Home Bibles 1 ದಿನವೃತ್ತಾಂತ 5:1 · ಕನ್ನಡ ಬೈಬಲ್
1 ದಿನವೃತ್ತಾಂತ 5:1 · ಕನ್ನಡ ಬೈಬಲ್

ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ಕುಮಾರರು (ರೂಬೇನನು ಚೊಚ್ಚಲ ಮಗನಾಗಿದ್ದನು; ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರಮಾಡಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸ್ರಾಯೇಲನ ಮಗ ನಾದ ಯೋಸೇಫನ ಕುಮಾರರಿಗೆ ಕೊಡಲ್ಪಟ್ಟಿತು. ಆದದರಿಂದ ಈ ವಂಶಾವಳಿಯು ಚೊಚ್ಚಲತನದ ಪ್ರಕಾರ ಬರೆಯಲ್ಪಟ್ಟದ್ದಲ್ಲ.

Cross references

ಆದಿಕಾಂಡ 25:23

ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.

ಆದಿಕಾಂಡ 29:32

ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್‌ ಎಂದು ಹೆಸರಿಟ್ಟಳು.

ಆದಿಕಾಂಡ 35:22

ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.

ಆದಿಕಾಂಡ 46:8

ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.

ಆದಿಕಾಂಡ 48:15

ಆಗ ಅವನು ಯೋಸೇಫನನ್ನು ಆಶೀರ್ವದಿಸಿ--ನನ್ನ ತಂದೆಗಳಾದ ಅಬ್ರಹಾಮನೂ ಇಸಾಕನೂ ಯಾವಾತನ ಮುಂದೆ ನಡಕೊಂಡರೋ ಆ ದೇವರೇ, ನಾನು ಹುಟ್ಟಿದಂದಿನಿಂದ ಇಂದಿನ ವರೆಗೆ ನನ್ನನ್ನು ಪೋಷಣೆ ಮಾಡಿದ ದೇವರು,

ಆದಿಕಾಂಡ 49:3

ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ.

ನಿರ್ಗಮಕಾಂಡ 6:14

ಅವರ ತಂದೆಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ಕುಮಾರರು: ಹನೋಕ್‌ ಫಲ್ಲು ಹೆಚ್ರೋನ್‌ ಕರ್ವಿಾ; ಇವರೇ ರೂಬೇನನ ಗೋತ್ರಗಳು.

ಲೇವ್ಯಕಾಂಡ 18:8

ನಿನ್ನ ತಂದೆಯ ಹೆಂಡತಿಯ ಬೆತ್ತಲೆ ತನವನ್ನು ನೀನು ಕಾಣುವಂತೆ ಮಾಡಬಾರದು; ಅದು ನಿನ್ನ ತಂದೆಯ ಬೆತ್ತಲೆತನ.

ಲೇವ್ಯಕಾಂಡ 20:11

ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು;

ಅಂಕೆಗಳ ಪುಸ್ತಕ 1:5

ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್‌ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್‌,

ಅಂಕೆಗಳ ಪುಸ್ತಕ 16:1

ಆಗ ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಹಾರನ ಮಗನಾದ ಕೋರಹನೂ ರೂಬೇನ್‌ ಗೋತ್ರದವರಾದ ಎಲೀ ಯಾಬನ ಮಕ್ಕಳಾದ ದಾತಾನನೂ ಅಬೀರಾಮನೂ ಪೆಲೆತನ ಮಗನಾದ ಓನನೂ ಇವರು ಜನರನ್ನು ತಕ್ಕೊಂಡು

ಅಂಕೆಗಳ ಪುಸ್ತಕ 26:5

ಇಸ್ರಾಯೇಲ್‌ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;

ದ್ವಿತೀಯೋಪದೇಶಕಾಂಡ 21:17

ಅವನು ಹಗೆ ಮಾಡಲ್ಪಟ್ಟ ವಳ ಮಗನಿಗೆ ತನ್ನ ಬಳಿಯಲ್ಲಿ ಉಂಟಾದ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು ಅವನೇ ಚೊಚ್ಚಲನೆಂದು ಒಪ್ಪಿಕೊಳ್ಳಬೇಕು. ಯಾಕಂದರೆ ಅವನೇ ಅವನ ಬಲದ ಆರಂಭವು; ಅವನಿಗೆ ಚೊಚ್ಚಲತನದ ಹಕ್ಕು ಉಂಟು.

ದ್ವಿತೀಯೋಪದೇಶಕಾಂಡ 27:20

ತನ್ನ ತಂದೆಯ ಹೆಂಡತಿಯ ಸಂಗಡ ಮಲಗಿ ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆದವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.

ದ್ವಿತೀಯೋಪದೇಶಕಾಂಡ 33:17

ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು.

ಯೆಹೋಶುವ 14:6

ಯೂದನ ಮಕ್ಕಳು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಸೇರಿದರು. ಆಗ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಅವನಿಗೆ--ಕಾದೇಶ್‌ ಬರ್ನೇಯದಲ್ಲಿ ಕರ್ತನು ನನ್ನನ್ನೂ ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ;

1 ಸಮುವೇಲ 16:6

ಅವರು ಬಂದಾಗ ಏನಾಯಿತಂದರೆ, ಅವನು ಎಲೀಯಾಬನನ್ನು ನೋಡಿ--ನಿಶ್ಚಯವಾಗಿ ಕರ್ತನ ಅಭಿಷಿಕ್ತನು ಆತನ ಮುಂದೆ ಇದ್ದಾನೆ ಅಂದುಕೊಂಡನು.

1 ದಿನವೃತ್ತಾಂತ 2:1

ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,

1 ದಿನವೃತ್ತಾಂತ 26:10

ಇದಲ್ಲದೆ ಮೆರಾರಿಯ ಮಕ್ಕಳಲ್ಲಿರುವ ಹೋಸನಿಗೆ ಮಕ್ಕಳಿದ್ದರು; ಮುಖ್ಯನಾದವನು ಶಿಮ್ರಿಯು; (ಅವನು ಚೊಚ್ಚಲ ಮಗನಲ್ಲ) ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು;

1 ಕೊರಿಂಥದವರಿಗೆ 5:1

ನಿಮ್ಮಲ್ಲಿ ಜಾರತ್ವವಿದೆಯೆಂದು ಸಾಧಾರಣ ವಾಗಿ ಹೇಳಲ್ಪಟ್ಟಿದೆ; ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ; ಅಂಥ ಜಾರತ್ವವು ಅನ್ಯಜನರಲ್ಲಿಯೂ ಇಲ್ಲ.

ಕೊಲೊಸ್ಸೆಯವರಿಗೆ 1:15

ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಪ್ರತಿಯೊಂದು ಸೃಷ್ಟಿಗೆ ಜ್ಯೇಷ್ಠನೂ ಆಗಿದ್ದಾನೆ.

Interlinear

Choose Theme