Home Bibles 2 ದಿನವೃತ್ತಾಂತ 5:7 · ಕನ್ನಡ ಬೈಬಲ್
2 ದಿನವೃತ್ತಾಂತ 5:7 · ಕನ್ನಡ ಬೈಬಲ್

ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಅತಿಪರಿಶುದ್ಧ ಸ್ಥಳಕ್ಕೆ ಆಲಯದ ದೈವೋಕ್ತಿ ಸ್ಥಾನಕ್ಕೆ ಕೆರೂಬಿಗಳ ರೆಕ್ಕೆಗಳ ಕೆಳಗಿದ್ದ ಅದರ ಸ್ಥಳಕ್ಕೆ ತಂದುಬಿಟ್ಟರು.

Cross references

ನಿರ್ಗಮಕಾಂಡ 37:6

ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು.

1 ಅರಸುಗಳು 6:23

ಅವನು ದೈವೋಕ್ತಿಯ ಸ್ಥಾನದಲ್ಲಿ ಇಪ್ಪೇ ಮರಗಳಿಂದ ಎರಡು ಕೆರೂಬಿಗಳನ್ನು ಮಾಡಿದನು. ಒಂದೊಂದು ಹತ್ತು ಮೊಳ ಎತ್ತರವಾಗಿತ್ತು.

1 ಅರಸುಗಳು 8:6

ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವೆಂಬ ದೈವೋ ಕ್ತಿಯ ಮಂದಿರದ ಸ್ಥಾನಕ್ಕೆ ತಂದು ಕೆರೂಬಿಗಳ ರೆಕ್ಕೆಗಳ ಕೆಳಗೆ ಅದರ ಸ್ಥಳದಲ್ಲಿ ಇಟ್ಟರು.

2 ದಿನವೃತ್ತಾಂತ 4:20

ಶುದ್ಧ ಬಂಗಾರವಾದ ದೈವೋಕ್ತಿಯ ಸ್ಥಾನದ ಮುಂದೆ ನ್ಯಾಯದ ಪ್ರಕಾರ ಹತ್ತಿರದ ದೀಪ ಸ್ತಂಭಗಳನ್ನೂ

2 ದಿನವೃತ್ತಾಂತ 35:3

ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.

ಕೀರ್ತನೆಗಳು 132:8

ಓ ಕರ್ತನೇ, ನೀನು ಬಲವುಳ್ಳ ನಿನ್ನ ಮಂಜೂಷದೊಂದಿಗೆ ನಿನ್ನ ವಿಶ್ರಾಂತಿಗೆ ಎದ್ದೇಳು.

ಹೆಬ್ರಿಯರಿಗೆ 9:4

ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಕಲ್ಲಿನ ಹಲಿಗೆ ಗಳೂ ಇದ್ದವು;

Interlinear

Choose Theme