ಆದಾಗ್ಯೂ ನೀನು ದೇಶದಿಂದ ತೋಪು ಗಳನ್ನು ತೆಗೆದುಹಾಕಿ ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ ಅಂದನು.
Cross references
ಇದಲ್ಲದೆ ಸಮಸ್ತ ಇಸ್ರಾ ಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಡುವರು; ಯಾಕಂದರೆ ಯಾರೊಬ್ಬಾಮನ ವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು; ಯಾರೊಬ್ಬಾಮನ ಮನೆಯೊಳಗೆ ಅವನು ಇಸ್ರಾಯೇ ಲಿನ ದೇವರಾದ ಕರ್ತನ ದೃಷ್ಟಿಗೆ ಒಳ್ಳೆಯವನಾಗಿ ದ್ದನು.
ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.
ಅವನು ತನ್ನನ್ನು ತಗ್ಗಿಸಿಕೊಂಡಾಗ ಕರ್ತನ ಕೋಪವು ಅವನನ್ನು ಬಿಟ್ಟು ತಿರುಗಿತು; ಆತನು ಪೂರ್ಣವಾಗಿ ನಾಶಮಾಡಲು ಮನಸ್ಸಿಲ್ಲದೆ ಇದ್ದನು; ಯೆಹೂದದಲ್ಲಿ ಕಾರ್ಯಗಳು ಚೆನ್ನಾಗಿ ನಡೆದವು.
ಅವನು ಕರ್ತನನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಪಡಿಸದೆ ಇದ್ದದ್ದರಿಂದ ಕೆಟ್ಟದ್ದನ್ನು ಮಾಡಿ ದನು.
ತಮ್ಮ ಪಿತೃಗಳ ದೇವರಾದ ಕರ್ತನನ್ನು ತಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದ ಲೂ ಹುಡುಕಬೇಕೆಂದೂ
ಇದಲ್ಲದೆ ಯೆಹೂದದವರೆಲ್ಲರೂ ಪ್ರಮಾಣಕ್ಕೆ ಸಂತೋಷಪಟ್ಟರು. ಅವರು ತಮ್ಮ ಪೂರ್ಣಹೃದಯ ದಿಂದ ಆಣೆ ಇಟ್ಟು ತಮ್ಮ ಪೂರ್ಣ ಇಷ್ಟದಿಂದ ಆತನನ್ನು ಹುಡುಕಲು ಆತನು ಅವರಿಗೆ ಸಿಕ್ಕಿದನು. ಕರ್ತನು ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು.
ಯೆಹೋಷಾಫಾಟನು ಬಾಳೀಮ್ ನನ್ನು ಹುಡುಕದೆ ತನ್ನ ತಂದೆಯಾದ ದಾವೀದನ ಮೊದಲಿನ ಮಾರ್ಗಗಳಲ್ಲಿ ನಡೆದದ್ದರಿಂದ ಕರ್ತನು ಅವನ ಸಂಗಡ ಇದ್ದನು.
ಅವನ ಹೃದಯವು ಕರ್ತನ ಮಾರ್ಗಗಳಲ್ಲಿ ಎತ್ತಲ್ಪಟ್ಟಿತು. ಇದಲ್ಲದೆ ಅವನು ಯೆಹೂ ದದಲ್ಲಿದ್ದ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ತೆಗೆದು ಹಾಕಿದನು.
ಇದಲ್ಲದೆ ಅವನು ಅಹಜ್ಯನನ್ನು ಹುಡುಕಿದನು; ಅವನು ಸಮಾರ್ಯದಲ್ಲಿ ಬಚ್ಚಿಟ್ಟು ಕೊಂಡದ್ದರಿಂದ ಅವನನ್ನು ಹಿಡಿದು ಯೇಹು ವಿನ ಬಳಿಗೆ ಅವನನ್ನು ತಕ್ಕೊಂಡು ಬಂದು ಅವನನ್ನು ಕೊಂದುಹಾಕಿ ಹೂಣಿಟ್ಟರು; ಯಾಕಂದರೆ ಇವನು ತನ್ನ ಪೂರ್ಣಹೃದಯದಿಂದ ಕರ್ತನನ್ನು ಹುಡುಕಿದ ಯೆಹೋಷಾಫಾಟನ ಮಗನು ಅಂದರು. ಹೀಗೆ ರಾಜ್ಯ ವನ್ನು ಸ್ಥಿರಪಡಿಸಲು ಅಹಜ್ಯನ ಮನೆಗೆ ಶಕ್ತಿ ಇಲ್ಲದೆ ಹೋಯಿತು.
ಹೀಗೆಯೇ ಯೋತಾಮನು ತನ್ನ ದೇವ ರಾದ ಕರ್ತನ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿ ದ್ದರಿಂದ ಇವನು ಬಲಗೊಂಡನು.
ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ ತನ್ನ ಪಿತೃಗಳ ಕರ್ತನಾದ ದೇವರಾಗಿರುವ ದೇವರನ್ನು ಹುಡುಕಲು ತನ್ನ ಹೃದಯ ವನ್ನು ಸಿದ್ಧಮಾಡುವವನ ಪಾಪವನ್ನು ದಯವುಳ್ಳ ಕರ್ತನು ಮುಚ್ಚಲಿ ಎಂದು ಹೇಳಿದನು.
ಎಜ್ರನು ಕರ್ತನ ನ್ಯಾಯಪ್ರಮಾಣವನ್ನು ವಿಚಾರಿ ಸುವದಕ್ಕೂ ಅದರ ಪ್ರಕಾರ ಮಾಡುವದಕ್ಕೂ ಇಸ್ರಾ ಯೇಲಿನಲ್ಲಿ ನೇಮನ್ಯಾಯಗಳನ್ನು ಕಲಿಸುವದಕ್ಕೂ ತನ್ನ ಹೃದಯವನ್ನು ಸಿದ್ಧಮಾಡಿದನು.
ಓ ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ಸ್ಥಿರವಾಗಿದೆ; ನಾನು ಹಾಡುವೆನು, ಕೀರ್ತಿಸುವೆನು.
ಯಾಕಂದರೆ ನನ್ನಲ್ಲಿ ಅಂದರೆ ನನ್ನ ಶರೀರದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ; ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು.