Home Bibles ಲೂಕ 15:10 · ಕನ್ನಡ ಬೈಬಲ್
ಲೂಕ 15:10 · ಕನ್ನಡ ಬೈಬಲ್

ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

Cross references

2 ದಿನವೃತ್ತಾಂತ 33:13

ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.

ಯೆಹೆಜ್ಕೇಲ 18:23

ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ?

ಯೆಹೆಜ್ಕೇಲ 18:32

ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ.

ಯೆಹೆಜ್ಕೇಲ 33:11

ಅವರಿಗೆ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ --ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷ ಸಿಗುವದಿಲ್ಲ; ಆದರೆ ಆ ದುಷ್ಟನು ದುರ್ಮಾ ರ್ಗದಿಂದ ತಿರುಗಿಕೊಂಡು ಜೀವಿಸುವದಾದರೆ ಅದರಲ್ಲಿಯೇ ನನಗೆ ಸಂತೋಷಸಿಗುವದು; ಇಸ್ರಾ ಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿರಿ, ನೀವು ತಿರುಗಿ ಕೊಳ್ಳಿರಿ. ನೀವು ಸಾಯುವದು ಯಾಕೆ?

ಮತ್ತಾಯ 18:10

ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.

ಮತ್ತಾಯ 18:14

ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

ಮತ್ತಾಯ 28:5

ಆ ದೂತನು ಸ್ತ್ರೀಯರಿಗೆ-- ನೀವು ಭಯಪಡಬೇಡಿರಿ; ಯಾಕಂದರೆ ಶಿಲುಬೆಗೆ ಹಾಕಲ್ಪಟ್ಟವನಾದ ಯೇಸುವನ್ನು ನೀವು ಹುಡುಕುತ್ತೀರೆಂದು ನಾನು ಬಲ್ಲೆನು.

ಲೂಕ 2:1

ಆ ದಿನಗಳಲ್ಲಿ ಆದದ್ದೇನಂದರೆ ಲೋಕವೆಲ್ಲಾ ಖಾನೇಷುಮಾರಿ ಬರೆಯಿಸಿಕೊಳ್ಳಬೇಕೆಂದು ಕೈಸರನಾದ ಔಗುಸ್ತನಿಂದ ಆಜ್ಞೆಯು ಹೊರಟಿತು.

ಲೂಕ 7:47

ಆದದರಿಂದ ನಾನು ಹೇಳುವದೇ ನಂದರೆ--ಬಹಳವಾಗಿರುವ ಅವಳ ಪಾಪಗಳು ಕ್ಷಮಿಸ ಲ್ಪಟ್ಟಿವೆ. ಯಾಕಂದರೆ ಅವಳು ಬಹಳವಾಗಿ ಪ್ರೀತಿಸಿ ದಳು; ಆದರೆ ಯಾವನಿಗೆ ಸ್ವಲ್ಪವಾಗಿ ಕ್ಷಮಿಸಲ್ಪಡು ವದೋ ಅವನು ಸ್ವಲ್ಪವಾಗಿ ಪ್ರೀತಿಸುವನು.

ಲೂಕ 13:5

ಆದರೆ--ಹಾಗಲ್ಲ ವೆಂದು ನಾನು ನಿಮಗೆ ಹೇಳುತ್ತೇನೆ; ನೀವು ಮಾನ ಸಾಂತರಪಡದೆ ಹೋದರೆ ನೀವೆಲ್ಲರೂ ಅವರಂತೆಯೇ ನಾಶವಾಗುವಿರಿ ಅಂದನು.

ಲೂಕ 15:7

ಆದರಂತೆಯೇ ಮಾನಸಾಂತ ರಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ನೀತಿವಂತರಿಗಿಂತ ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

ಅಪೋಸ್ತಲರ ಕೃತ್ಯಗಳು 5:19

ಆದರೆ ರಾತ್ರಿಯಲ್ಲಿ ಕರ್ತನ ದೂತನು ಸೆರೆ ಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ತಂದು--

ಅಪೋಸ್ತಲರ ಕೃತ್ಯಗಳು 10:3

ಹಗಲಿನಲ್ಲಿ ಸುಮಾರು ಒಂಭತ್ತನೆಯ ತಾಸಿಗೆ (ಮೂರು ಘಂಟೆಗೆ) ಅವನಿಗಾದ ದರ್ಶನದಲ್ಲಿ ಒಬ್ಬ ದೇವದೂತನು ಅವನ ಬಳಿಗೆ ಬಂದು--ಕೊರ್ನೇ ಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು.

ಅಪೋಸ್ತಲರ ಕೃತ್ಯಗಳು 11:18

ಅವರು ಇವುಗಳನ್ನು ಕೇಳಿ ಮೌನವಾಗಿದ್ದು ದೇವ ರನ್ನು ಕೊಂಡಾಡಿ--ಹಾಗಾದರೆ ಅನ್ಯ ಜನಾಂಗದವ ರಿಗೂ ಜೀವಕ್ಕಾಗಿ ಮಾನಸಾಂತರವನ್ನು ದೇವರು ದಯಪಾಲಿಸಿದ್ದಾನೆ ಎಂದು ಹೇಳಿದರು.

2 ಕೊರಿಂಥದವರಿಗೆ 7:10

ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.

ಫಿಲೇಮೋನ 1:15

ಅವನು ಸ್ವಲ್ಪಕಾಲ ನಿನ್ನಿಂದ ಅಗಲಿಸ ಲ್ಪಟ್ಟದ್ದು ನೀನು ಅವನನ್ನು ನಿರಂತರಕ್ಕೂ ಸೇರಿಸಿಕೊಳ್ಳುವ ದಕ್ಕೋ ಏನೋ.

ಹೆಬ್ರಿಯರಿಗೆ 1:14

ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿ ಸಲ್ಪಟ್ಟ ಊಳಿಗದ ಆತ್ಮಗಳಲ್ಲವೋ?

ಪ್ರಕಟನೆ 5:11

ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಮತ್ತು ಹಿರಿಯರ ಸುತ್ತಲು ಬಹುಮಂದಿ ದೂತರ ಶಬ್ದವನ್ನು ಕೇಳಿದೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿ ಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.

Interlinear

Choose Theme