Home Bibles 2 ದಿನವೃತ್ತಾಂತ 24:18 · ಕನ್ನಡ ಬೈಬಲ್
2 ದಿನವೃತ್ತಾಂತ 24:18 · ಕನ್ನಡ ಬೈಬಲ್

ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು.

Cross references

ನಿರ್ಗಮಕಾಂಡ 34:13

ಆದರೆ ನೀವು ಅವರ ಯಜ್ಞ ವೇದಿಗಳನ್ನು ಹಾಳುಮಾಡಿ ವಿಗ್ರಹಗಳನ್ನು ಒಡೆದು (ಅಶೇರ) ವಿಗ್ರಹ ಸ್ತಂಭಗಳನ್ನು ಕಡಿದುಹಾಕಬೇಕು.

ಯೆಹೋಶುವ 22:20

ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.

ನ್ಯಾಯಾಧಿಪತಿಗಳು 5:8

ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?

ನ್ಯಾಯಾಧಿಪತಿಗಳು 8:33

ಗಿದ್ಯೋನನು ಸತ್ತತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ತಿರುಗಿಕೊಂಡು ಬಾಳನ ಹಿಂದೆ ಜಾರರಾಗಿ ಹೋಗಿ ಬಾಳ್‌ಬೆರೀತನನ್ನು ತಮಗೆ ದೇವರಾಗಿ ಮಾಡಿಕೊಂಡರು.

2 ಸಮುವೇಲ 24:1

ಕರ್ತನ ಕೋಪವು ತಿರಿಗಿ ಇಸ್ರಾಯೇಲಿಗೆ ವಿರೋಧವಾಗಿ ಉರಿಯಿತು; ಆಗ ಇಸ್ರಾ ಯೇಲನ್ನೂ ಯೆಹೂದವನ್ನೂ ಲೆಕ್ಕಿಸಲು ಹೋಗೆಂದು ಆತನು ದಾವೀದನನ್ನು ಪ್ರೇರೇಪಿಸಿದನು.

1 ಅರಸುಗಳು 11:4

ಸೊಲೊಮೋನನು ಮುದುಕನಾದ ಕಾಲದಲ್ಲಿ ಏನಾಯಿತಂದರೆ, ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗ ಮಾಡಿದರು. ಅವನ ಹೃದಯವು ತನ್ನ ತಂದೆಯಾದ ದಾವೀದನ ಹೃದಯದ ಹಾಗೆ ತನ್ನ ದೇವರಾದ ಕರ್ತನ ಸಂಗಡ ಪರಿಪೂರ್ಣವಾಗಿ ಇರಲಿಲ್ಲ.

1 ಅರಸುಗಳು 14:9

ನೀನು ಹೋಗಿ ನನಗೆ ಕೋಪ ವನ್ನೆಬ್ಬಿಸುವ ಅನ್ಯ ದೇವರುಗಳನ್ನೂ ಎರಕ ಹೊಯ್ಯ ಲ್ಪಟ್ಟ ವಿಗ್ರಹಗಳನ್ನೂ ನಿನಗೆ ಮಾಡಿಕೊಂಡು ನನ್ನನ್ನು ನಿನ್ನ ಬೆನ್ನಿನ ಹಿಂದಕ್ಕೆ ಹಾಕಿದಿ.

1 ಅರಸುಗಳು 14:23

ಅವರು ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ ಹಸುರಾದ ಪ್ರತಿ ಗಿಡದ ಕೆಳಗೂ ತೋಪು ಗಳನ್ನು ವಿಗ್ರಹಗಳನ್ನು ಉನ್ನತ ಸ್ಥಳಗಳನ್ನು ತಮಗಾಗಿ ಮಾಡಿಕೊಂಡರು. ಇದಲ್ಲದೆ ದೇಶದಲ್ಲಿ ಪುರುಷ ಸಂಗಮರಿದ್ದರು.

