ಇದಲ್ಲದೆ ಸೊಲೊಮೋನನು ನದಿ ಮೊದಲು ಗೊಂಡು ಫಿಲಿಷ್ಟಿಯರ ದೇಶವನ್ನು ಹಾದು ಐಗುಪ್ತದ ಮೇರೆಯ ವರೆಗೂ ಇರುವ ಸಮಸ್ತ ರಾಜ್ಯಗಳ ಮೇಲೆ ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳಲ್ಲೆಲ್ಲಾ ಕಾಣಿಕೆಗಳನ್ನು ತಂದು ಅವನನ್ನು ಸೇವಿಸುತ್ತಾ ಇದ್ದರು.
Cross references
ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್ ನದಿಯ ವರೆಗೆ ವಾಸಿಸುವ
ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.
ನೀವು ಹೆಜ್ಜೆಯಿಡುವ ಸ್ಥಳ ವೆಲ್ಲಾ ನಿಮ್ಮದಾಗುವದು; ಅರಣ್ಯದಿಂದ ಲೆಬನೋನಿನ ವರೆಗೂ ಯೂಫ್ರೇಟೀಸ್ ನದಿಯಿಂದ ಪಶ್ಚಿಮ ಸಮುದ್ರದ ಅಂತ್ಯದ ವರೆಗೂ ನಿಮ್ಮ ಮೇರೆಯಾಗಿ ರುವದು.
ಅರಣ್ಯವೂ ಈ ಲೆಬನೋನೂ ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯ ವರೆಗೆ ಇರುವ ಹಿತ್ತಿಯರ ದೇಶವೆಲ್ಲಾ ಸೂರ್ಯನು ಅಸ್ತಮಿಸುವ ಕಡೆಗೆ ಮಹಾಸಮುದ್ರದ ವರೆಗೂ ನಿಮ್ಮ ಮೇರೆಯಾಗಿರುವದು.
ಆದರೆ ಬೆಲಿಯಾಳ ಮಕ್ಕಳು--ಇವನು ಹೇಗೆ ನಮ್ಮನ್ನು ರಕ್ಷಿಸುವನು ಎಂದು ಅವನನ್ನು ತಿರಸ್ಕರಿಸಿ ದರು; ಅವನಿಗೆ ಕಾಣಿಕೆಗಳನ್ನು ತಕ್ಕೊಂಡು ಬರಲಿಲ್ಲ. ಆದರೆ ಅವನು ಕೇಳದವನ ಹಾಗೆ ಇದ್ದನು.
ನದಿಯ ಈಚೆ ಯಲ್ಲಿ ತಿಫ್ಸಹು ಮೊದಲುಗೊಂಡು ಗಾಜದ ವರೆಗೂ ನದಿಯ ಈಚೆಯಲ್ಲಿರುವ ಸಮಸ್ತ ಅರಸುಗಳ ಮೇಲೆ ಅವನು ಅಧಿಕಾರಿಯಾಗಿದ್ದನು. ಇದಲ್ಲದೆ ಸುತ್ತಲಿ ರುವ ಸಮಸ್ತ ದಿಕ್ಕಿನಲ್ಲಿ ಅವನಿಗೆ ಸಮಾಧಾನವಾಗಿತ್ತು.
ಅಶ್ಶೂರಿನ ಅರಸನಾದ ಶಲ್ಮನೆಸೆರನು ಅವನ ಮೇಲೆ ಬಂದದ್ದರಿಂದ ಹೋಶೇಯನು ಅವನಿಗೆ ಸೇವಕ ನಾಗಿ ಕಪ್ಪವನ್ನು ಕೊಟ್ಟನು.
ಅವನು ನದಿ ಮೊದಲುಗೊಂಡು ಫಿಲಿಷ್ಟಿಯರ ದೇಶವನ್ನು ಹಿಡಿದು ಐಗುಪ್ತದ ಮೇರೆಯ ವರೆಗೂ ಇರುವ ಸಮಸ್ತ ಅರಸುಗಳ ಮೇಲೆ ಆಳುತ್ತಾ ಇದ್ದನು.
ಆದದರಿಂದ ಕರ್ತನು ರಾಜ್ಯವನ್ನು ಅವನ ಕೈಯಲ್ಲಿ ಸ್ಥಿರಪಡಿಸಿದನು. ಯೆಹೂದ ವೆಲ್ಲವೂ ಯೆಹೋಷಾಫಾಟನಿಗೆ ಕಾಣಿಕೆಯನ್ನು ಕೊಟ್ಟ ದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ಅಧಿಕ ವಾಗಿ ದೊರಕಿತು.
ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು.
ನದಿಯ ಆಚೆಯಲ್ಲಿರುವ ಎಲ್ಲಾ ಸ್ಥಳಗಳ ಮೇಲೆ ಆಳುತ್ತಾ ಇದ್ದ ಯೆರೂಸಲೇಮಿನ ಪರಾಕ್ರಮಶಾಲಿಗಳಾದ ಅರಸು ಗಳು ಇದ್ದರು; ಸುಂಕವೂ ಕಪ್ಪವೂ ತೆರಿಗೆಯೂ ಅವ ರಿಗೆ ಕೊಡಲ್ಪಟ್ಟವು ಎಂದು ಕಾಣಿಸಿತು.
ಯೆರೂಸಲೇಮಿನಲ್ಲಿರುವ ನಿನ್ನ ಮಂದಿ ರದ ನಿಮಿತ್ತ ಅರಸುಗಳು ನಿನಗೆ ಕಾಣಿಕೆಗಳನ್ನು ತರು ವರು.
ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಆತನು ಆಳುವನು.
ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ.ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
ನನಗಿಂತ ಹೆಚ್ಚಾಗಿ ಯಾವನು ತಿನ್ನಲು ಶಕ್ತನು? ಯಾವನು ಅದಕ್ಕೆ ಆತುರ ಪಡಶಕ್ತನು?ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.