Home Bibles 2 ಅರಸುಗಳು 10:3 · ಕನ್ನಡ ಬೈಬಲ್
2 ಅರಸುಗಳು 10:3 · ಕನ್ನಡ ಬೈಬಲ್

ನೀವು ನಿಮ್ಮ ಯಜ ಮಾನನ ಕುಮಾರರಲ್ಲಿ ಉತ್ತಮನಾಗಿರುವ ಮತ್ತು ಸಮರ್ಥನಾಗಿರುವವನನ್ನು ನೋಡಿಕೊಂಡು ಅವ ನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕೂಡ್ರಿಸಿ ನಿಮ್ಮ ಯಜಮಾನನ ಮನೆಯವರಿಗೋಸ್ಕರ ಯುದ್ಧ ಮಾಡಿರಿ ಎಂದು ತಿಳಿಸಿದನು.

Cross references

ದ್ವಿತೀಯೋಪದೇಶಕಾಂಡ 17:14

ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಪಡಿಸಿ ಕೊಂಡು ಅದರಲ್ಲಿ ವಾಸವಾಗಿರುವಾಗ--ನನ್ನ ಸುತ್ತ ಲಿರುವ ಎಲ್ಲಾ ಜನಾಂಗಗಳ ಹಾಗೆ ನನಗೆ ಅರಸ ನನ್ನು ಇಟ್ಟುಕೊಳ್ಳುತ್ತೇನೆಂದು ಹೇಳಿದರೆ

1 ಸಮುವೇಲ 10:24

ಆಗ ಸಮುವೇಲನು ಸಮಸ್ತ ಜನರಿಗೆ--ಕರ್ತನು ಆದುಕೊಂಡವನನ್ನು ನೋಡಿರಿ; ಎಲ್ಲಾ ಜನರಲ್ಲಿ ಇವನಿಗೆ ಸಮಾನನಾದವನು ಯಾವನೂ ಇಲ್ಲವಲ್ಲಾ ಅಂದನು. ಜನರೆಲ್ಲರೂ ಆರ್ಭಟಿಸಿ--ಅರಸನಾದವನು ಬಾಳಲಿ ಅಂದರು.

1 ಸಮುವೇಲ 11:15

ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.

2 ಸಮುವೇಲ 2:8

ಆದರೆ ಸೌಲನ ಸೈನ್ಯಾಧಿಪತಿಯಾದ ನೇರನ ಮಗ ನಾಗಿರುವ ಅಬ್ನೇರನು ಸೌಲನ ಮಗನಾದ ಈಷ್ಬೋ ಶೆತನನ್ನು ಮಹನಯಿಮಿಗೆ ಕರಕೊಂಡು ಹೋಗಿ

2 ಸಮುವೇಲ 2:12

ನೇರನ ಮಗನಾಗಿರುವ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿ ನಿಂದ ಹೊರಟು ಗಿಬ್ಯೋನಿಗೆ ಬಂದರು.

1 ಅರಸುಗಳು 1:24

ಅದೋನೀಯನು ನನ್ನ ತರುವಾಯ ಆಳುವನೆಂದೂ ನಿನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವನೆಂದೂ ನೀನು ಹೇಳಿದ್ದು ಹೌದೋ?

1 ಅರಸುಗಳು 12:20

ಯಾರೊಬ್ಬಾಮನು ತಿರುಗಿ ಬಂದಿದ್ದಾನೆಂದು ಕೇಳಿದಾಗ ಇಸ್ರಾಯೇಲ್ಯ ರೆಲ್ಲರು ಸಭೆಗೆ ಅವನನ್ನು ಕರೇಕಳುಹಿಸಿ ಸಮಸ್ತ ಇಸ್ರಾ ಯೇಲಿನ ಮೇಲೆ ಅವನನ್ನು ಅರಸನನ್ನಾಗಿ ಮಾಡಿದರು. ಯೆಹೂದನ ಗೋತ್ರ ಹೊರತಾಗಿ ದಾವೀದನ ಮನೆ ಯನ್ನು ಹಿಂಬಾಲಿಸುವವರು ಯಾರೂ ಇರಲಿಲ್ಲ.

ಯೋಹಾನ 18:36

ಯೇಸು ಪ್ರತ್ಯುತ್ತರವಾಗಿ--ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರಿಗೆ ಒಪ್ಪಿಸಲ್ಪಡದ ಹಾಗೆ ನನ್ನ ಸೇವಕರು ಕಾದಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ ಅಂದನು.

Interlinear

Choose Theme