ಮಂಜೂಷವು ಕಿರ್ಯತ್ಯಾರೀಮಿನಲ್ಲಿ ಬಂದು ಬಹಳ ದಿವಸಗಳು ಅಂದರೆ ಇಪ್ಪತ್ತು ವರುಷ ಇದ್ದಾಗ ಇಸ್ರಾಯೇಲ್ ಮನೆತನದವರೆಲ್ಲರು ಕರ್ತನಿಗೋ ಸ್ಕರ ಗೋಳಾಡುತ್ತಿದ್ದರು.
Cross references
ಕರ್ತನ ದೂತನು ಈ ಮಾತುಗಳನ್ನು ಇಸ್ರಾಯೇಲ್ ಮಕ್ಕಳೆಲ್ಲರಿಗೆ ಹೇಳುವಾಗ ಜನರು ತಮ್ಮ ಸ್ವರವೆತ್ತಿ ಅತ್ತರು.
ಹೀಗೆ ದೇವರ ಮಂಜೂಷವನ್ನು ಕಿರ್ಯತ್ಯಾರೀ ಮಿನಿಂದ ತರುವದಕ್ಕೆ ದಾವೀದನು ಐಗುಪ್ತದ ಶೀಹೋರ್ ಮೊದಲುಗೊಂಡು ಹಮಾತಿನ ಪ್ರದೇ ಶದ ವರೆಗೆ ಇರುವ ಸಮಸ್ತ ಇಸ್ರಾಯೇಲ್ಯರನ್ನು ಕೂಡಿಸಿ ದನು.
ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ.
ಹಿಂಜರಿದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಹಿಂಜರಿಯುವಿಕೆಯನ್ನು ನಾನು ಸ್ವಸ್ಥಮಾಡುವೆನು ಎಂದು ಕರ್ತನು ಅನ್ನುತ್ತಾನೆ. ಇಗೋ, ನಿನ್ನ ಬಳಿಗೆ ಬರುತ್ತೇವೆ; ನೀನು ದೇವರಾದ ನಮ್ಮ ಕರ್ತನಾಗಿದ್ದೀ.
ಹಾಗೆ ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿದ್ದ ಹೊಲವನ್ನು ಕೊಂಡುಕೊಂಡು ಅವನಿಗೆ ಹದಿನೇಳು ಬೆಳ್ಳಿ ಶೇಕೆಲುಗಳನ್ನು ತೂಕ ಮಾಡಿ ಕ್ರಯಕೊಟ್ಟೆನು.
ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.
ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.