 14:31

ಇಲ್ಲವೆ ಯಾವ ಅರಸನಾದರೂ ಬೇರೆ ಅರಸನಿಗೆ ವಿರೋಧ ವಾಗಿ ಯುದ್ಧಮಾಡುವದಕ್ಕೆ ಹೋಗುವಾಗ ಮೊದಲು ಕೂತುಕೊಂಡು ತನಗೆ ವಿರೋಧವಾಗಿ ಇಪ್ಪತ್ತು ಸಾವಿರ (ಸೈನ್ಯ)ದೊಂದಿಗೆ ಬರುವ ಆ ಅರಸನನ್ನು ತನ್ನ ಹತು ಸಾವಿರ (ಸೈನ್ಯ)ದೊಂದಿಗೆ ಎದುರಿಸಲು ಸಮರ್ಥನೋ ಎಂದು ವಿಚಾರಿಸುವದಿಲ್ಲವೋ?

Interlinear

Choose Theme