Home Bibles ಜೆಕರ್ಯ 4:2 · ಕನ್ನಡ ಬೈಬಲ್
ಜೆಕರ್ಯ 4:2 · ಕನ್ನಡ ಬೈಬಲ್

ಒಬ್ಬನನ್ನು ನಿದ್ರೆಯಿಂದ ಎಬ್ಬಿಸುವಂತೆ ನನ್ನನ್ನು ಎಬ್ಬಿಸಿದನು. ಆಗ ಅವನು ನನಗೆ--ನೀನು ಏನು ನೋಡುತ್ತೀ ಅಂದನು. ಅದಕ್ಕೆ--ನಾನು ನೋಡಿದ್ದೇನೆ; ಇಗೋ, ಒಂದು ದೀಪಸ್ತಂಭವು, ಅದು ಎಲ್ಲಾ ಬಂಗಾರದ್ದೇ; ಅದರ ತಲೆಯ ಮೇಲೆ ಪಾತ್ರೆ ಉಂಟು; ಅದರ ಮೇಲೆ ಅದರ ಏಳು ದೀಪಗಳುಂಟು.

Cross references

ನಿರ್ಗಮಕಾಂಡ 25:31

ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು.

ನಿರ್ಗಮಕಾಂಡ 37:17

ಅವನು ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿದನು; ಆ ದೀಪಸ್ತಂಭವನ್ನು ಅವನು ನಕ್ಷೆಯ ಕೆಲಸಮಾಡಿದ ಅಚ್ಚಿನ ಮೇಲೆ ಬಡಿದು ತಯಾರಿಸಿದನು.

ನಿರ್ಗಮಕಾಂಡ 40:24

ಸಭೆಯ ಡೇರೆಯಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು.

1 ಅರಸುಗಳು 7:49

ಎಡ ಪಾರ್ಶ್ವದಲ್ಲಿ ಐದು, ಅಪರಂಜಿಯ ದೀಪ ಸ್ತಂಭಗಳು, ಚಿನ್ನದ ಅದರ ಹೂವುಗಳು, ದೀಪಗಳು, ಚಿಮಟಗಳು,

1 ದಿನವೃತ್ತಾಂತ 28:15

ಬಂಗಾರದ ದೀಪಸ್ತಂಭಗಳಿಗೋಸ್ಕ ರವೂ ಅದರ ಬಂಗಾರದ ದೀಪಗಳಿಗೋಸ್ಕರವೂ ಒಂದೊಂದು ಸ್ತಂಭಕ್ಕೋಸ್ಕರ ತೂಕಮಾಡಿ ಕೊಟ್ಟನು. ಹಾಗೆಯೇ ಬೆಳ್ಳಿಯ ದೀಪಸ್ತಂಭಗಳಿಗೋಸ್ಕರ ದೀಪ ಸ್ತಂಭಕ್ಕೂ ಅದರ ದೀಪಗಳಿಗೂ ಒಂದೊಂದು ದೀಪ ಸ್ತಂಭದ ಕೆಲಸದ ಪ್ರಕಾರ ತೂಕಮಾಡಿ ಕೊಟ್ಟನು.

2 ದಿನವೃತ್ತಾಂತ 4:7

ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.

2 ದಿನವೃತ್ತಾಂತ 4:20

ಶುದ್ಧ ಬಂಗಾರವಾದ ದೈವೋಕ್ತಿಯ ಸ್ಥಾನದ ಮುಂದೆ ನ್ಯಾಯದ ಪ್ರಕಾರ ಹತ್ತಿರದ ದೀಪ ಸ್ತಂಭಗಳನ್ನೂ

2 ದಿನವೃತ್ತಾಂತ 13:11

ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.

ಸಭಾಪ್ರಸಂಗಿ 12:6

ಬೆಳ್ಳಿಯ ಸರಿಗೆ ಬಿಚ್ಚಲ್ಪಡುವದು; ಇಲ್ಲವೆ ಬಂಗಾರದ ಬಟ್ಟಲು ಒಡೆದು ಹೋಗುವದು. ಮಣ್ಣಿನ ಮಡಿಕೆಯು ಬುಗ್ಗೆಯ ಬಳಿಯಲ್ಲಿ ಒಡೆದು ಹೋಗುವದು. ಇಲ್ಲವೆ ಕೊಳದ ಹತ್ತಿರ ರಾಟೆ ಮುರಿಯುವದು.

ಯೆರೆಮಿಯ 1:11

ಇದಲ್ಲದೆ ಕರ್ತನ ವಾಕ್ಯವು ನನಗೆ--ಯೆರೆವಿಾ ಯನೇ, ನೀನು ಏನು ನೋಡುತ್ತೀ ಎಂದು ಕೇಳಿದ್ದಕ್ಕೆ ನಾನು--ಬಾದಾಮಿ ಮರದ ಕೋಲನ್ನು ನೋಡುತ್ತೇನೆ ಅಂದೆನು.

ಆಮೋಸ 7:8

ಕರ್ತನು ನನಗೆ--ಆಮೋಸನೇ, ಏನನ್ನು ನೋಡುತ್ತಿರುವೆ ಎಂದಾಗ ನಾನು--ನೂಲುಗುಂಡು ಎನ್ನಲು ಕರ್ತನು ಹೇಳಿದ್ದೇನಂದರೆ--ಇಗೋ, ನಾನು ನನ್ನ ಜನರಾದ ಇಸ್ರಾಯೇಲ್ಯರ ಮಧ್ಯದಲ್ಲಿ ನೂಲು ಗುಂಡನ್ನು ಇಡುತ್ತೇನೆ; ಇನ್ನು ಮೇಲೆ ಅವರನ್ನು ದಾಟಿಹೋಗುವದಿಲ್ಲ.

ಜೆಕರ್ಯ 5:2

ಆಗ ಅವನು ನನಗೆ--ಏನು ನೋಡುತ್ತೀ ಅಂದಾಗ ನಾನು--ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು.

ಮತ್ತಾಯ 5:14

ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಇರುವ ಪಟ್ಟಣವು ಮರೆಯಾಗಿರಲಾರದು.

ಪ್ರಕಟನೆ 1:12

ನನ್ನ ಸಂಗಡ ಮಾತ ನಾಡುತ್ತಿದ್ದ ಶಬ್ದವನ್ನು ನೋಡುವದಕ್ಕಾಗಿ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಚಿನ್ನದ ಏಳು ದೀಪಸ್ತಂಭ ಗಳನ್ನು ನಾನು ನೋಡಿದೆನು.

ಪ್ರಕಟನೆ 1:20

ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಆ ಏಳು ನಕ್ಷತ್ರಗಳು ಆ ಏಳು ಸಭೆಗಳ ದೂತರು; ನೀನು ಕಂಡ ಆ ಏಳು ದೀಪಸ್ತಂಭಗಳು ಆ ಏಳು ಸಭೆಗಳು ಎಂದು ಹೇಳಿದನು.

ಪ್ರಕಟನೆ 4:5

ಸಿಂಹಾಸನದೊಳಗಿಂದ ಮಿಂಚುಗಳೂ ಗುಡುಗುಗಳೂ ಶಬ್ದಗಳೂ ಹೊರಟವು; ಅದರ ಮುಂದೆ ದೇವರ ಏಳು ಆತ್ಮಗಳಾಗಿರುವ ಏಳು ಬೆಂಕಿಯ ದೀಪಗಳು ಉರಿಯುತ್ತಿದ್ದವು.

Interlinear

Choose Theme