Home Bibles 1 ದಿನವೃತ್ತಾಂತ 28:15 · ಕನ್ನಡ ಬೈಬಲ್
1 ದಿನವೃತ್ತಾಂತ 28:15 · ಕನ್ನಡ ಬೈಬಲ್

ಬಂಗಾರದ ದೀಪಸ್ತಂಭಗಳಿಗೋಸ್ಕ ರವೂ ಅದರ ಬಂಗಾರದ ದೀಪಗಳಿಗೋಸ್ಕರವೂ ಒಂದೊಂದು ಸ್ತಂಭಕ್ಕೋಸ್ಕರ ತೂಕಮಾಡಿ ಕೊಟ್ಟನು. ಹಾಗೆಯೇ ಬೆಳ್ಳಿಯ ದೀಪಸ್ತಂಭಗಳಿಗೋಸ್ಕರ ದೀಪ ಸ್ತಂಭಕ್ಕೂ ಅದರ ದೀಪಗಳಿಗೂ ಒಂದೊಂದು ದೀಪ ಸ್ತಂಭದ ಕೆಲಸದ ಪ್ರಕಾರ ತೂಕಮಾಡಿ ಕೊಟ್ಟನು.

Cross references

ನಿರ್ಗಮಕಾಂಡ 25:31

ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು.

1 ಅರಸುಗಳು 7:19

ದ್ವಾರಾಂಗಳದ ಮುಂದಿರುವ ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಟಗಳ ಕೆಲಸವಾಗಿ ನಾಲ್ಕು ಮೊಳ ಎತ್ತರವಾಗಿದ್ದವು.

2 ದಿನವೃತ್ತಾಂತ 4:7

ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.

ಜೆಕರ್ಯ 4:2

ಒಬ್ಬನನ್ನು ನಿದ್ರೆಯಿಂದ ಎಬ್ಬಿಸುವಂತೆ ನನ್ನನ್ನು ಎಬ್ಬಿಸಿದನು. ಆಗ ಅವನು ನನಗೆ--ನೀನು ಏನು ನೋಡುತ್ತೀ ಅಂದನು. ಅದಕ್ಕೆ--ನಾನು ನೋಡಿದ್ದೇನೆ; ಇಗೋ, ಒಂದು ದೀಪಸ್ತಂಭವು, ಅದು ಎಲ್ಲಾ ಬಂಗಾರದ್ದೇ; ಅದರ ತಲೆಯ ಮೇಲೆ ಪಾತ್ರೆ ಉಂಟು; ಅದರ ಮೇಲೆ ಅದರ ಏಳು ದೀಪಗಳುಂಟು.

ಜೆಕರ್ಯ 4:11

ಆಗ ನಾನು ಉತ್ತರ ಕೊಟ್ಟು ಅವನಿಗೆ--ದೀಪಸ್ತಂಭದ ಬಲಗಡೆಯಲ್ಲಿಯೂ ಎಡಗಡೆಯಲ್ಲಿಯೂ ಇರುವ ಈ ಎರಡು ಇಪ್ಪೇಮರಗಳು ಏನು ಅಂದೆನು.

ಪ್ರಕಟನೆ 1:12

ನನ್ನ ಸಂಗಡ ಮಾತ ನಾಡುತ್ತಿದ್ದ ಶಬ್ದವನ್ನು ನೋಡುವದಕ್ಕಾಗಿ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಚಿನ್ನದ ಏಳು ದೀಪಸ್ತಂಭ ಗಳನ್ನು ನಾನು ನೋಡಿದೆನು.

ಪ್ರಕಟನೆ 1:20

ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಮರ್ಮವನ್ನು ಬರೆ. ಆ ಏಳು ನಕ್ಷತ್ರಗಳು ಆ ಏಳು ಸಭೆಗಳ ದೂತರು; ನೀನು ಕಂಡ ಆ ಏಳು ದೀಪಸ್ತಂಭಗಳು ಆ ಏಳು ಸಭೆಗಳು ಎಂದು ಹೇಳಿದನು.

Interlinear

Interlinear data is unavailable for this verse.

Choose Theme