ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
Cross references
ಅಲ್ಲಿಂದ ನಿನ್ನ ದೇವರಾದ ಕರ್ತನನ್ನು ಹುಡುಕಿದರೆ ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಹುಡುಕಿದರೆ, ಆತ ನನ್ನು ಕಂಡುಕೊಳ್ಳುವಿ.
ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣಬಲದಿಂದಲೂ ಪ್ರೀತಿ ಮಾಡಬೇಕು.
ಈಗ ಇಸ್ರಾಯೇಲೇ, ನಿನ್ನ ಕರ್ತನಾದ ದೇವರಿಗೆ ಭಯಪಟ್ಟು ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಕೊಂಡು ಆತನನ್ನು ಪ್ರೀತಿಮಾಡಿ ನಿನ್ನ ಕರ್ತನಾದ ದೇವರಿಗೆ ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಸೇವೆಮಾಡಿ
ಹೋರೇಬಿನಲ್ಲಿ ಅವರ ಸಂಗಡ ಮಾಡಿದ ಒಡಂಬಡಿಕೆಯ ಹೊರತಾಗಿ ಇಸ್ರಾ ಯೇಲ್ ಮಕ್ಕಳ ಸಂಗಡ ಮಾಡಬೇಕೆಂದು ಕರ್ತನು ಮೋಶೆಗೆ ಮೋವಾಬಿನ ದೇಶದಲ್ಲಿ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ;
ನಿನ್ನ ದೇವರಾದ ಕರ್ತನು ಈಹೊತ್ತು ನಿನ್ನ ಸಂಗಡ ಮಾಡುವ ಒಡಂಬಡಿಕೆಯ ಲ್ಲಿಯೂ ಆಣೆಯಲ್ಲಿಯೂ ಸೇರುವದಕ್ಕೆ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಮನುಷ್ಯರೆಲ್ಲರೂ
ನಿಮ್ಮ ಚಿಕ್ಕವರೂ ಪತ್ನಿಯರೂ ನಿನ್ನ ಪಾಳೆಯದಲ್ಲಿರುವ ಪರವಾಸಿಯರೂ ನಿನಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವ ವರೂ ಇದ್ದೀರಿ.
ಯೆಹೋಶುವನು ಆ ಹೊತ್ತು ಶೆಕೆಮಿನಲ್ಲಿ ಜನರ ಸಂಗಡ ಒಡಂಬಡಿಕೆ ಯನ್ನು ಮಾಡಿ ಅದನ್ನು ಅವರಿಗೆ ನಿಯಮವಾಗಿಯೂ ಕಟ್ಟಳೆಯಾಗಿಯೂ ಇಟ್ಟನು.
ತಮ್ಮ ಪೂರ್ಣ ಪ್ರಾಣದಿಂದಲೂ ನಿನ್ನ ಕಡೆಗೆ ತಿರುಗಿಕೊಂಡು ನೀನು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಮಾರ್ಗ ವಾಗಿಯೂ ನೀನು ಆದುಕೊಂಡ ಪಟ್ಟಣದ ಮಾರ್ಗ ವಾಗಿಯೂ ನಿನ್ನ ಹೆಸರಿಗೋಸ್ಕರ ನಾನು ಕಟ್ಟಿಸಿದ ಈ ಮಂದಿರದ ಮಾರ್ಗವಾಗಿಯೂ ಅವರು ನಿನಗೆ ಪ್ರಾರ್ಥನೆ ಮಾಡಿದರೆ
ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.
ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.
ಆದರೆ ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರಿಗಿ ಆತನನ್ನು ಹುಡುಕಿ ದಾಗ ಆತನು ಅವರಿಗೆ ಸಿಕ್ಕಿದನು.
ಆದಾಗ್ಯೂ ನೀನು ದೇಶದಿಂದ ತೋಪು ಗಳನ್ನು ತೆಗೆದುಹಾಕಿ ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ ಅಂದನು.
ಆಗ ಅವರು ಕರ್ತನ ಜನರಾಗಿರುವ ಹಾಗೆ ಯೆಹೋಯಾದನು ತನಗೂ ಸಮಸ್ತ ಜನರಿಗೂ ಅರಸ ನಿಗೂ ಒಡಂಬಡಿಕೆ ಮಾಡಿದನು.
