Home Bibles ☰ Books ಪರಮಗೀತ 2:5 · ಕನ್ನಡ ಬೈಬಲ್
ಪರಮಗೀತ 2:5 · ಕನ್ನಡ ಬೈಬಲ್

ದ್ರಾಕ್ಷೆಯ ಉಂಡಿಗಳಿಂದ ನನ್ನನ್ನು ಹಿಡಿದಿರು; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸು; ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.

Cross references

2 ಸಮುವೇಲ 6:19

ಸ್ತ್ರೀ ಪುರುಷರಲ್ಲಿ ಒಬ್ಬೊಬ್ಬರಿಗೆ ಒಂದು ರೊಟ್ಟಿ ತುಂಡನ್ನೂ ಒಂದು ದೊಡ್ಡ ತುಂಡು ಮಾಂಸವನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಕೊಟ್ಟನು. ತರುವಾಯ ಜನರೆ ಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.

2 ಸಮುವೇಲ 13:1

ತರುವಾಯ ಏನಾಯಿತಂದರೆ, ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸೌಂದರ್ಯವತಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗನಾದ ಅಮ್ನೋನನು ಪ್ರೀತಿಮಾಡಿದನು.

1 ದಿನವೃತ್ತಾಂತ 16:3

ಇಸ್ರಾಯೇಲಿನಲ್ಲಿರುವ ಸ್ತ್ರೀ ಪುರುಷರಾದ ಸಮಸ್ತರಿಗೂ ಒಬ್ಬೊಬ್ಬರಿಗೆ ಒಂದೊಂದು ರೊಟ್ಟಿಯನ್ನೂ ಒಂದು ತುಂಡು ಮಾಂಸವನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಕೊಟ್ಟನು.

ಕೀರ್ತನೆಗಳು 4:6

ನಮಗೆ ಒಳ್ಳೇದನ್ನು ಮಾಡುವವರು ಯಾರೆಂದು ಹೇಳುವವರು ಅನೇಕರು. ಕರ್ತನೇ, ನಿನ್ನ ಮುಖದ ಬೆಳಕನ್ನು ನಮ್ಮ ಮೇಲೆ ಪ್ರಕಾಶಗೊಳಿಸು.

ಕೀರ್ತನೆಗಳು 42:1

ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.

ಕೀರ್ತನೆಗಳು 63:1

ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.

ಕೀರ್ತನೆಗಳು 63:8

ನನ್ನ ಪ್ರಾಣವು ನಿನ್ನನ್ನು ಹಿಂಬಾಲಿಸಿ ಬರುತ್ತದೆ; ನಿನ್ನ ಬಲಗೈ ನನ್ನನ್ನು ಗಟ್ಟಿ ಯಾಗಿ ಎತ್ತಿಹಿಡಿಯುತ್ತದೆ.

ಕೀರ್ತನೆಗಳು 119:130

ನಿನ್ನ ವಾಕ್ಯಗಳ ಪ್ರವೇಶವು ಬೆಳಕನ್ನು ಕೊಟ್ಟು ಮೂರ್ಖರಿಗೆ ಗ್ರಹಿಕೆಯನ್ನು ಉಂಟುಮಾಡುತ್ತದೆ.

ಪರಮಗೀತ 5:8

ನಿಮಗೆ ಆಣೆ ಇಡುತ್ತೇನೆ, ಓ ಯೆರೂಸಲೇಮಿನ ಕುಮಾರ್ತೆ ಯರೇ--ನೀವು ನನ್ನ ಪ್ರಿಯನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ.

ಪರಮಗೀತ 7:8

ನಾನು ಖರ್ಜೂರದ ಮರದ ಬಳಿಗೆ ಹೋಗಿ ಅದರ ಗರಿಗಳನ್ನು ಹಿಡುಕೊಳ್ಳುವೆ ಅಂದುಕೊಂಡೆನು. ಇದಲ್ಲದೆ ಈಗ ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲು ಗಳ ಹಾಗೆಯೂ ನಿನ್ನ ಮೂಗಿನ ವಾಸನೆಯು ಸೇಬುಹಣ್ಣಿನ ಹಾಗೆಯೂ ಇರುವವು.

ಯೆಶಾಯ 26:8

ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.

ಹೊಶೇಯ 3:1

ತರುವಾಯ ಕರ್ತನು ನನಗೆ--ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು ದ್ರಾಕ್ಷೆಯ ಮದ್ಯ ಪಾತ್ರೆಗಳನ್ನು ಪ್ರೀತಿಸುವ ಇಸ್ರಾ ಯೇಲಿನ ಮಕ್ಕಳನ್ನು ಕರ್ತನು ಪ್ರೀತಿಸುವ ಪ್ರಕಾರ ಅವಳು ವ್ಯಭಿಚಾರಿಣಿಯಾಗಿದ್ದರೂ ನೀನು ಸ್ನೇಹಿತ ನಿಂದ ಪ್ರೀತಿಮಾಡಲ್ಪಟ್ಟ ಸ್ತ್ರೀಯನ್ನು ಪ್ರೀತಿಮಾಡು ಎಂದು ಹೇಳಲು

ಲೂಕ 24:32

ಆಗ ಅವರು ಒಬ್ಬರಿಗೊಬ್ಬರು--ಆತನು ದಾರಿಯಲ್ಲಿ ನಮ್ಮ ಕೂಡ ಮಾತನಾಡುತ್ತಾ ಬರಹಗಳನ್ನು ನಮಗೆ ವಿವರಿಸಿದಾಗ ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ ಎಂದು ಅಂದುಕೊಂಡರು.

Interlinear

Choose Theme