Home Bibles ☰ Books ನಿರ್ಗಮಕಾಂಡ 40:20 · ಕನ್ನಡ ಬೈಬಲ್
ನಿರ್ಗಮಕಾಂಡ 40:20 · ಕನ್ನಡ ಬೈಬಲ್

ಅವನು ಪ್ರಮಾಣವನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿ ಇಟ್ಟು ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ ಮಂಜೂಷದ ಮೇಲೆ ಕರುಣಾ ಸನವನ್ನು ಇಟ್ಟನು.

Cross references

ನಿರ್ಗಮಕಾಂಡ 16:34

ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಅದನ್ನು (ಮನ್ನ ವನ್ನು) ಕಾಪಾಡುವದಕ್ಕೆ ಸಾಕ್ಷಿಯಾಗಿ ಇಟ್ಟನು.

ನಿರ್ಗಮಕಾಂಡ 25:16

ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು.

ನಿರ್ಗಮಕಾಂಡ 31:18

ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.

ನಿರ್ಗಮಕಾಂಡ 37:6

ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು.

ನಿರ್ಗಮಕಾಂಡ 40:3

ಮಂಜೂಷದ ಸಾಕ್ಷಿಯ ಪೆಟ್ಟಿಗೆಯನ್ನು ಒಳಗಿಟ್ಟು ಅದನ್ನು ನೀನು ತೆರೆಯಿಂದ ಮುಚ್ಚಬೇಕು.

ದ್ವಿತೀಯೋಪದೇಶಕಾಂಡ 10:5

ತರುವಾಯ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದು ಆ ಹಲಗೆ ಗಳನ್ನು ನಾನು ಮಾಡಿದ ಮಂಜೂಷದಲ್ಲಿ ಇಟ್ಟೆನು. ಕರ್ತನು ನನಗೆ ಆಜ್ಞಾಪಿಸಿದ ಹಾಗೆ ಅವು ಅಲ್ಲಿಯೇ ಇರುತ್ತವೆ.

1 ಅರಸುಗಳು 8:9

ಇಸ್ರಾಯೇಲ್‌ ಮಕ್ಕಳು ಐಗುಪ್ತ ದೇಶದೊಳಗಿಂದ ಬಂದ ಕಾಲದಲ್ಲಿ ಕರ್ತನು ಅವರಿಗೆ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬಿನ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತಾಗಿ ಅದರಲ್ಲಿ ಮತ್ತೇನೂ ಇರಲಿಲ್ಲ.

ಕೀರ್ತನೆಗಳು 40:8

ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ.

ಮತ್ತಾಯ 3:15

ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು. ಆಗ ಅವನು ಒಪ್ಪಿಕೊಂಡನು.

ರೋಮಾಪುರದವರಿಗೆ 3:25

ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ

ರೋಮಾಪುರದವರಿಗೆ 10:4

ನಂಬುವ ಪ್ರತಿಯೊಬ್ಬನು ನೀತಿವಂತನಾಗುವಂತೆ ಕ್ರಿಸ್ತನು ನ್ಯಾಯಪ್ರಮಾಣದ ಅಂತ್ಯವಾಗಿದ್ದಾನೆ.

ಹೆಬ್ರಿಯರಿಗೆ 4:16

ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.

Interlinear

Choose Theme