ಈಗ ಇಸ್ರಾಯೇಲಿನ ದೇವರಾದ ಕರ್ತನ ಉಗ್ರಕೋಪವು ನಮ್ಮನ್ನು ಬಿಟ್ಟು ಹೋಗುವ ಹಾಗೆ ನಾನು ಆತನ ಸಂಗಡ ಒಡಂಬಡಿ ಕೆಯನ್ನು ಮಾಡಲು ಮನಸ್ಸುಳ್ಳವನಾಗಿದ್ದೇನೆ.
ಅರಸನು ತನ್ನ ಸ್ಥಳದಲ್ಲಿ ನಿಂತುಕೊಂಡು ಕರ್ತನನ್ನು ಹಿಂಬಾಲಿಸುವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನೂ ತನ್ನ ಪೂರ್ಣಹೃದಯದಿಂದಲೂ ತನ್ನ ಪೂರ್ಣಪ್ರಾಣದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳ ಹಾಗೆ ಮಾಡುವದಕ್ಕೂ ಕರ್ತನ ಮುಂದೆ ಒಡಂಬಡಿಕೆ ಮಾಡಿದನು.
ಇದಲ್ಲದೆ ಅವನು ಯೆರೂಸಲೇಮಿ ನಲ್ಲಿಯೂ ಬೆನ್ಯಾವಿಾನಿನಲ್ಲಿಯೂ ಸಿಕ್ಕಿದವರೆಲ್ಲರನ್ನು ಅದಕ್ಕೆ ಒಪ್ಪುವಂತೆ ಮಾಡಿದನು. ಹಾಗೆಯೇ ಯೆರೂ ಸಲೇಮಿನ ನಿವಾಸಿಗಳು ತಮ್ಮ ಪಿತೃಗಳ ದೇವರ ಒಡಂಬಡಿಕೆಯ ಪ್ರಕಾರ ಮಾಡಿದರು.ಹೀಗೆಯೇ ಯೋಷೀಯನು ಇಸ್ರಾಯೇಲ್ ಮಕ್ಕಳಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದು ಹಾಕಿ ಇಸ್ರಾಯೇಲಿನಲ್ಲಿ ಉಳಿದಿರುವರೆಲ್ಲರೂ ತಮ್ಮ ದೇವರಾದ ಕರ್ತನನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವ ರಾದ ಕರ್ತನನ್ನು ಹಿಂಬಾಲಿಸುವದನ್ನು ಬಿಡದೆ ಇದ್ದರು.
ಇದೆಲ್ಲಾದರ ನಿಮಿತ್ತ ನಾವು ಒಡಂಬಡಿಕೆಯನ್ನು ಸ್ಥಿರಮಾಡಿ ಬರೆಯುತ್ತೇವೆ; ನಮ್ಮ ಪ್ರಧಾನರೂ ಲೇವಿಯರೂ ಯಾಜಕರೂ ಅದಕ್ಕೆ ಮುದ್ರೆ ಹಾಕುತ್ತಾರೆ ಅಂದನು.
ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;
ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಗಾಯವು ಗುಣಹೊಂದದು ನಿನ್ನ ಬಾಸುಂಡೆಯು ಅಘೋರ ವಾದದ್ದು.
ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಇಸ್ರಾಯೇಲಾದರೂ ಯೆಹೂದವಾದರೂ ತನ್ನ ದೇವರಾದ ಸೈನ್ಯಗಳ ಕರ್ತನಿಂದ ಬಿಡಲ್ಪಟ್ಟದ್ದಲ್ಲ.
ಆದರೆ ನ್ಯಾಯಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಬರೆಯಲ್ಪಟ್ಟವುಗಳೆಲ್ಲವನ್ನು ನಂಬಿಕೊಂಡು ಅವರು ಪಾಷಾಂಡವೆಂದು ಹೇಳುವ ಮಾರ್ಗಕ್ಕನುಸಾರವಾಗಿ ನನ್ನ ಪಿತೃಗಳ ದೇವರನ್ನು ಆರಾಧಿಸುವವನಾಗಿದ್ದೇನೆ ಎಂದು ನಾನು ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ.
ನಾವು ನಿರೀಕ್ಷಿಸಿದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.