Home Bibles 1 ದಿನವೃತ್ತಾಂತ 16:39 · ಕನ್ನಡ ಬೈಬಲ್
1 ದಿನವೃತ್ತಾಂತ 16:39 · ಕನ್ನಡ ಬೈಬಲ್

ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ

Cross references

1 ಅರಸುಗಳು 3:4

ಗಿಬ್ಯೋನು ದೊಡ್ಡ ಎತ್ತರದ ಸ್ಥಳ; ಆದದರಿಂದ ಅರಸನು ಯಜ್ಞವನ್ನರ್ಪಿಸಲು ಅಲ್ಲಿಗೆ ಹೋಗಿ ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.

1 ದಿನವೃತ್ತಾಂತ 12:28

ಇದಲ್ಲದೆ ಬಲವುಳ್ಳ ಪರಾ ಕ್ರಮಶಾಲಿಯಾದ ಪ್ರಾಯಸ್ಥನಾಗಿದ್ದ ಚಾದೋಕನೂ ಅವನ ತಂದೆಯ ಮನೆಯಿಂದ ಇಪ್ಪತ್ತೆರಡು ಮಂದಿ ಪ್ರಧಾನರೂ.

1 ದಿನವೃತ್ತಾಂತ 15:11

ಆಗ ದಾವೀದನು ಚಾದೋಕ್‌, ಎಬ್ಯಾತ್ಯಾರ್‌ ಎಂಬ ಯಾಜಕರನ್ನೂ ಉರೀಯೇಲ್‌, ಅಸಾಯನು, ಯೋವೇಲನು, ಶೆಮಾಯನು, ಎಲೀಯೇಲನು, ಅವ್ಮೆಾನಾದಾಬ ಎಂಬ ಲೇವಿಯರನ್ನೂ ಕರೇಕಳುಹಿಸಿ ಅವರಿಗೆ ಹೇಳಿದ್ದೇನಂದರೆ--

1 ದಿನವೃತ್ತಾಂತ 21:29

ಅರಣ್ಯ ದಲ್ಲಿ ಮೋಶೆಯು ಮಾಡಿದ ಕರ್ತನ ಗುಡಾರವೂ ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.ಆದರೆ ದಾವೀದನು ದೇವರ ಹತ್ತಿರ ವಿಚಾರಿಸಲು ಅದರ ಬಳಿಗೆ ಹೋಗ ಲಾರದೆ ಇದ್ದನು; ಯಾಕಂದರೆ ಅವನು ಕರ್ತನ ದೂತನ ಕತ್ತಿಯ ನಿಮಿತ್ತ ಹೆದರಿದನು.

2 ದಿನವೃತ್ತಾಂತ 1:3

ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.

2 ದಿನವೃತ್ತಾಂತ 1:13

ತರುವಾಯ ಸೊಲೊಮೋನನು ಸಭೆಯ ಗುಡಾರವನ್ನು ಬಿಟ್ಟು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಿಂದ ಯೆರೂಸ ಲೇಮಿಗೆ ಬಂದು ಇಸ್ರಾಯೇಲನ್ನು ಆಳಿದನು.

Interlinear

Choose Theme