Home Bibles ದ್ವಿತೀಯೋಪದೇಶಕಾಂಡ 29:1 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 29:1 · ಕನ್ನಡ ಬೈಬಲ್

ಹೋರೇಬಿನಲ್ಲಿ ಅವರ ಸಂಗಡ ಮಾಡಿದ ಒಡಂಬಡಿಕೆಯ ಹೊರತಾಗಿ ಇಸ್ರಾ ಯೇಲ್‌ ಮಕ್ಕಳ ಸಂಗಡ ಮಾಡಬೇಕೆಂದು ಕರ್ತನು ಮೋಶೆಗೆ ಮೋವಾಬಿನ ದೇಶದಲ್ಲಿ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ;

Cross references

ನಿರ್ಗಮಕಾಂಡ 19:3

ಮೋಶೆಯು ದೇವರ ಸನ್ನಿಧಿಗೆ ಹೋದನು. ಆಗ ಕರ್ತನು ಪರ್ವತದ ಮೇಲಿನಿಂದ ಅವನನ್ನು ಕರೆದು ಅವನಿಗೆ--ನೀನು ಯಾಕೋಬನ ಮನೆತನದವರಾದ ಇಸ್ರಾಯೇಲ್‌ ಮಕ್ಕಳಿಗೆ ಹೀಗೆ ಹೇಳು--

ನಿರ್ಗಮಕಾಂಡ 19:4

ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ;

ನಿರ್ಗಮಕಾಂಡ 24:2

ಮೋಶೆ ಒಬ್ಬನೇ ಕರ್ತನ ಸವಿಾಪಕ್ಕೆ ಬರಲಿ; ಆದರೆ ಅವರು ಸವಿಾಪಕ್ಕೆ ಬರಬಾರದು. ಇಲ್ಲವೆ ಜನರು ಅವನ ಸಂಗಡ ಬರಬಾರದು ಎಂದು ಹೇಳಿದನು.

ಲೇವ್ಯಕಾಂಡ 26:44

ಆದಾಗ್ಯೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ತಳ್ಳಿಬಿಡದೆಯೂ ಅಸಹ್ಯಿಸದೆಯೂ ಸಂಪೂರ್ಣವಾಗಿ ನಾಶಮಾಡದೆಯೂ ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು; ಅವರ ದೇವರಾಗಿರುವ ಕರ್ತನು ನಾನೇ.

ದ್ವಿತೀಯೋಪದೇಶಕಾಂಡ 1:1

ಮೋಶೆಯು ಎಲ್ಲಾ ಇಸ್ರಾಯೇಲ್ಯರಿಗೆ ಯೊರ್ದನಿನ ಈಚೆಯಲ್ಲಿರುವ ಅರಣ್ಯ ದಲ್ಲಿ, ಕೆಂಪು ಸಮುದ್ರಕ್ಕೆ ಎದುರಾಗಿರುವ ಬೈಲಿನಲ್ಲಿ, ಪಾರಾನ್‌, ತೋಫೆಲ್‌, ಲಾಬಾನ್‌, ಹಚೇರೋತ್‌, ದೀಜಾಹಾಬ್‌ ಎಂಬವುಗಳ ಮಧ್ಯದಲ್ಲಿ ಹೇಳಿದ ಮಾತುಗಳು ಇವೇ.

ದ್ವಿತೀಯೋಪದೇಶಕಾಂಡ 4:10

ನೀನು ಹೋರೇಬಿನಲ್ಲಿ ಕರ್ತನ ಮುಂದೆ ನಿಂತ ದಿವಸ ಉಂಟಲ್ಲವೇ? ಆಗ ಕರ್ತನು ನನಗೆ--ಜನರನ್ನು ನನಗಾಗಿ ಕೂಡಿಸು; ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿ ರುವದನ್ನು ಕಲಿತು ತಮ್ಮ ಮಕ್ಕಳಿಗೂ ಬೋಧಿಸುವ ಹಾಗೆ ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡು ವೆನು ಅಂದನು

ದ್ವಿತೀಯೋಪದೇಶಕಾಂಡ 4:13

ಆತನು ಹತ್ತು ಆಜ್ಞೆಗಳೆಂಬ ತನ್ನ ಒಡಂಬಡಿಕೆಯನ್ನು ನಿಮಗೆ ತಿಳಿಸಿ ಅದನ್ನು ಅನುಸರಿಸಬೇಕೆಂದು ನಿಮಗೆ ಆಜ್ಞಾಪಿಸಿ ಅವುಗಳನ್ನು ಕಲ್ಲಿನ ಎರಡು ಹಲಗೆಗಳ ಮೇಲೆ ಬರೆದನು.

ದ್ವಿತೀಯೋಪದೇಶಕಾಂಡ 4:23

ನಿಮ್ಮ ದೇವರಾದ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತು ನಿಮ್ಮ ದೇವರಾದ ಕರ್ತನು ಬೇಡವೆಂದು ಕೆತ್ತಿದ ಯಾವ ರೂಪದ ವಿಗ್ರಹ ವನ್ನೂ ಮಾಡಿಕೊಳ್ಳದ ಹಾಗೆ ಜಾಗ್ರತೆಯಾಗಿರ್ರಿ.

ದ್ವಿತೀಯೋಪದೇಶಕಾಂಡ 5:2

ನಮ್ಮ ದೇವರಾದ ಕರ್ತನು ಹೋರೇ ಬಿನಲ್ಲಿ ನಮ್ಮ ಸಂಗಡ ಆ ಒಡಂಬಡಿಕೆಯನ್ನು ಮಾಡಿದನು.

