1 ಅರಸುಗಳು 14:25 · ಕನ್ನಡ ಬೈಬಲ್
ಅರಸನಾದ ರೆಹಬ್ಬಾಮನ ಐದನೇ ವರುಷದಲ್ಲಿ ಏನಾಯಿತಂದರೆ, ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಏರಿ ಬಂದನು.
Cross references
1 ಅರಸುಗಳು 11:40
ಇದರ ನಿಮಿತ್ತ ಸೊಲೊಮೋನನು ಯಾರೊ ಬ್ಬಾಮನನ್ನು ಕೊಲ್ಲಲು ಹುಡುಕಿದನು; ಆದದರಿಂದ ಯಾರೊಬ್ಬಾಮನು ಎದ್ದು ಐಗುಪ್ತದ ಅರಸನಾದ ಶೀಷಕನ ಬಳಿಗೆ ಐಗುಪ್ತಕ್ಕೆ ಓಡಿಹೋಗಿ ಸೊಲೊ ಮೋನನು ಸಾಯುವ ವರೆಗೂ ಐಗುಪ್ತದಲ್ಲಿದ್ದನು.
2 ದಿನವೃತ್ತಾಂತ 12:2
ರೆಹಬ್ಬಾಮನು ಅರಸನಾದ ಐದನೇ ವರುಷ ದಲ್ಲಿ ಏನಾಯಿತಂದರೆ, ಅವರು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದ್ದರಿಂದ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಬಂದನು.
2 ದಿನವೃತ್ತಾಂತ 12:9
ಹಾಗೆಯೇ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧ ವಾಗಿ ಬಂದು ಕರ್ತನ ಮನೆಯ ಬೊಕ್ಕಸಗಳನ್ನೂ ಅರಸನ ಮನೆಯ ಬೊಕ್ಕಸಗಳನ್ನೂ ತೆಗೆದುಕೊಂಡನು; ಎಲ್ಲವನ್ನೂ ತೆಗೆದುಕೊಂಡನು. ಇದಲ್ಲದೆ ಸೊಲೊ ಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ತಕ್ಕೊಂಡು ಹೋದನು.