ನಾನು ನನ್ನ ಪ್ರಿಯನಿಗೆ ತೆರೆಯಲು ಎದ್ದಾಗ ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವೂ ನನ್ನ ಬೆರಳುಗಳಿಂದ ಸೋರುವ ಬೋಳವೂ ಸುರಿಯಿತು.
Cross references
ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು?
ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ.
ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು.
ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ.
ನೀವಂತೂ ತಮ್ಮ ಒಡೆಯನು ಮದುವೆಯಿಂದ ಯಾವಾಗ ಹಿಂದಿರುಗುವನೋ ಎಂದು ಕಾಯುವ ಮತ್ತು ಅವನು ಬಂದು ತಟ್ಟಿದಾಗ ತಕ್ಷಣವೇ ಅವನಿಗೆ ತೆರೆಯುವ ಮನುಷ್ಯರಂತೆ ಇರ್ರಿ.
ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.
ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.
ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ನಂಬಿಕೆಯ ಮೂಲಕ ವಾಸಿಸುವಂತೆಯೂ ನೀವು ಪ್ರೀತಿಯಲಿ ಬೇರೂರಿ ನೆಲೆಗೊಂಡು ನಿಂತು
ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು.