Home Bibles 2 ದಿನವೃತ್ತಾಂತ 12:9 · ಕನ್ನಡ ಬೈಬಲ್
2 ದಿನವೃತ್ತಾಂತ 12:9 · ಕನ್ನಡ ಬೈಬಲ್

ಹಾಗೆಯೇ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧ ವಾಗಿ ಬಂದು ಕರ್ತನ ಮನೆಯ ಬೊಕ್ಕಸಗಳನ್ನೂ ಅರಸನ ಮನೆಯ ಬೊಕ್ಕಸಗಳನ್ನೂ ತೆಗೆದುಕೊಂಡನು; ಎಲ್ಲವನ್ನೂ ತೆಗೆದುಕೊಂಡನು. ಇದಲ್ಲದೆ ಸೊಲೊ ಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನು ತಕ್ಕೊಂಡು ಹೋದನು.

Cross references

1 ಅರಸುಗಳು 10:16

ಅರಸನಾದ ಸೊಲೊಮೋನನು ಬಂಗಾರದಿಂದ ಇನ್ನೂರು ಖೇಡ್ಯಗಳನ್ನು ಮಾಡಿಸಿ ದನು. ಒಂದೊಂದೂ ಖೇಢ್ಯಕ್ಕೆ ಆರುನೂರು ಶೆಕೇಲು ತೂಕ ಬಂಗಾರವಿತ್ತು.

1 ಅರಸುಗಳು 14:25

ಅರಸನಾದ ರೆಹಬ್ಬಾಮನ ಐದನೇ ವರುಷದಲ್ಲಿ ಏನಾಯಿತಂದರೆ, ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಏರಿ ಬಂದನು.

1 ಅರಸುಗಳು 15:18

ಆಗ ಆಸನು ಕರ್ತನ ಮಂದಿರದ ಬೊಕ್ಕಸಗಳನ್ನೂ ಮಿಕ್ಕ ಸಮಸ್ತ ಬೆಳ್ಳಿ ಬಂಗಾರವನ್ನು ಅರಮನೆಯ ಬೊಕ್ಕಸಗಳಲ್ಲಿ ತೆಗೆದು ತನ್ನ ಸೇವಕರ ಕೈಯಲ್ಲಿ ಒಪ್ಪಿಸಿ ದಮಸ್ಕ ಪಟ್ಟಣದಲ್ಲಿ ವಾಸವಾಗಿರುವ ಹೆಜ್ಯೋನನ ಮೊಮ್ಮಗನೂ ಟಬ್ರಿಮ್ಮೋನನ ಮಗನೂ ಆಗಿರುವ ಅರಾಮಿನ ಅರಸನಾದ ಬೆನ್ಹದದನಿಗೆ ಅವುಗಳನ್ನು ಕಳುಹಿಸಿ--ನನಗೂ ನಿನಗೂ ನನ್ನ ತಂದೆಗೂ ನಿನ್ನ ತಂದೆಗೂ ಒಡಂಬಡಿಕೆ ಉಂಟಲ್ಲಾ.

2 ಅರಸುಗಳು 16:8

ಇದಲ್ಲದೆ ಆಹಾಜನು ಕರ್ತನ ಮನೆಯಲ್ಲಿಯೂ ಅರಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಬೆಳ್ಳಿ ಬಂಗಾರವನ್ನು ತಕ್ಕೊಂಡು ಕಾಣಿಕೆಯಾಗಿ ಅಶ್ಶೂರಿನ ಅರಸನಿಗೆ ಕಳುಹಿ ಸಿದನು.

2 ಅರಸುಗಳು 18:15

ಆದದರಿಂದ ಹಿಜ್ಕೀಯನು ಕರ್ತನ ಮನೆಯಲ್ಲಿಯೂ ಅರಸನ ಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಎಲ್ಲಾ ಬೆಳ್ಳಿ ಯನ್ನು ಕೊಟ್ಟನು.

2 ದಿನವೃತ್ತಾಂತ 9:15

ಅರಸನಾದ ಸೊಲೊಮೋನನು ಅಪರಂಜಿಯಿಂದ ಇನ್ನೂರು ಖೇಡ್ಯಗಳನ್ನು ಮಾಡಿಸಿದನು. ಒಂದೊಂದು ಖೇಡ್ಯಕ್ಕೆ ಆರುನೂರು ಶೆಕೇಲು ತೂಕ ಅಪರಂಜಿ ಇತ್ತು.

ವಿಲಾಪಗಳು 1:10

ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.

Interlinear

Choose Theme