ದ್ವಿತೀಯೋಪದೇಶಕಾಂಡ 29:12

ನಿಮ್ಮ ಚಿಕ್ಕವರೂ ಪತ್ನಿಯರೂ ನಿನ್ನ ಪಾಳೆಯದಲ್ಲಿರುವ ಪರವಾಸಿಯರೂ ನಿನಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವ ವರೂ ಇದ್ದೀರಿ.

ದ್ವಿತೀಯೋಪದೇಶಕಾಂಡ 29:21

ಈ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಕರ್ತನು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವನು.

ದ್ವಿತೀಯೋಪದೇಶಕಾಂಡ 29:25

ಆಗ ಜನರು--ಅವರು ತಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ತರುವಾಗ ತಮ್ಮ ಪಿತೃಗಳ ದೇವರಾದ ಕರ್ತನು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟು,

1 ಸಮುವೇಲ 12:24

ಆದರೆ ನೀವು ಕರ್ತನಿಗೆ ಭಯ ಪಟ್ಟು ನಿಮ್ಮ ಪೂರ್ಣ ಹೃದಯದಿಂದ ಸತ್ಯದಲ್ಲಿ ಆತ ನನ್ನು ಸೇವಿಸಿರಿ. ಆತನು ನಿಮಗೋಸ್ಕರ ಎಂಥ ಮಹತ್ತಾದ ಕಾರ್ಯಗಳನ್ನು ಮಾಡಿದನೆಂದು ಆಲೋ ಚಿಸಿರಿ.ಆದರೆ ನೀವು ಕೆಟ್ಟತನವನ್ನು ಇನ್ನೂ ಮಾಡಿದರೆ ನೀವೂ ನಿಮ್ಮ ಅರಸನೂ ನಾಶವಾಗುವಿರಿ ಅಂದನು.

2 ಅರಸುಗಳು 23:3

ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.

ಕೀರ್ತನೆಗಳು 105:27

ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು.

ಯೆರೆಮಿಯ 11:2

ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.

ಯೆರೆಮಿಯ 11:6

ನಿನ್ನ ಸಹೋದರರೂ ನಿನ್ನ ತಂದೆಯ ಮನೆತನದವರೂ ಇವರೇ ನಿನಗೆ ವಂಚನೆ ಮಾಡಿದ್ದಾರೆ; ಹೌದು, ಇವರೇ ನಿನ್ನ ಹಿಂದೆ ಸಮೂಹವನ್ನು ಕರೆದಿದ್ದಾರೆ, ಅವರು ನಿನಗೆ ಒಳ್ಳೇ ಮಾತುಗಳನ್ನು ಹೇಳಿದರೂ ಅವರನ್ನು ನಂಬಬೇಡ.

ಯೆರೆಮಿಯ 31:32

ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಅವರ ಅರಸರೂ ಪ್ರಧಾನರೂ ಯಾಜಕರೂ ಪ್ರವಾದಿ ಗಳೂ ಯೆಹೂದದ ಜನರೂ ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತ ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು.

ಯೆರೆಮಿಯ 34:18

ರೇಕಾಬ್ಯರ ಮನೆಯವರಿಗೆ ಯೆರೆವಿಾಯನು ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನೀವು ನಿಮ್ಮ ಪಿತೃಗಳಾದ ಯೋನಾದಾಬನ ಆಜ್ಞೆ ಯನ್ನು ಕೇಳಿ ಅವನ ಆಜ್ಞೆಗಳನೆಲ್ಲಾ ಕೈಕೊಂಡು ಅವನು ನಿಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದರಿಂದ,ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ರೇಕಾಬನ ಮಗನಾದ ಯೋನಾ ದಾಬ ಸಂತಾನದವರೊಳಗೆ ನನ್ನ ಮುಂದೆ ನಿಲ್ಲತಕ್ಕ ಮನುಷ್ಯನು ಎಂದಿಗೂ ಇಲ್ಲದೆ ಹೋಗುವದಿಲ್ಲ.

ಅಪೋಸ್ತಲರ ಕೃತ್ಯಗಳು 3:25

ಇದಲ್ಲದೆ ಅಬ್ರಹಾಮನಿಗೆ--ನಿನ್ನ ಸಂತ ತಿಯ ಮೂಲಕ ಭೂಲೋಕದ ಎಲ್ಲಾ ಕುಲದವರು ಆಶೀರ್ವದಿಸಲ್ಪಡುವರು ಎಂದು ದೇವರು ನಮ್ಮ ಪಿತೃಗಳೊಂದಿಗೆ ಮಾಡಿದ ಒಡಂಬಡಿಕೆಯ ಮಕ್ಕಳೂ ಪ್ರವಾದಿಗಳ ಮಕ್ಕಳೂ ನೀವಾಗಿದ್ದೀರಿ.ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.

ಹೆಬ್ರಿಯರಿಗೆ 8:9

ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶ ದೊಳಗಿಂದ ಕರಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾ ದದರಿಂದ ನಾನು ಅವರನ್ನು ಲಕ್ಷ್ಯಕ್ಕೆ ತರಲಿಲ್ಲ ಎಂದು ಕರ್ತನು ಹೇಳುತ್ತಾನೆ.

Interlinear

Choose Theme