ಆರೋನನ ಕುಮಾರರು--ನಾದಬನು ಅಬೀಹೂವು ಎಲ್ಲಾಜಾರನು ಈತಾಮಾರನು. ಎಲ್ಲಾಜಾರನು ಫೀನೆಹಾಸನನ್ನು ಪಡೆ ದನು. ಫೀನೆಹಾಸನು ಅಬೀಷೂವನನ್ನು ಪಡೆದನು.
Cross references
ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಳನ್ನು ತನಗೆ ಹೆಂಡತಿ ಯಾಗಿ ತಕ್ಕೊಂಡನು. ಆಕೆಯು ಅವನಿಗೆ--ಫಿನೇಹಾಸ ನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿ ಯರ ತಂದೆಗಳ ಮುಖ್ಯಸ್ಥರು.
ಇಗೋ, ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬನು ಬಂದು ಮೋಶೆಗೂ ಸಭೆಯ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಗೂ ಕಾಣುವ ಹಾಗೆ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತಂದನು.
ಅವನು ತನ್ನ ದೇವರಿಗೋಸ್ಕರ ಆಸಕ್ತನಾಗಿದ್ದು ಇಸ್ರಾಯೇಲಿನ ಮಕ್ಕಳಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಹೇಳಿದನು.
ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾ ಗಿರುವ ಅವರನ್ನೂ ಯಾಜಕನಾದ ಎಲ್ಲಾಜಾರನ ಮಗ ನಾದ ಫೀನೆಹಾಸನನ್ನೂ ಪರಿಶುದ್ಧ ಸಾಮಾಗ್ರಿಗಳ ಸಂಗಡಲೂ ಊದುವದಕ್ಕೆ ಅವನ ಕೈಯಲ್ಲಿರುವ ತುತೂರಿಗಳ ಸಂಗಡಲೂ ಯುದ್ಧಕ್ಕೆ ಕಳುಹಿಸಿದನು.
ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನನ್ನು ಆಶೀರ್ವದಿಸಿ ಅವನಿಗೆ ಹೆಬ್ರೋನನ್ನು ಬಾಧ್ಯತೆ ಯಾಗಿ ಕೊಟ್ಟನು.
ಹೆಬ್ರೋನಿನ ಹೆಸರು ಮೊದಲು ಕಿರ್ಯತ್‌ಅರ್ಬ; ಈ ಹೆಸರು ಅನಾಕ್ಯರಲ್ಲಿ ಒಬ್ಬ ದೊಡ್ಡ ಮನುಷ್ಯನದು. ದೇಶವು ಯುದ್ಧವಿಲ್ಲದೆ ಶಾಂತವಾಯಿತು.
ಗಿಲ್ಯಾದ್ ದೇಶದಲ್ಲಿರುವ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಯಾಜಕನಾದ ಎಲಿಯಾ ಜರನ ಮಗನಾದ ಫಿನೇಹಾಸನನ್ನೂ
ಯಾಜಕನಾದ ಫೀನೆಹಾಸನೂ ಅವನ ಸಂಗಡ ಇದ್ದ ಸಭೆಯ ಪ್ರಧಾನರೂ ಇಸ್ರಾಯೇಲ್ ಸಹಸ್ರಗಳ ಮುಖ್ಯಸ್ಥರೂ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಮಕ್ಕಳೂ ಹೇಳಿದ ಮಾತುಗಳನ್ನು ಕೇಳಿ ದಾಗ ಅವರಿಗೆ ಮೆಚ್ಚಿಕೆಯಾಯಿತು.
ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.
ನಮ್ಮ ಸಹೋದರನಾದ ಬೆನ್ಯಾವಿಾನನ ಮಕ್ಕಳಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವದಕ್ಕೆ ಹೋಗ ಬೇಕೋ ಬೇಡವೋ ಎಂದು ದೇವರನ್ನು ಕೇಳಿ ಕೊಂಡರು. ಕರ್ತನು--ಹೋಗಿರಿ; ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು ಅಂದನು.
ಆರೋನನ ಕುಮಾರರು--ನಾದಬನು ಅಬೀಹೂವು ಎಲ್ಲಾಜಾರನು ಈತಾಮಾರನು. ಎಲ್ಲಾಜಾರನು ಫೀನೆಹಾಸನನ್ನು ಪಡೆ ದನು. ಫೀನೆಹಾಸನು ಅಬೀಷೂವನನ್ನು ಪಡೆದನು.
ಆರೋನನ ಕುಮಾರರು-- ಇವನ ಮಗನು ಎಲ್ಲಾಜಾರನು, ಇವನ ಮಗನು ಫಿನೇ ಹಾಸನು, ಇವನ ಮಗನು ಅಬೀಷೂವನು,
ಎಲ್ಲಾಜಾ ರನ ಮಗನಾದ ಫೀನೆಹಾಸನು ಪೂರ್ವದಲ್ಲಿ ಅವರ ಮೇಲೆ ಅಧಿಕಾರಿಯಾಗಿದ್ದನು; ಕರ್ತನು ಅವರ ಸಂಗಡ ಇದ್ದನು.
ಮೆರಾರೀಯ ಕುಮಾರರು--ಮಹ್ಲೀಯು, ಮೂಷೀಯು. ಮಹ್ಲೀಯ ಕುಮಾರರು--ಎಲ್ಲಾಜಾರ್, ಕೀಷನು;
ಮೆರಾರೀಯ ಕುಮಾರರಲ್ಲಿ ಮಹ್ಲೀ ಯನು ಮೂಷೀಯು; ಯಾಜ್ಯನ ಮಗನು ಬೆನೋ ನನು.
ಈ ಕಾರ್ಯಗಳಾದ ತರುವಾಯ ಎಜ್ರನು ಪಾರಸಿಯರ ಅರಸನಾದ ಅರ್ತಷಸ್ತನ ಆಳಿಕೆ ಯಲ್ಲಿ ಬಾಬೆಲಿನಿಂದ ಹೊರಟುಹೋದನು. ಇವನು ಸೆರಾಯ ಮಗನು, ಇವನು ಅಜರ್ಯನ ಮಗನು,
ಇವನು ಅಬೀಷೂವನ ಮಗನು, ಇವನು ಫೀನೆಹಾಸನ ಮಗನು, ಇವನು ಎಲ್ಲಾಜಾರನ ಮಗನು, ಇವನು ಪ್ರಧಾನ ಯಾಜಕ ನಾದ ಆರೋನನ ಮಗನು.
ಫಿನೆಹಾಸನ ಕುಮಾರ ರಲ್ಲಿ ಗೆರ್ಷೋಮನೂ ಈತಾಮಾರನ ಕುಮಾರರಲ್ಲಿ ದಾನಿಯೇಲನೂ ದಾವೀದನ ಕುಮಾರರಲ್ಲಿ ಹಟ್ಟೂ ಷನೂ,
ನಮ್ಮ ದೇವರ ಒಳ್ಳೇ ಹಸ್ತವು ನಮ್ಮ ಮೇಲೆ ಇದ್ದದರಿಂದ ಅವರು ಇಸ್ರಾಯೇಲಿನ ಮಗನಾಗಿರುವ ಲೇವಿಯ ಮಗನಾದ ಮಹ್ಲೀಯ ಕುಮಾರರಲ್ಲಿ ಬುದ್ಧಿ ಯುಳ್ಳವನಾದ ಶೇರೇಬ್ಯನೂ ಅವನ ಕುಮಾರರೂ ಸಹೋದರರೂ ಆದ ಹದಿನೆಂಟು ಮಂದಿಯನ್ನೂ
ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.