Home Bibles ಮೀಕ 7:2 · ಕನ್ನಡ ಬೈಬಲ್
ಮೀಕ 7:2 · ಕನ್ನಡ ಬೈಬಲ್

ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.

Cross references

1 ಸಮುವೇಲ 24:11

ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.

1 ಸಮುವೇಲ 26:20

ಆದದರಿಂದ ಕರ್ತನ ಮುಖದ ಮುಂದೆ ನನ್ನ ರಕ್ತವು ನೆಲದ ಮೇಲೆ ಬೀಳದಿರಲಿ. ಯಾಕಂದರೆ ಒಬ್ಬನು ಬೆಟ್ಟಗಳಲ್ಲಿ ಕೌಜುಗವನ್ನು ಬೇಟೆಯಾಡುವಂತೆ ಇಸ್ರಾಯೇಲಿನ ಅರಸನು ಒಂದು ಕೀಟವನ್ನು ಹುಡು ಕಲು ಹೊರಟನು ಎಂಬದೇ.

ಕೀರ್ತನೆಗಳು 10:9

ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ.

ಕೀರ್ತನೆಗಳು 12:1

ಕರ್ತನೇ, ಸಹಾಯಮಾಡು; ಯಾಕಂದರೆ ಭಕ್ತನು ಮುಗಿದು ಹೋಗುತ್ತಾನೆ; ನಂಬಿಗಸ್ತರು ಮನುಷ್ಯನ ಮಕ್ಕಳೊಳಗಿಂದ ಇಲ್ಲದೆ ಹೋಗುತ್ತಾರೆ.

ಕೀರ್ತನೆಗಳು 12:2

ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.

ಕೀರ್ತನೆಗಳು 14:1

ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.

ಕೀರ್ತನೆಗಳು 57:6

ಅವರು ನನ್ನ ಹೆಜ್ಜೆಗಳಿಗೆ ಬಲೆಯೊಡ್ಡಿದ್ದಾರೆ. ನನ್ನ ಪ್ರಾಣವು ಕುಗ್ಗಿಹೋಗಿದೆ; ನನ್ನ ಮುಂದೆ ಕುಣಿಯನ್ನು ಅಗೆದು ಅದರ ನಡುವೆ ತಾವೇ ಬಿದ್ದಿದ್ದಾರೆ. ಸೆಲಾ.

ಸಾಮೇತಿಗಳು 1:11

ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ.

ಸಾಮೇತಿಗಳು 12:6

ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.

ಯೆಶಾಯ 3:5

ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.

ಯೆಶಾಯ 57:1

ನೀತಿವಂತನು ನಾಶವಾಗುವನು, ಅದನ್ನು ಯಾವ ಮನುಷ್ಯನು ಮನಸ್ಸಿಗೆ ತಾರನು. ಕರುಣೆಯುಳ್ಳ ಮನುಷ್ಯರು ತೆಗೆದುಹಾಕಲ್ಪಡುವರು, ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾಗು ತ್ತಾನೆಂಬದನ್ನು ಯಾರೂ ಯೋಚಿಸರು.

ಯೆಶಾಯ 59:7

ಅವರ ಕಾಲುಗಳು ಕೇಡಿಗೆ ಓಡುತ್ತವೆ; ಅಪರಾಧವಿಲ್ಲದ ರಕ್ತ ವನ್ನು ಚೆಲ್ಲುವದಕ್ಕೆ ತ್ವರೆಪಡುತ್ತವೆ. ಅವರ ಆಲೋ ಚನೆ ಗಳು ದುಷ್ಟತನದ ಆಲೋಚನೆಗಳೇ; ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿ ಅವೆ.

ಯೆರೆಮಿಯ 5:16

ಕರ್ತನು ಹೀಗೆ ಹೇಳುತ್ತಾನೆ--ಮಾರ್ಗಗಳಲ್ಲಿ ನಿಂತುಕೊಂಡು ನೋಡಿರಿ; ಮೊದಲಿನ ಹಾದಿಗಳನ್ನು ಕೇಳಿಕೊಳ್ಳಿರಿ; ಒಳ್ಳೇ ಮಾರ್ಗ ಎಲ್ಲಿದೆಯೋ ಅದರಲ್ಲಿ ನಡೆಯಿರಿ; ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಸಿಕ್ಕು ವದು ಅಂದನು. ಆದರೆ ಅವರು--ನಾವು ನಡೆ ಯುವದಿಲ್ಲ ಅಂದರು.

