ಅವರು ಇಸ್ರಾಯೇಲಿನ ಮಕ್ಕಳ ಮುಂದೆ ಕರ್ತನು ಹೊರಡಿಸಿದ ಜನಾಂಗಗಳ ಸಕಲ ಅಸಹ್ಯ ಕೃತ್ಯಗಳ ಪ್ರಕಾರ ಮಾಡುತ್ತಾ ಇದ್ದರು.
Cross references
ಅವರು ಲೋಟನನ್ನು ಕರೆದು ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಹೊರಗೆ ತೆಗೆದುಕೊಂಡು ಬಾ; ನಾವು ಅವರನ್ನು ಅರಿಯಬೇಕು ಎಂದು ಅವನಿಗೆ ಹೇಳಿದರು.
ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.
ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
ಇಸ್ರಾಯೇಲಿನ ಕುಮಾರ್ತೆಯರಲ್ಲಿ ಸೂಳೆ ಇರ ಬಾರದು; ಇಸ್ರಾಯೇಲಿನ ಕುಮಾರರಲ್ಲಿ ಪುರುಷ ಸಂಗದವನು ಇರಬಾರದು.
ಸೂಳೆಯ ಕೂಲಿಯನ್ನು ಇಲ್ಲವೆ ನಾಯಿಯ ಕ್ರಯವನ್ನು ಯಾವದೊಂದು ಪ್ರಮಾಣವಾಗಿ ನಿನ್ನ ದೇವರಾದ ಕರ್ತನ ಮನೆಗೆ ತರಬಾರದು. ಅವೆರಡು ನಿನ್ನ ದೇವರಾದ ಕರ್ತನಿಗೆ ಅಸಹ್ಯ.
ಅವರು ತಮ್ಮ ಹೃದಯವನ್ನು ಸಂತೋಷ ಪಡಿಸಿ ಕೊಳ್ಳುತ್ತಿರುವ ವೇಳೆಯಲ್ಲಿ ಇಗೋ, ಆ ಪಟ್ಟಣದ ಮನುಷ್ಯರಲ್ಲಿ ಬೆಲಿಯಾಳನ ಕೆಲವು ಕುಮಾರರು ಆ ಮನೆಯನ್ನು ಸುತ್ತಿಕೊಂಡು ಕದವನ್ನು ಬಡಿದು ಆ ಮನೆಯ ಯಜಮಾನನಾದ ಮುದುಕನಿಗೆ--ನಿನ್ನ ಮನೆಯಲ್ಲಿ ಬಂದ ಆ ಮನುಷ್ಯನನ್ನು ನಾವು ತಿಳು ಕೊಳ್ಳುವ ಹಾಗೆ, ಅವನನ್ನು ಹೊರಗೆ ತಾ ಎಂದು ಹೇಳಿದರು.
ಅವನು ಪುರುಷ ಸಂಗಮರನ್ನು ದೇಶದಲ್ಲಿಂದ ಹೊರಡಿಸಿ ತನ್ನ ಪಿತೃಗಳು ಮಾಡಿದ ಸಮಸ್ತ ವಿಗ್ರಹಗಳನ್ನು ತೆಗೆದುಹಾಕಿದನು.
ಅವನ ತಂದೆಯಾದ ಆಸನ ದಿವಸಗಳಲ್ಲಿ ಉಳಿದ ಪುರುಷಗಾಮಿಗಳನ್ನು ಅವನು ದೇಶದಿಂದ ತೆಗೆದು ಹಾಕಿದನು.
ಸ್ತ್ರೀಯರು ವಿಗ್ರಹದ ತೋಪಿಗೋಸ್ಕರ ಮನೆಗಳನ್ನು ನೇಯುತ್ತಿದ್ದ ಕಡೆಯಲ್ಲಿ ಕರ್ತನ ಮನೆಯ ಬಳಿಯಲ್ಲಿ ಇದ್ದ ಪುರುಷ ಸಂಗಮರ ಮನೆಗಳನ್ನು ಕೆಡವಿಸಿದನು.
ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು;
ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ; ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು