ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.
Cross references
ಅವನು ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಎತ್ತು ಗಳನ್ನೂ ಅರ್ಪಿಸುವದಕ್ಕಾಗಿ ಇಸ್ರಾಯೇಲ್ ಮಕ್ಕಳ ಯೌವನಸ್ಥರನ್ನು ಕಳುಹಿಸಿದನು.
ಆದರೂ ಜನರು ಸಮುವೇಲನ ಮಾತನ್ನು ಕೇಳಲ್ಲೊಲ್ಲದೆ ಅವರು--ಹಾಗಲ್ಲ; ನಮ್ಮ ಮೇಲೆ ಅರಸನು ಇರಬೇಕು; ನಾವು ಸಕಲ ಜನಾಂಗಗಳ ಹಾಗೆ ಇರಬೇಕು;
ಆದರೆ ನೀನು ನನಗೆ ಮುಂದಾಗಿ ಗಿಲ್ಗಾಲಿಗೆ ಇಳಿದುಹೋಗಬೇಕು; ಇಗೋ, ನಾನು ದಹನಬಲಿಗಳನ್ನೂ ಸಮಾಧಾನದ ಬಲಿ ಗಳನ್ನೂ ಅರ್ಪಿಸುವದಕ್ಕಾಗಿ ನಿನ್ನ ಬಳಿಗೆ ಬರುವೆನು. ನೀನು ಮಾಡಬೇಕಾದದ್ದನ್ನು ನಾನು ನಿನಗೆ ತಿಳಿಸುವ ವರೆಗೂ ನೀನು ಅಲ್ಲಿ ಏಳು ದಿವಸ ಕಾದುಕೊಳ್ಳಬೇಕು ಅಂದನು.
ಸಮುವೇಲನು ಜನರನ್ನು ಮಿಚ್ಪೆಯಲ್ಲಿ ಕರ್ತನ ಬಳಿಗೆ ಒಟ್ಟಾಗಿ ಕೂಡಿಸಿ ಇಸ್ರಾಯೇಲಿನ ಮಕ್ಕಳಿಗೆಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--
ಆಗ ಸಮುವೇಲನು ಸಮಸ್ತ ಜನರಿಗೆ--ಕರ್ತನು ಆದುಕೊಂಡವನನ್ನು ನೋಡಿರಿ; ಎಲ್ಲಾ ಜನರಲ್ಲಿ ಇವನಿಗೆ ಸಮಾನನಾದವನು ಯಾವನೂ ಇಲ್ಲವಲ್ಲಾ ಅಂದನು. ಜನರೆಲ್ಲರೂ ಆರ್ಭಟಿಸಿ--ಅರಸನಾದವನು ಬಾಳಲಿ ಅಂದರು.
ಇಗೋ, ನೀವು ಆರಿಸಿಕೊಂಡು ಅಪೇಕ್ಷಿಸಿದ ಅರಸನು ಇಲ್ಲಿ ಇದ್ದಾನೆ. ಇಗೋ, ಕರ್ತನು ನಿಮ್ಮ ಮೇಲೆ ಅವನನ್ನು ಅರಸನನ್ನಾಗಿ ನೇಮಿಸಿದ್ದಾನೆ.
ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದ ರಿಂದ ಕರ್ತನ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತ ನವು ಹೆಚ್ಚಾಗಿದೆ ಎಂದು ತಿಳುಕೊಂಡು ನೋಡುವ ಹಾಗೆ ನಾನು ಕರ್ತನಿಗೆ ಮೊರೆಯಿಡುವೆನು; ಆಗ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವನು.
ಇದಲ್ಲದೆ ಮಾರಣೆ ದಿವಸದಲ್ಲಿ ಅವರು ಕರ್ತ ನಿಗೆ ಬಲಿಗಳನ್ನು ವಧಿಸಿ ಕರ್ತನಿಗೆ ದಹನಬಲಿಗಳನ್ನು ಅರ್ಪಿಸಿದರು. ಸಾವಿರ ಹೋರಿಗಳನ್ನೂ ಸಾವಿರ ಟಗರು ಗಳನ್ನೂ ಸಾವಿರ ಕುರಿಮರಿಗಳನ್ನೂ ಅವುಗಳ ಪಾನದ ಅರ್ಪಣೆಗಳನ್ನೂ ಸಮಸ್ತ ಇಸ್ರಾಯೇಲಿಗೋಸ್ಕರ ಬಹಳವಾಗಿ ಬಲಿಗಳನ್ನೂ ಅರ್ಪಿಸಿದರು. ಆ ದಿವಸದಲ್ಲಿ ಮಹಾಸಂತೋಷದಿಂದ ಕರ್ತನ ಮುಂದೆ ತಿಂದು ಕುಡಿದರು.
ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ?
ಆದರೆ ನೀವು ನಿಮ್ಮ ಹೊಗಳಿಕೆಗಳಲ್ಲಿ ಸಂತೋಷಪಡುತ್ತೀರಿ. ಅಂಥ ಸಂತೋಷವೆಲ್ಲಾ ಕೆಟ್ಟದ್ದೇ.ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.