Home Bibles 1 ಅರಸುಗಳು 3:4 · ಕನ್ನಡ ಬೈಬಲ್
1 ಅರಸುಗಳು 3:4 · ಕನ್ನಡ ಬೈಬಲ್

ಗಿಬ್ಯೋನು ದೊಡ್ಡ ಎತ್ತರದ ಸ್ಥಳ; ಆದದರಿಂದ ಅರಸನು ಯಜ್ಞವನ್ನರ್ಪಿಸಲು ಅಲ್ಲಿಗೆ ಹೋಗಿ ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.

Cross references

ಯೆಹೋಶುವ 9:3

ಆದರೆ ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಗಿಬ್ಯೋನಿನ ನಿವಾಸಿಗಳು ಕೇಳಿದಾಗ

ಯೆಹೋಶುವ 10:2

ಯೆರೂಸಲೇಮಿನ ಅರಸನಾದ ಅದೋನೀ ಚೆದೆಕನು ಕೇಳಿ ಬಹು ಭಯಪಟ್ಟರು. ಯಾಕಂದರೆ ಗಿಬ್ಯೋನ್‌ ರಾಜಪಟ್ಟಣಗಳ ಹಾಗೆ ದೊಡ್ಡ ಪಟ್ಟಣ ವಾಗಿತ್ತು; ಮತ್ತು ಆಯಿಗಿಂತಲೂ ದೊಡ್ಡದಾಗಿತ್ತು; ಇದಲ್ಲದೆ ಅದರ ಮನುಷ್ಯರು ಪರಾಕ್ರಮಶಾಲಿಗಳಾ ಗಿದ್ದರು.

1 ಅರಸುಗಳು 8:63

ಸೊಲೊಮೋನನು ಕರ್ತನಿಗೆ ಅರ್ಪಿಸಿದ ಸಮಾ ಧಾನದ ಬಲಿಗಳಿಗೋಸ್ಕರ ಇಪ್ಪತ್ತೆರಡು ಸಾವಿರ ಎತ್ತು ಗಳನ್ನೂ ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನೂ ಅರ್ಪಿಸಿದನು. ಹೀಗೆಯೇ ಅರಸನೂ ಇಸ್ರಾಯೇಲಿನ ಸಮಸ್ತ ಮಕ್ಕಳೂ ಕರ್ತನ ಮಂದಿರವನ್ನು ಪ್ರತಿಷ್ಠೆ ಮಾಡಿದರು.

1 ಅರಸುಗಳು 9:2

ಕರ್ತನು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದ ಹಾಗೆ ಎರಡನೇ ಸಾರಿ ಅವನಿಗೆ ಪ್ರತ್ಯಕ್ಷನಾದನು.

1 ದಿನವೃತ್ತಾಂತ 16:39

ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ

1 ದಿನವೃತ್ತಾಂತ 21:29

ಅರಣ್ಯ ದಲ್ಲಿ ಮೋಶೆಯು ಮಾಡಿದ ಕರ್ತನ ಗುಡಾರವೂ ದಹನಬಲಿಪೀಠವೂ ಆ ಕಾಲದಲ್ಲಿ ಗಿಬ್ಯೋನಿನ ಉನ್ನತ ಸ್ಥಳದಲ್ಲಿ ಇದ್ದವು.ಆದರೆ ದಾವೀದನು ದೇವರ ಹತ್ತಿರ ವಿಚಾರಿಸಲು ಅದರ ಬಳಿಗೆ ಹೋಗ ಲಾರದೆ ಇದ್ದನು; ಯಾಕಂದರೆ ಅವನು ಕರ್ತನ ದೂತನ ಕತ್ತಿಯ ನಿಮಿತ್ತ ಹೆದರಿದನು.

2 ದಿನವೃತ್ತಾಂತ 1:2

ಸೊಲೊಮೋ ನನು ಸಮಸ್ತ ಇಸ್ರಾಯೇಲ್ಯರೊಡನೆಯೂ ಸಹಸ್ರ ಶತಾಧಿಪತಿಗಳೊಡನೆಯೂ ನ್ಯಾಯಾಧಿಪತಿಗಳೊ ಡನೆಯೂ ಪ್ರಧಾನ ಪಿತೃಗಳೊಡನೆಯೂ ಇಸ್ರಾಯೇಲಿನಲ್ಲಿರುವ ಸಮಸ್ತ ಪ್ರಭುಗಳೊಡನೆಯೂ ಮಾತ ನಾಡಿದನು.

2 ದಿನವೃತ್ತಾಂತ 1:3

ಹೀಗೆ ಅವನು ಅವನ ಸಂಗಡ ಸಮಸ್ತ ಸಭೆಯವರು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳಕ್ಕೆ ಹೋದರು. ಕರ್ತನ ಸೇವಕನಾದ ಮೋಶೆಯು ಅರಣ್ಯ ದಲ್ಲಿ ಮಾಡಿದ ದೇವರ ಸಭೆಯ ಗುಡಾರವು ಅಲ್ಲಿತ್ತು.

2 ದಿನವೃತ್ತಾಂತ 1:6

ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಕರ್ತನ ಮುಂದೆ ಇರುವ ತಾಮ್ರಪೀಠದ ಬಳಿಗೆ ಹೋಗಿ ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.

2 ದಿನವೃತ್ತಾಂತ 7:5

ಅರಸನಾದ ಸೊಲೊ ಮೋನನು ಇಪ್ಪತ್ತೆರಡು ಸಾವಿರ ಎತ್ತುಗಳನ್ನೂ ಲಕ್ಷದ ಇಪ್ಪತ್ತುಸಾವಿರ ಕುರಿಗಳನ್ನೂ ಬಲಿಯಾಗಿ ಅರ್ಪಿಸಿ ದನು. ಹೀಗೆಯೇ ಅರಸನೂ ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆಮಾಡಿದರು.

2 ದಿನವೃತ್ತಾಂತ 29:32

ಸಭೆಯು ತಂದ ದಹನ ಬಲಿಗಳ ಲೆಕ್ಕ ವೇನಂದರೆ: ಎಪ್ಪತ್ತು ಹೋರಿಗಳು, ನೂರು ಟಗರು ಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಕರ್ತನಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು.

2 ದಿನವೃತ್ತಾಂತ 30:24

ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪರಿಶುದ್ಧ ಮಾಡಿ ಕೊಂಡರು.

ಯೆಶಾಯ 40:16

ಲೆಬ ನೋನು ಸುಡುವದಕ್ಕೆ ಸಾಲವು ಅದರ ಮೃಗಗಳು ಬಲಿಗೆ (ಯಜ್ಞಕ್ಕೆ, ಹೋಮಕ್ಕೆ) ಸಾಲವು.

ಮೀಕ 6:6

ನಾನು ಯಾವದರೊಂದಿಗೆ ಕರ್ತನ ಮುಂದೆ ಬರಲಿ? ಯಾವದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಸಂಗಡವೂ ಒಂದು ವರುಷದ ಕರುಗಳ ಸಂಗಡವೂ ಆತನ ಮುಂದೆ ಬರಲೋ?

Interlinear

Choose Theme