Home Bibles 2 ಕೊರಿಂಥದವರಿಗೆ 13:8 · ಕನ್ನಡ ಬೈಬಲ್
2 ಕೊರಿಂಥದವರಿಗೆ 13:8 · ಕನ್ನಡ ಬೈಬಲ್

ಸತ್ಯಕ್ಕೆ ವಿರುದ್ಧವಾಗಿ ನಾವೇನು ಮಾಡದೆ ಸತ್ಯಕ್ಕಾಗಿಯೇ ಮಾಡುತ್ತೇವೆ.

Cross references

ಅಂಕೆಗಳ ಪುಸ್ತಕ 16:28

ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ.

1 ಅರಸುಗಳು 22:28

ಅದಕ್ಕೆ ವಿಾಕಾಯೆಹುವು ನೀನು ಸಮಾ ಧಾನದಿಂದ ತಿರಿಗಿ ನಿಜವಾಗಿ ಬಂದರೆ ಕರ್ತನು ನನ್ನ ಮುಖಾಂತರ ಮಾತನಾಡಿದ್ದಿಲ್ಲವೆಂದು ಜನರೇ, ನೀವೆ ಲ್ಲರೂ ಕೇಳಿರಿ ಅಂದನು.

2 ಅರಸುಗಳು 1:9

ಆಗ ಅರಸನು ಐವತ್ತು ಮಂದಿಗೆ ಪ್ರಧಾನನನ್ನು ಅವನ ಐವತ್ತು ಮಂದಿಯ ಸಂಗಡ ಇವನ ಬಳಿಗೆ ಕಳುಹಿಸಿದನು. ಅವನು ಇವನ ಬಳಿಗೆ ಹೋದಾಗ ಇಗೋ, ಇವನು ಬೆಟ್ಟದ ತುದಿಯ ಮೇಲೆ ಕುಳಿತಿದ್ದನು. ಆಗ ಅವನು ಎಲೀಯನಿಗೆ--ದೇವರ ಮನುಷ್ಯನೇ, ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು.

2 ಅರಸುಗಳು 2:23

ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿ ರುವಾಗ ಚಿಕ್ಕ ಹುಡುಗರು ಪಟ್ಟಣದಿಂದ ಹೊರಟು ಬಂದು ಅವನನ್ನು ಹಾಸ್ಯಮಾಡಿ ಅವನಿಗೆ--ಬೋಳ ತಲೆಯವನೇ, ಏರಿ ಹೋಗು; ಬೋಳ ತಲೆಯವನೇ, ಏರಿ ಹೋಗು ಅಂದರು.

ಸಾಮೇತಿಗಳು 21:30

ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.

ಸಾಮೇತಿಗಳು 26:2

ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ.

ಮಾರ್ಕ 9:39

ಆದರೆ ಯೇಸು--ಅವನಿಗೆ ಅಡ್ಡಿಮಾಡಬೇಡಿರಿ; ಯಾಕಂದರೆ ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿ ನನ್ನ ವಿಷಯದಲ್ಲಿ ಹಗುರಾಗಿ ಕೆಟ್ಟದ್ದನ್ನು ಮಾತನಾಡುವ ಒಬ್ಬನಾದರೂ ಇಲ್ಲ.

ಮಾರ್ಕ 16:17

ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;

ಲೂಕ 9:49

ಆಗ ಯೋಹಾನನು--ಬೋಧಕನೇ, ಒಬ್ಬನು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವದನ್ನು ನಾವು ನೋಡಿ ಅವನಿಗೆ ಅಡ್ಡಿಮಾಡಿದೆವು; ಯಾಕಂದರೆ ಅವನು ನಮ್ಮೊಂದಿಗೆ (ನಿನ್ನನ್ನು) ಹಿಂಬಾಲಿ ಸುವದಿಲ್ಲ ಅಂದನು.

ಅಪೋಸ್ತಲರ ಕೃತ್ಯಗಳು 4:28

ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.

ಅಪೋಸ್ತಲರ ಕೃತ್ಯಗಳು 5:1

ಆದರೆ ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿಯಾದ ಸಪ್ಫೈರಳೊಂದಿಗೆ ತನ್ನ ಒಂದು ಆಸ್ತಿಯನ್ನು ಮಾರಿ

ಅಪೋಸ್ತಲರ ಕೃತ್ಯಗಳು 13:3

ಆಗ ಅವರು ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ಅವರನ್ನು ಕಳುಹಿಸಿ ಕೊಟ್ಟರು.

ಅಪೋಸ್ತಲರ ಕೃತ್ಯಗಳು 19:11

ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದದರಿಂದ

1 ಕೊರಿಂಥದವರಿಗೆ 5:4

ನೀವೂ ನನ್ನಾತ್ಮವೂ ಕರ್ತನಾದ ಯೇಸುವಿನ ಸಾಮರ್ಥ್ಯ ಸಹಿತ ಒಟ್ಟುಗೂಡಿ ಬಂದಿರಲಾಗಿ

2 ಕೊರಿಂಥದವರಿಗೆ 10:8

ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವದರಲ್ಲಿ ನಾನು ನಾಚಿಕಪಡುವದಿಲ್ಲ; ಆದರೆ ನಿಮ್ಮನ್ನು ಕೆಡವಿ ಹಾಕುವದಕ್ಕಲ್ಲ, ಭಕ್ತವೃದ್ಧಿಗಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟನು.

2 ಕೊರಿಂಥದವರಿಗೆ 13:10

ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ ಈ ಮಾತುಗಳನ್ನು ಬರೆದಿದ್ದೇನೆ; ನಿಮ್ಮನ್ನು ಕೆಡವಿ ಹಾಕುವದಕ್ಕಲ್ಲ, ಕಟ್ಟುವದಕ್ಕಾಗಿ ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವದಕ್ಕೆ ಅವಕಾಶವಿರ ಬಾರದೆಂದು ಅಪೇಕ್ಷಿಸುತ್ತೇನೆ.

1 ತಿಮೋಥೆಯ 1:20

ಹುಮೆನಾಯನೂ ಅಲೆಕ್ಸಾಂದ ರನೂ ಅವರಲ್ಲಿದ್ದಾರೆ. ಇವರು ದೇವದೂಷಣೆ ಮಾಡ ಬಾರದೆಂಬದನ್ನು ಕಲಿತುಕೊಳ್ಳುವಂತೆ ನಾನು ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

ಹೆಬ್ರಿಯರಿಗೆ 2:3

ಎಷ್ಟೋ ದೊಡ್ಡ ಈ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿ ಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲಾರಂಭಿಸಿತು. ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು.

Interlinear

Choose Theme