Home Bibles 1 ದಿನವೃತ್ತಾಂತ 12:28 · ಕನ್ನಡ ಬೈಬಲ್
1 ದಿನವೃತ್ತಾಂತ 12:28 · ಕನ್ನಡ ಬೈಬಲ್

ಇದಲ್ಲದೆ ಬಲವುಳ್ಳ ಪರಾ ಕ್ರಮಶಾಲಿಯಾದ ಪ್ರಾಯಸ್ಥನಾಗಿದ್ದ ಚಾದೋಕನೂ ಅವನ ತಂದೆಯ ಮನೆಯಿಂದ ಇಪ್ಪತ್ತೆರಡು ಮಂದಿ ಪ್ರಧಾನರೂ.

Cross references

2 ಸಮುವೇಲ 8:17

ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜ ಕರಾಗಿದ್ದರು; ಸೆರಾಯನು ಮಂತ್ರಿಯಾಗಿದ್ದನು.ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.

1 ಅರಸುಗಳು 1:8

ಆದರೆ ಯಾಜಕ ನಾದ ಚಾದೋಕನೂ ಯೆಹೋಯಾದಾವನ ಮಗ ನಾದ ಬೆನಾಯನೂ ಪ್ರವಾದಿಯಾದ ನಾತಾನನೂ ಶಿಮ್ಮಿಯೂ ರೇಗಿಯೂ ದಾವೀದನ ಪರಾಕ್ರಮ ಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.

1 ಅರಸುಗಳು 2:35

ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.

1 ದಿನವೃತ್ತಾಂತ 6:8

ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು;

1 ದಿನವೃತ್ತಾಂತ 6:53

ಇವನ ಮಗನು ಚಾದೋಕನು, ಇವನ ಮಗನು ಅಹಿಮಾಚನು.

1 ದಿನವೃತ್ತಾಂತ 11:22

ಕಬ್ಜಯೇಲಿನವ ನಾದ ಪರಾಕ್ರಮಶಾಲಿಯ ಮಗನಾದಂಥ ಯೆಹೋ ಯಾದನ ಮಗನಾದ ಬೆನಾಯನು ಅನೇಕ ಕ್ರಿಯೆಗ ಳನ್ನು ಮಾಡಿದನು; ಅವನು ಸಿಂಹದ ಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇನ್ನೊಮ್ಮೆ ಹಿಮದ ದಿವಸದಲ್ಲಿ ಇಳಿದು ಹೋಗಿ ಕುಣಿಯೊಳಗೆ ಒಂದು ಸಿಂಹವನ್ನು ಕೊಂದುಬಿಟ್ಟನು.

1 ದಿನವೃತ್ತಾಂತ 11:24

ಯೆಹೋಯಾದನ ಮಗ ನಾದ ಬೆನಾಯನು ಇವುಗಳನ್ನು ಮಾಡಿ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರುಗೊಂಡವನಾ ದನು.

1 ದಿನವೃತ್ತಾಂತ 27:5

ಮೂರನೇ ತಿಂಗಳಿನ ಸೈನ್ಯದ ಮೂರನೇ ಅಧಿಪತಿಯು ಮುಖ್ಯ ನಾಗಿರುವ ಯೆಹೋಯಾದನ ಮಗನಾದ ಬೆನಾ ಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು.

ಯೆಹೆಜ್ಕೇಲ 44:15

ಆದರೆ ಇಸ್ರಾಯೇಲಿನ ಮಕ್ಕಳು ನನ್ನನ್ನು ಬಿಟ್ಟು ಹೋದಾಗ ನನ್ನ ಪರಿಶುದ್ಧ ಸ್ಥಳದ ಕಾಯಿದೆಯನ್ನು ಕೈಕೊಂಡ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವ ಹಾಗೆ ನನ್ನ ಸವಿಾಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ದೇವರಾದ ಕರ್ತನು ಹೇಳುತ್ತಾನೆ.

Interlinear

Choose Theme