Home Bibles 2 ದಿನವೃತ್ತಾಂತ 6:11 · ಕನ್ನಡ ಬೈಬಲ್
2 ದಿನವೃತ್ತಾಂತ 6:11 · ಕನ್ನಡ ಬೈಬಲ್

ಕರ್ತನು ಇಸ್ರಾಯೇಲ್‌ ಮಕ್ಕಳ ಸಂಗಡ ಮಾಡಿದ ಕರ್ತನ ಒಡಂಬಡಿಕೆಯು ಇರುವ ಮಂಜೂಷವನ್ನು ಅದರಲ್ಲಿ ಇರಿಸಿದ್ದೇನೆ.

Cross references

ನಿರ್ಗಮಕಾಂಡ 40:20

ಅವನು ಪ್ರಮಾಣವನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿ ಇಟ್ಟು ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ ಮಂಜೂಷದ ಮೇಲೆ ಕರುಣಾ ಸನವನ್ನು ಇಟ್ಟನು.

1 ಅರಸುಗಳು 8:9

ಇಸ್ರಾಯೇಲ್‌ ಮಕ್ಕಳು ಐಗುಪ್ತ ದೇಶದೊಳಗಿಂದ ಬಂದ ಕಾಲದಲ್ಲಿ ಕರ್ತನು ಅವರಿಗೆ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬಿನ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತಾಗಿ ಅದರಲ್ಲಿ ಮತ್ತೇನೂ ಇರಲಿಲ್ಲ.

1 ಅರಸುಗಳು 8:21

ಇದಲ್ಲದೆ ಕರ್ತನು ನಮ್ಮ ಪಿತೃಗಳನ್ನು ಐಗುಪ್ತದೇಶದಿಂದ ಬರ ಮಾಡಿದಾಗ ಅವನ ಸಂಗಡ ಮಾಡಿದ ಒಡಂಬಡಿ ಕೆಯು ಇರುವ ಮಂಜೂಷಕ್ಕೋಸ್ಕರ ಸ್ಥಳವನ್ನು ಮಾಡಿಸಿ ದೆನು ಅಂದನು.

2 ದಿನವೃತ್ತಾಂತ 5:7

ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಅತಿಪರಿಶುದ್ಧ ಸ್ಥಳಕ್ಕೆ ಆಲಯದ ದೈವೋಕ್ತಿ ಸ್ಥಾನಕ್ಕೆ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳಕ್ಕೆ ತಂದುಬಿಟ್ಟರು.

2 ದಿನವೃತ್ತಾಂತ 5:10

ಇಸ್ರಾಯೇಲ್‌ ಮಕ್ಕಳು ಐಗುಪ್ತದೇಶದಿಂದ ಬಂದ ನಂತರ ಕರ್ತನು ಅವರ ಸಂಗಡ ಒಡಂಬಡಿಕೆ ಯನ್ನು ಮಾಡಿದಾಗ ಮೋಶೆಯು ಹೋರೇಬಿನ ಬಳಿ ಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತು ಅದರಲ್ಲಿ ಮತ್ತೇನೂ ಇರಲಿಲ್ಲ.

ಹೆಬ್ರಿಯರಿಗೆ 9:4

ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಕಲ್ಲಿನ ಹಲಿಗೆ ಗಳೂ ಇದ್ದವು;

Interlinear

Choose Theme