ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್,
Cross references
ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್ ಎಂದು ಹೆಸರಿಟ್ಟಳು.
ಆಗ ಬಿಲ್ಹಳು ಗರ್ಭಿಣಿಯಾಗಿ ಯಾಕೋಬನಿಗೆ ಮಗನನ್ನು ಹೆತ್ತಳು.
ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.
ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.
ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.
ಆಗ ಯಾಕೋಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿ ಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವದನ್ನು ನಿಮಗೆ ತಿಳಿಸುತ್ತೇನೆ.
ರೂಬೇನ್ ಸಿಮೆಯೋನ್ ಲೇವಿ ಯೆಹೂದ
ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಇಳುಕೊಳ್ಳುವವರು ಅವರವರ ಸೈನ್ಯಗಳ ಪ್ರಕಾರ ಯೆಹೂದನ ದಂಡಿನ ಧ್ವಜವು; ಯೆಹೂದನ ಮಕ್ಕಳಿಗೆ ಅವ್ಮೆಾನಾದಾಬನ ಮಗನಾದ ನಹಶೋನನು ಸೈನ್ಯಾಧಿಪತಿ.
ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ;
ಮೊದಲನೇ ದಿವಸದಲ್ಲಿ ತನ್ನ ಅರ್ಪಣೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅವ್ಮೆಾನಾ ದಾಬನ ಮಗನಾದ ನಹಶೋನನು.
ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು.
ಯೂದನ ಮಕ್ಕಳ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅವ್ಮೆಾನಾದಾಬನ ಮಗನಾದ ನಹಶೋ ನನು ಇದ್ದನು.
ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು.
ದೇವರ ಮನುಷ್ಯನಾದ ಮೋಶೆ ಸಾಯುವದಕ್ಕಿಂತ ಮುಂಚೆ ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ಆಶೀರ್ವಾದವು ಯಾವದಂದರೆ--
ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ವರು ಯಾರಂದರೆ, ರೂಬೇನ್ಯರ ನಾಯಕನು ಜಿಕ್ರೀಯ ಮಗನಾದ ಎಲೀಯೆಜೆರನು.
ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ.