Home Bibles ಆದಿಕಾಂಡ 46:8 · ಕನ್ನಡ ಬೈಬಲ್
ಆದಿಕಾಂಡ 46:8 · ಕನ್ನಡ ಬೈಬಲ್

ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.

Cross references

ಆದಿಕಾಂಡ 29:1

ತರುವಾಯ ಯಾಕೋಬನು ಪ್ರಯಾಣ ಮಾಡಿ ಪೂರ್ವದಿಕ್ಕಿನ ಜನರ ದೇಶಕ್ಕೆ ಬಂದನು.

ಆದಿಕಾಂಡ 29:32

ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್‌ ಎಂದು ಹೆಸರಿಟ್ಟಳು.

ಆದಿಕಾಂಡ 35:22

ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.

ಆದಿಕಾಂಡ 35:23

ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.

ಆದಿಕಾಂಡ 49:1

ಆಗ ಯಾಕೋಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿ ಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವದನ್ನು ನಿಮಗೆ ತಿಳಿಸುತ್ತೇನೆ.

ನಿರ್ಗಮಕಾಂಡ 1:1

ಯಾಕೋಬನ ಜೊತೆಗೆ ಐಗುಪ್ತಕ್ಕೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲ್‌ ಮಕ್ಕಳ ಹೆಸರುಗಳು ಇವೇ:

ನಿರ್ಗಮಕಾಂಡ 6:14

ಅವರ ತಂದೆಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ಕುಮಾರರು: ಹನೋಕ್‌ ಫಲ್ಲು ಹೆಚ್ರೋನ್‌ ಕರ್ವಿಾ; ಇವರೇ ರೂಬೇನನ ಗೋತ್ರಗಳು.

ಅಂಕೆಗಳ ಪುಸ್ತಕ 1:5

ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್‌ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್‌,

ಅಂಕೆಗಳ ಪುಸ್ತಕ 1:20

ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು

ಅಂಕೆಗಳ ಪುಸ್ತಕ 2:10

ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ;

ಅಂಕೆಗಳ ಪುಸ್ತಕ 26:4

ಕರ್ತನು ಮೋಶೆಗೂ ಐಗುಪ್ತದೇಶದಿಂದ ಹೊರ ಟಿದ್ದ ಇಸ್ರಾಯೇಲ್‌ ಮಕ್ಕಳಿಗೂ ಆಜ್ಞಾಪಿಸಿದ ಪ್ರಕಾರ ಇಪ್ಪತ್ತು ವರುಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.

ದ್ವಿತೀಯೋಪದೇಶಕಾಂಡ 33:6

ರೂಬೇನನು ಸಾಯದೆ ಬದುಕಲಿ; ಅವನ ಜನ ಸ್ವಲ್ಪವಾಗದಿರಲಿ.

1 ದಿನವೃತ್ತಾಂತ 2:1

ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,

1 ದಿನವೃತ್ತಾಂತ 8:1

ಬೆನ್ಯಾವಿಾನನು ತನ್ನ ಚೊಚ್ಚಲ ಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲ ನನ್ನೂ, ಮೂರನೆಯವನಾದ ಅಹ್ರಹನನ್ನೂ

Interlinear

Choose Theme