2 ದಿನವೃತ್ತಾಂತ 12:1

ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ ಏನಾಯಿ ತಂದರೆ, ಅವನೂ ಅವನ ಸಂಗಡ ಸಮಸ್ತ ಇಸ್ರಾ ಯೇಲ್ಯರೂ ಕರ್ತನ ನ್ಯಾಯಪ್ರಮಾಣವನ್ನು ಬಿಟ್ಟು ಬಿಟ್ಟರು.

2 ದಿನವೃತ್ತಾಂತ 12:2

ರೆಹಬ್ಬಾಮನು ಅರಸನಾದ ಐದನೇ ವರುಷ ದಲ್ಲಿ ಏನಾಯಿತಂದರೆ, ಅವರು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದ್ದರಿಂದ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಬಂದನು.

2 ದಿನವೃತ್ತಾಂತ 19:2

ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.

2 ದಿನವೃತ್ತಾಂತ 21:13

ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು ಅಹಾಬನ ಮನೆಯ ವ್ಯಭಿಚಾರಿ ಗಳ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ವ್ಯಭಿಚಾರ ಮಾಡಲು ಪ್ರೇರೇಪಿಸಿ ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆ ಯವರಾದ ನಿನ್ನ ಸಹೋದರರನ್ನು ಕೊಂದುಹಾಕಿ ದ್ದರಿಂದ

2 ದಿನವೃತ್ತಾಂತ 22:4

ಆದಕಾರಣ ಅವನು ಅಹಾಬನ ಮನೆಯವರ ಹಾಗೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನ ತಂದೆ ಸತ್ತ ತರುವಾಯ ಇವರು ಅವರ ನಾಶನಕ್ಕೆ ಅವನ ಸಲಹೆಗಾರರಾಗಿದ್ದರು.

2 ದಿನವೃತ್ತಾಂತ 24:4

ಇದರ ತರುವಾಯ ಏನಾಯಿತಂದರೆ, ಯೆಹೋ ವಾಷನು ಕರ್ತನ ಆಲಯವನ್ನು ದುರಸ್ತು ಮಾಡುವ ಮನಸ್ಸುಳ್ಳವನಾಗಿದ್ದನು.

2 ದಿನವೃತ್ತಾಂತ 25:15

ಆದಕಾರಣ ಕರ್ತನ ಕೋಪವು ಅಮಚ್ಯನ ಮೇಲೆ ಹೊತ್ತಿತು; ಆತನು ಅವನ ಬಳಿಗೆ ಪ್ರವಾದಿ ಯನ್ನು ಕಳುಹಿಸಿದನು. ಅವನು ಅವನಿಗೆ--ತಮ್ಮ ಜನ ರನ್ನು ನಿನ್ನ ಕೈಯಿಂದ ತಪ್ಪಿಸಲಾರದ ದೇವರುಗಳನ್ನು ನೀನು ಹುಡುಕುವದೇನು ಅಂದನು.

2 ದಿನವೃತ್ತಾಂತ 28:13

ಅವರಿಗೆ--ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ ಎಂದು ಹೇಳಿದರು; ಯಾಕಂದರೆ ನಾವು ಕರ್ತನಿಗೆ ವಿರೋಧವಾಗಿ ಅಪರಾಧ ಮಾಡಿ ದ್ದೇವೆ. ನೀವು ನಮ್ಮ ಪಾಪಗಳನ್ನೂ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾ ಧವು ದೊಡ್ಡದಾಗಿದೆ; ಇಸ್ರಾಯೇಲಿನ ಮೇಲೆ ಉಗ್ರ ಕೋಪವು ಉಂಟಾಯಿತು ಅಂದರು.

2 ದಿನವೃತ್ತಾಂತ 29:8

ಆದದರಿಂದ ಯೆಹೂದದ ಮೇಲೆ ಯೂ ಮತ್ತು ಯೆರೂಸಲೇಮಿನವರ ಮೇಲೆಯೂ ಕರ್ತನ ರೌದ್ರವಾಯಿತು; ನೀವು ನಿಮ್ಮ ಕಣ್ಣುಗಳಿಂದ ನೋಡುವ ಹಾಗೆ ಆತನು ಅವರನ್ನು ಕಳವಳಕ್ಕೂ ವಿಸ್ಮಯಕ್ಕೂ ಅಪಹಾಸ್ಯಕ್ಕೂ ಒಪ್ಪಿಸಿಕೊಟ್ಟನು.

