Home Bibles ನಿರ್ಗಮಕಾಂಡ 6:25 · ಕನ್ನಡ ಬೈಬಲ್
ನಿರ್ಗಮಕಾಂಡ 6:25 · ಕನ್ನಡ ಬೈಬಲ್

ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಕ್ಕಳಲ್ಲಿ ಒಬ್ಬಳನ್ನು ತನಗೆ ಹೆಂಡತಿ ಯಾಗಿ ತಕ್ಕೊಂಡನು. ಆಕೆಯು ಅವನಿಗೆ--ಫಿನೇಹಾಸ ನನ್ನು ಹೆತ್ತಳು. ಗೋತ್ರಗಳ ಪ್ರಕಾರ ಇವರು ಲೇವಿ ಯರ ತಂದೆಗಳ ಮುಖ್ಯಸ್ಥರು.

Cross references

ಅಂಕೆಗಳ ಪುಸ್ತಕ 25:7

ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು

ಅಂಕೆಗಳ ಪುಸ್ತಕ 26:57

ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.

ಅಂಕೆಗಳ ಪುಸ್ತಕ 31:6

ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾ ಗಿರುವ ಅವರನ್ನೂ ಯಾಜಕನಾದ ಎಲ್ಲಾಜಾರನ ಮಗ ನಾದ ಫೀನೆಹಾಸನನ್ನೂ ಪರಿಶುದ್ಧ ಸಾಮಾಗ್ರಿಗಳ ಸಂಗಡಲೂ ಊದುವದಕ್ಕೆ ಅವನ ಕೈಯಲ್ಲಿರುವ ತುತೂರಿಗಳ ಸಂಗಡಲೂ ಯುದ್ಧಕ್ಕೆ ಕಳುಹಿಸಿದನು.

ಯೆಹೋಶುವ 22:13

ಗಿಲ್ಯಾದ್‌ ದೇಶದಲ್ಲಿರುವ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಯಾಜಕನಾದ ಎಲಿಯಾ ಜರನ ಮಗನಾದ ಫಿನೇಹಾಸನನ್ನೂ

ಯೆಹೋಶುವ 22:31

ಯಾಜಕ ನಾಗಿರುವ ಎಲ್ಲಾಜಾರನ ಕುಮಾರನಾದ ಫೀನೆಹಾಸನು ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಮನಸ್ಸೆಯ ಮಕ್ಕಳಿಗೂ--ನೀವು ಕರ್ತನಿಗೆ ವಿರೋಧವಾಗಿ ಈ ಅಪರಾಧವನ್ನು ಮಾಡದೆ ಇರುವದರಿಂದ ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೆಂದು ಇಂದು ಅರಿತಿದ್ದೇವೆ. ಈಗ ನೀವು ಇಸ್ರಾಯೇಲ್‌ ಮಕ್ಕಳನ್ನು ಕರ್ತನ ಕೈಗೆ ತಪ್ಪಿಸಿದ್ದೀ ಅಂದನು.

ಯೆಹೋಶುವ 24:33

ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್‌ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.

ನ್ಯಾಯಾಧಿಪತಿಗಳು 20:28

ನಮ್ಮ ಸಹೋದರನಾದ ಬೆನ್ಯಾವಿಾನನ ಮಕ್ಕಳಿಗೆ ವಿರೋಧವಾಗಿ ಇನ್ನೂ ಯುದ್ಧಮಾಡುವದಕ್ಕೆ ಹೋಗ ಬೇಕೋ ಬೇಡವೋ ಎಂದು ದೇವರನ್ನು ಕೇಳಿ ಕೊಂಡರು. ಕರ್ತನು--ಹೋಗಿರಿ; ನಾಳೆ ಅವರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವೆನು ಅಂದನು.

ಎಜ್ರಾ 7:5

ಇವನು ಅಬೀಷೂವನ ಮಗನು, ಇವನು ಫೀನೆಹಾಸನ ಮಗನು, ಇವನು ಎಲ್ಲಾಜಾರನ ಮಗನು, ಇವನು ಪ್ರಧಾನ ಯಾಜಕ ನಾದ ಆರೋನನ ಮಗನು.

ಕೀರ್ತನೆಗಳು 106:30

ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.

Interlinear

Choose Theme