ಯೆರೆಮಿಯ 5:26

ನನ್ನ ಜನರ ಕುಮಾರಿಯೇ, ಗೋಣಿತಟ್ಟನ್ನು ಕಟ್ಟಿಕೋ, ಬೂದಿಯಲ್ಲಿ ಹೊರಳಾಡು; ಒಬ್ಬನೇ ಮಗನಿಗೋಸ್ಕರ ಮಾಡುವ ದುಃಖದ ಪ್ರಕಾರ ಬಹುಕಠಿಣವಾದ ಗೋಳಾಟವನ್ನು ಮಾಡು; ಸೂರೆ ಮಾಡುವವನು ಫಕ್ಕನೆ ನಮ್ಮ ಮೇಲೆ ಬರುವನು.

ಯೆರೆಮಿಯ 16:16

ಆದರೆ ನಾನು ನಿನ್ನನ್ನು ಹಿಂಬಾಲಿಸುವ ಪಾಲಕ ನಾಗಲು ಹಿಂಜರಿಯಲಿಲ್ಲ; ದುರ್ದಿನವನ್ನು ಅಪೇಕ್ಷಿಸ ಲಿಲ್ಲವೆಂದು ನೀನು ಬಲ್ಲೆ; ನನ್ನ ತುಟಿಗಳಿಂದ ಹೊರ ಟದ್ದು ನಿನ್ನ ಸನ್ನಿಧಿಯಲ್ಲಿ ಸರಿಯಾಗಿತ್ತು.

ವಿಲಾಪಗಳು 4:18

ನಾವು ನಮ್ಮ ಬೀದಿಗಳಲ್ಲಿ ಹೋಗದ ಹಾಗೆ, ಅವರು ನಮ್ಮ ಹೆಜ್ಜೆಗಳನ್ನೇ ಬೇಟೆಯಾಡುತ್ತಾರೆ; ನಮ್ಮ ಅಂತ್ಯವು ಸವಿಾಪಿಸಿತು, ನಮ್ಮ ದಿನಗಳು ತುಂಬಿದವು; ನಮ್ಮ ಅಂತ್ಯವು ಬಂದಿತು.

ಹೊಶೇಯ 6:9

ಕಳ್ಳರ ಗುಂಪು ಮನುಷ್ಯನಿಗೋಸ್ಕರ ಕಾಯುವ ಪ್ರಕಾರ ಯಾಜಕರ ಗುಂಪು ಒಪ್ಪಿಗೆಯಿಂದ ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ.

ಮೀಕ 3:10

ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ.

ಹಬಕ್ಕೂಕ 1:15

ಅವರನ್ನೆಲ್ಲಾ ಗಾಳದಿಂದ ಎತ್ತಿ ತಮ್ಮ ಬಲೆಯಿಂದ ಅವರನ್ನು ಹಿಡಿದು ತಮ್ಮ ಜಾಲದಿಂದ ಅವರನ್ನು ಕೂಡಿಸುತ್ತಾರೆ; ಆದದರಿಂದ ಸಂತೋಷಿಸಿ ಉಲ್ಲಾಸ ಪಡುತ್ತಾರೆ.

ಅಪೋಸ್ತಲರ ಕೃತ್ಯಗಳು 24:9

ಅದೇ ಪ್ರಕಾರ ಇವೆಲ್ಲವುಗಳು ನಿಜವೆಂದು ಯೆಹೂ ದ್ಯರು ಸಹ ಸಮ್ಮತಿಸಿದರು ಅಂದನು.

ರೋಮಾಪುರದವರಿಗೆ 3:10

ಬರೆದಿರುವ ಪ್ರಕಾರ--ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;

Interlinear

Choose Theme