ಗಿದ್ಯೋನನು ಸತ್ತತರುವಾಯ ಆದದ್ದೇನಂದರೆ, ಇಸ್ರಾಯೇಲ್ ಮಕ್ಕಳು ತಿರುಗಿಕೊಂಡು ಬಾಳನ ಹಿಂದೆ ಜಾರರಾಗಿ ಹೋಗಿ ಬಾಳ್‌ಬೆರೀತನನ್ನು ತಮಗೆ ದೇವರಾಗಿ ಮಾಡಿಕೊಂಡರು.
Cross references
ಆ ದೇಶ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಬಾರದು. ಅವರು ಅನ್ಯ ದೇವರುಗಳನ್ನು ಆರಾಧಿಸಿ, ಅವುಗಳಿಗೆ ಯಜ್ಞಗಳನ್ನು ಮಾಡುವಾಗ ಒಬ್ಬನು ನಿನ್ನನ್ನು ಕರೆದಾನು; ನೀನು ಅವನ ಬಲಿಯನ್ನು ತಿನ್ನ ಬೇಕಾದೀತು.
ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ತರುವಾಯ ಕರ್ತನು ಇಸ್ರಾಯೇಲಿಗೆ ಮಾಡಿದ ಸಕಲಕಾರ್ಯಗಳನ್ನು ಅರಿತಿದ್ದ ಹಿರಿಯರ ಸಕಲ ದಿನಗಳಲ್ಲಿಯೂ ಇಸ್ರಾಯೇಲ್ಯರು ಕರ್ತನನ್ನು ಸೇವಿಸಿದರು.
ಆದರೆ ಯೆಹೋಶುವನ ಸಕಲ ದಿನಗಳಲ್ಲಿಯೂ ಕರ್ತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ದೊಡ್ಡ ಕಾರ್ಯಗಳನ್ನು ಕಂಡಂಥ ಯೆಹೋಶುವನ ತರು ವಾಯ ಬದುಕಿದ ಹಿರಿಯರ ಸಕಲ ದಿವಸಗಳಲ್ಲಿಯೂ ಜನರು ಕರ್ತನನ್ನು ಸೇವಿಸಿದರು.
ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ ಅನ್ಯದೇವರುಗಳ ಹಿಂದೆ ಜಾರತ್ವಮಾಡಿ ಅವುಗಳಿಗೆ ಅಡ್ಡಬಿದ್ದು ತಮ್ಮ ತಂದೆಗಳು ಕರ್ತನ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದು ಬಿಟ್ಟರು; ಅವರು ಮಾಡಿದ ಪ್ರಕಾರ ಮಾಡಲಿಲ್ಲ.
ಆ ನ್ಯಾಯಾಧಿಪತಿ ಸತ್ತಾಗ ಅವರು ತಿರುಗಿ ಮಾರ್ಗ ತಪ್ಪಿ ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದು ತಮ್ಮ ತಂದೆಗಳಿಗಿಂತ ಅಧಿಕವಾಗಿ ತಮ್ಮನ್ನು ಕೆಡಿಸಿಕೊಂಡು ತಮ್ಮ ಕೃತ್ಯಗಳನ್ನೂ ತಮ್ಮ ಕಾಠಿಣ್ಯದ ಮಾರ್ಗವನ್ನೂ ಬಿಡದೇ ಹೋದರು.
ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ತಮ್ಮ ದೇವರಾದ ಕರ್ತನನ್ನು ಮರೆತು ಬಾಳ ನನ್ನೂ ತೋಪುಗಳನ್ನೂ ಸೇವಿಸಿದರು.
ಆ ಬಂಗಾರ ದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿ ಇಟ್ಟನು. ಆದರೆ ಇಸ್ರಾಯೇಲ್ಯರೆಲ್ಲಾ ಅದರ ಹಿಂದೆ ಜಾರರಾಗಿ ಹೋದರು. ಅದು ಗಿದ್ಯೋನನಿಗೂ ಅವನ ಮನೆಗೂ ಉರುಲಾಯಿತು.
ಅವರು ಬಾಳ್‌ಬೆರೀತಿನ ಮನೆಯೊಳ ಗಿಂದ ಎಪ್ಪತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು ಅವನಿಗೆ ಕೊಟ್ಟರು. ಅವುಗಳಿಂದ ಅಬೀಮೆಲೆಕನು ನಿಷ್ಪ್ರಯೋಜಕರನ್ನೂ ಬೆಲೆಯಿಲ್ಲದವರನ್ನೂ ಸಂಬಳಕ್ಕೆ ಇಟ್ಟುಕೊಂಡನು. ಅವರು ಅವನ ಹಿಂದೆ ಹೋದರು.
ಹೊರಗೆ ಹೋಗಿ ತಮ್ಮ ದ್ರಾಕ್ಷೇ ಫಲಗಳನ್ನು ಕೊಯಿದು ಅವು ಗಳನ್ನು ತುಳಿದು ಸಂತೋಷಪಟ್ಟು ತಮ್ಮ ದೇವರ ಮನೆಯೊಳಗೆ ಹೋಗಿ ತಿಂದು ಕುಡಿದು ಅಬೀಮೆಲೆಕ ನನ್ನು ಶಪಿಸಿದರು.
ಅದನ್ನು ಶೆಕೆಮಿನ ಗೋಪುರ ದಲ್ಲಿದ್ದ ಜನರೆಲ್ಲರೂ ಕೇಳಿದಾಗ ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಪ್ರವೇಶಿಸಿದರು.
ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
ಅವನ ತಾಯಿಯು ಬೇರ್ಷೆಬ ಊರಿನವಳಾದ ಚಿಬ್ಯಳು. ಆದರೆ ಯಾಜಕನಾದ ಯೆಹೋಯಾ ದಾವನು ಯೆಹೋವಾಷನಿಗೆ ಬೋಧಿಸಿದ ಎಲ್ಲಾ ದಿವಸಗಳಲ್ಲಿ ಅವನು ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು.
ಆದರೆ ಯೆಹೋಯಾದನು ಸತ್ತತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡ ಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು.
ಅವರು ತಮ್ಮ ಪಿತೃಗಳ ದೇವರಾದ ಕರ್ತನ ಆಲಯವನ್ನು ಬಿಟ್ಟು ತೋಪುಗಳನ್ನೂ ವಿಗ್ರಹಗಳನ್ನೂ ಸೇವಿಸಿದರು. ಆದಕಾರಣ ಅವರ ಈ ಅಪರಾಧದ ನಿಮಿತ್ತ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ರೌದ್ರ ಬಂತು.
ಅವಳ ಸೂಳೆತನದ ಸುದ್ದಿಯಿಂದ ಅವಳು ದೇಶವನ್ನು ಅಪವಿತ್ರ ಮಾಡಿ ಕಲ್ಲುಗಳ ಸಂಗ ಡಲೂ ಮರಗಳ ಸಂಗಡಲೂ ವ್ಯಭಿಚಾರ ಮಾಡಿದಳು.