2 ದಿನವೃತ್ತಾಂತ 32:25

ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು.

2 ದಿನವೃತ್ತಾಂತ 33:3

ಏನಂದರೆ, ಅವನು ತನ್ನ ತಂದೆಯಾದ ಹಿಜ್ಕೀಯನು ಕೆಡವಿಹಾಕಿದ ಉನ್ನತ ಸ್ಥಳಗಳನ್ನು ತಿರಿಗಿ ಕಟ್ಟಿಸಿ ಬಾಳನಿಗೆ ಬಲಿಪೀಠ ಗಳನ್ನು ಎಬ್ಬಿಸಿ ತೋಪುಗಳನ್ನು ಹಾಕಿ ಆಕಾಶದ ಸೈನ್ಯ ಕ್ಕೆಲ್ಲಾ ಅಡ್ಡಬಿದ್ದು ಅವುಗಳನ್ನು ಸೇವಿಸಿದನು.

2 ದಿನವೃತ್ತಾಂತ 34:25

ಯಾಕಂದರೆ ತಮ್ಮ ಸಮಸ್ತ ಕೈ ಕ್ರಿಯೆಗಳಿಂದ ನನಗೆ ಕೋಪವನ್ನೆಬ್ಬಿಸುವ ಹಾಗೆ ಅವರು ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಸುರಿಸಲ್ಪಡುವದು; ಅದು ಆರಿಹೋಗುವದಿಲ್ಲ.

2 ದಿನವೃತ್ತಾಂತ 36:14

ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.

ಹೊಶೇಯ 5:10

ಯೆಹೂದದ ಪ್ರಭುಗಳು ಮೇರೆಗಳನ್ನು ಬಿಡಿಸುವವರ ಹಾಗೆ ಇದ್ದರು; ಆದದರಿಂದ ಅವರ ಮೇಲೆ ನೀರಿನ ಹಾಗೆ ನನ್ನ ಕೋಪವನ್ನು ಸುರಿಸುವೆನು.

ಹೊಶೇಯ 5:14

ನಾನು ಎಫ್ರಾಯಾಮಿಗೆ ಸಿಂಹದ ಹಾಗೆಯೂ ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ಹೌದು, ನಾನು, ನಾನೇ ಸೀಳಿಬಿಟ್ಟು ಹೋಗುವೆನು, ನಾನು ಎತ್ತಿಕೊಂಡು ಹೋಗಲು ಅವನನ್ನು ಯಾರೂ ಬಿಡಿಸಲಾರರು.ತಾವು ತಮ್ಮ ಅಪರಾಧವನ್ನು ಅರಿಕೆಮಾಡಿ ನನ್ನ ಮುಖವನ್ನು ಹುಡುಕುವ ವರೆಗೂ ನಾನು ತಿರುಗಿ ಕೊಂಡು ನನ್ನ ಸ್ಥಳಕ್ಕೆ ಹೋಗುವೆನು, ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.

ಸೆಫನ್ಯ 1:4

ಯೆಹೂದದ ಮೇಲೆಯೂ ಯೆರೂಸಲೇಮಿನ ಎಲ್ಲಾ ನಿವಾಸಿಗಳ ಮೇಲೆಯೂ ನನ್ನ ಕೈಚಾಚಿ ಈ ಸ್ಥಳದಿಂದ ಬಾಳನ ಉಳಿದವುಗಳನ್ನೂ ಯಾಜಕರ ಸಂಗಡ ಕೆಮಾರ್ಯರ ಹೆಸರನ್ನೂ

ಎಫೆಸದವರಿಗೆ 5:6

ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.

Interlinear

Choose Theme