Home Bibles 1 ದಿನವೃತ್ತಾಂತ 13:5 · ಕನ್ನಡ ಬೈಬಲ್
1 ದಿನವೃತ್ತಾಂತ 13:5 · ಕನ್ನಡ ಬೈಬಲ್

ಹೀಗೆ ದೇವರ ಮಂಜೂಷವನ್ನು ಕಿರ್ಯತ್ಯಾರೀ ಮಿನಿಂದ ತರುವದಕ್ಕೆ ದಾವೀದನು ಐಗುಪ್ತದ ಶೀಹೋರ್‌ ಮೊದಲುಗೊಂಡು ಹಮಾತಿನ ಪ್ರದೇ ಶದ ವರೆಗೆ ಇರುವ ಸಮಸ್ತ ಇಸ್ರಾಯೇಲ್ಯರನ್ನು ಕೂಡಿಸಿ ದನು.

Cross references

ಅಂಕೆಗಳ ಪುಸ್ತಕ 34:5

ಮೇರೆ ಅಚ್ಮೋನಿನಿಂದ ಐಗುಪ್ತದ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು.

ಅಂಕೆಗಳ ಪುಸ್ತಕ 34:8

ಸಾಲು ಮಾಡಿಕೊಂಡು ಹೋರ್‌ ಪರ್ವತದಿಂದ ಹಮಾತಿನ ಪ್ರದೇಶದ ವರೆಗೆ ಸಾಲು ಮಾಡಿರಿ; ಮೇರೆಯು ಚೆದಾದಿಗೆ ಹೊರಟು

ಯೆಹೋಶುವ 13:3

ಗಾಜದವರೂ ಅಷ್ಡೋದ್ಯರೂ ಅಷ್ಕೆಲೋನ್ಯರೂ ಗಿತ್ತಿಯರೂ ಎಕ್ರೋನಿಯರೂ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ಅವ್ವೀಯರ ಸೀಮೆ;

1 ಸಮುವೇಲ 6:21

ಅವರು ಕಿರ್ಯತ್ಯಾರೀಮಿನ ನಿವಾಸಿಗಳಿಗೆ ದೂತ ರನ್ನು ಕಳುಹಿಸಿ--ಫಿಲಿಷ್ಟಿಯರು ಕರ್ತನ ಮಂಜೂಷ ವನ್ನು ತಿರಿಗಿ ಕಳುಹಿಸಿದ್ದಾರೆ; ನೀವು ಇಳಿದು ಬಂದು ಅದನ್ನು ನಿಮ್ಮ ಬಳಿಗೆ ತಕ್ಕೊಂಡು ಹೋಗಿರಿ ಎಂದು ಹೇಳಿದರು.

1 ಸಮುವೇಲ 7:1

ಕಿರ್ಯತ್ಯಾರೀಮಿನ ಮನುಷ್ಯರು ಬಂದು ಕರ್ತನ ಮಂಜೂಷವನ್ನು ತಕ್ಕೊಂಡು ಗುಡ್ಡದ ಮೇಲೆ ಇರುವ ಅಬೀನಾದಾಬನ ಮನೆಯಲ್ಲಿ ತಂದಿಟ್ಟು ಕರ್ತನ ಮಂಜೂಷವನ್ನು ಕಾಯುವದ ಕ್ಕೋಸ್ಕರ ಅವನ ಕುಮಾರನಾದ ಎಲ್ಲಾಜಾರನನ್ನು ಪ್ರತಿಷ್ಠಿಸಿದರು.

1 ಸಮುವೇಲ 7:2

ಮಂಜೂಷವು ಕಿರ್ಯತ್ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರುಷ ಇದ್ದಾಗ ಇಸ್ರಾಯೇಲ್‌ ಮನೆತನದವರೆಲ್ಲರು ಕರ್ತನಿಗೋ ಸ್ಕರ ಗೋಳಾಡುತ್ತಿದ್ದರು.

2 ಸಮುವೇಲ 6:1

ದಾವೀದನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಮೂವತ್ತು ಸಾವಿರ ಜನರನ್ನು ಕೂಡಿಸಿ ಕೊಂಡು ಎದ್ದು ತನ್ನ ಸಂಗಡ ಇದ್ದ ಎಲ್ಲಾ ಜನರನ್ನು ಕರಕೊಂಡು

1 ಅರಸುಗಳು 4:21

ಇದಲ್ಲದೆ ಸೊಲೊಮೋನನು ನದಿ ಮೊದಲು ಗೊಂಡು ಫಿಲಿಷ್ಟಿಯರ ದೇಶವನ್ನು ಹಾದು ಐಗುಪ್ತದ ಮೇರೆಯ ವರೆಗೂ ಇರುವ ಸಮಸ್ತ ರಾಜ್ಯಗಳ ಮೇಲೆ ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳಲ್ಲೆಲ್ಲಾ ಕಾಣಿಕೆಗಳನ್ನು ತಂದು ಅವನನ್ನು ಸೇವಿಸುತ್ತಾ ಇದ್ದರು.

1 ಅರಸುಗಳು 8:65

ಅದೇ ಕಾಲದಲ್ಲಿ ಸೊಲೊಮೋನನೂ ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತದ ನದಿಯ ಮಟ್ಟಿಗೂ ಇರುವ ಮಹಾಸಭೆ ಯಾದ ಸಮಸ್ತ ಇಸ್ರಾಯೇಲ್ಯರೂ ನಮ್ಮ ದೇವರಾದ ಕರ್ತನ ಮುಂದೆ ಏಳೇಳು ಹದಿನಾಲ್ಕು ದಿವಸ ಹಬ್ಬವನ್ನು ಮಾಡಿದರು.ಎಂಟನೇ ದಿನದಲ್ಲಿ ಅವನು ಜನರಿಗೆ ಅಪ್ಪಣೆಯನ್ನು ಕೊಟ್ಟನು. ಆಗ ಅವರು ಅರಸನನ್ನು ಆಶೀರ್ವದಿಸಿ ಕರ್ತನು ತನ್ನ ಸೇವಕನಾದ ದಾವೀದನಿ ಗೋಸ್ಕರವೂ ತನ್ನ ಜನರಾದ ಇಸ್ರಾಯೇಲ್ಯರಿಗೋಸ್ಕ ರವೂ ಮಾಡಿದ ಸಮಸ್ತ ಉಪಕಾರದ ನಿಮಿತ್ತ ಸಂತೋಷಪಟ್ಟು ಹೃದಯದಲ್ಲಿ ಆನಂದವುಳ್ಳವರಾಗಿ ತಮ್ಮ ತಮ್ಮ ಡೇರೆಗಳಿಗೆ ಹೋದರು.

2 ಅರಸುಗಳು 25:21

ಬಾಬೆಲಿನ ಅರಸನು ಹಮಾತ್‌ ರಿಬ್ಲ ದಲ್ಲಿ ಅವರನ್ನು ಹೊಡೆದು ಕೊಂದುಹಾಕಿದನು. ಈ ಪ್ರಕಾರವೇ ಯೆಹೂದ್ಯರು ತಮ್ಮ ದೇಶದಲ್ಲಿಂದ ಸೆರೆ ಯಾಗಿ ಒಯ್ಯಲ್ಪಟ್ಟರು.

1 ದಿನವೃತ್ತಾಂತ 13:6

ಆಗ ದಾವೀದನೂ ಸಮಸ್ತ ಇಸ್ರಾಯೇಲೂ ಕರ್ತನ ನಾಮ ಇಡಲ್ಪಟ್ಟ ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಕರ್ತನಾದ ದೇವರ ಮಂಜೂಷವನ್ನು ಅಲ್ಲಿಂದ ತಕ್ಕೊಂಡು ಬರಲು ಯೆಹೂದಕ್ಕೆ ಸೇರಿದ ಕಿರ್ಯತ್ಯಾರೀಮಿನ ಬಾಳಾಕ್ಕೆ ಹೋದರು.

1 ದಿನವೃತ್ತಾಂತ 15:3

ದಾವೀ ದನು ಕರ್ತನ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತಕ್ಕೊಂಡು ಬರುವ ನಿಮಿತ್ತ ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲನ್ನು ಕೂಡಿಸಿ ಬರಮಾಡಿದನು.

ಯೆರೆಮಿಯ 2:18

ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ?

Interlinear

Choose Theme